ಉದ್ಯೋಗ ಮೇಳ-2024: ನೋಂದಣಿಯಲ್ಲಿ ಧಾರವಾಡಕ್ಕೆ 2ನೇ ಸ್ಥಾನ, ಮೊದಲ ಸ್ಥಾನ ಯಾವ ಜಿಲ್ಲೆಗೆ?
ಬೆಂಗಳೂರು, ಫೆಬ್ರವರಿ 24: ಕರ್ನಾಟಕ ರಾಜ್ಯ ಸರ್ಕಾದ ಕೌಶಲ್ಯಾಭಿವೃದ್ಧಿ ಇಲಾಖೆಯು ಬೆಂಗಳೂರಿನಲ್ಲಿ ನಿರುದ್ಯೋಗಿಗಳಾಗಿ 'ಯುವ ಸಮೃದ್ಧಿ' ಮೇಳ ಹೆಸರಿನಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ- 2024 ಹಮ್ಮಿಕೊಳ್ಳಲಾಗಿದೆ. ಇದೀಗ ಈ ಮೇಳದಲ್ಲಿ ಪಾಲ್ಗೊಳ್ಳಲು ಈವರೆಗೆ ಬರೊಬ್ಬರಿ 54 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗಾದರೆ ಅತೀ ಹೆಚ್ಚು ಮತ್ತು ಅತೀ ಕಡಿಮೆ ನೋಂದಣಿ ಮಾಡಿಕೊಂಡ ಜಿಲ್ಲೆಗಳು ಯಾವುವು? ಇಲ್ಲಿ ತಿಳಿಯಿರಿ.
ಮೇಳದಲ್ಲಿ ಪಾಲ್ಗೊಂಡು ಕೆಲಸ ಪಡೆಯಲು ನಿರುದ್ಯೋಗಿ ಅಭ್ಯರ್ಥಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆಯು (4611) ಮೂರನೇ ಸ್ಥಾನದಲ್ಲಿದೆ. ಇನ್ನೂ ಧಾರವಾಡ (4908) ಎರಡನೇ ಸ್ಥಾನದಲ್ಲಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಮೊದಲ ಸ್ಥಾನದ ಜಿಲ್ಲೆಯಲ್ಲಿ ಎಷ್ಟು ನೋಂದಣಿ
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ (7599) ಹೆಚ್ಚಿನ ನಿರುದ್ಯೋಗಿಗಳು ಉದ್ಯೋಗ ಮೇಳಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಯಾದಗಿರಿ (600) ಜಿಲ್ಲೆಯು ಕೊನೆ ಸ್ಥಾನದಲ್ಲಿದೆ. ಅಲ್ಲದೇ ಸರ್ಕಾರ ಯುವನಿಧಿಗೆ ಹೆಸರು ನೋಂದಾಯಿಸಿಕೊಂಡ ಒಂದು ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಅಭ್ಯರ್ಥಿಗಳಿಗೆ ಈ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ತಿಳಿಸಲಾಗಿದೆ.
577 ಕಂಪನಿಗಳು ಭಾಗಿ
ಈ ಮೇಳದಲ್ಲಿ 577 ಕಂಪನಿಗಳು ಭಾಗವಹಿಸಲಿವೆ. ಇದರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಇರಲಿವೆ. ಈ ಕಂಪನಿಗಳು ಎಷ್ಟು ಮಂದಿ ಸಂದರ್ಶನ ಮಾಡುತ್ತವೆ ಎಂಬ ನಿಖರ ಮಾಹಿತಿ ನೀಡಬೇಕು. ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ ಎಂಬೆಲ್ಲ ಖಚಿತ ಮಾಹಿತಿ ಒದಗಿಸಬೇಕು.
ಒಂದು ಲಕ್ಷದಷ್ಟು ಉದ್ಯೋಗಗಳು ಖಾಲಿ ಇವೆ. ಕಂಪನಿಗಳು ಸಂದರ್ಶನದಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಕನಿಷ್ಠ ವೇತನ ಕಾನೂನಿನಡಿ ವೇತನ ನೀಡಬೇಕು ಎಂದು ರಾಜ್ಯ ಸರ್ಕಾರ ತಾಕೀತು ಮಾಡಿದೆ. ಕಾಂಟ್ರ್ಯಾಕ್ಟ್, ಇಲ್ಲವೇ ಅಪ್ರೆಂಟಿಸ್ ಆಧಾರದಲ್ಲಿ ಉದ್ಯೋಗ ಕೊಟ್ಟರೆ ಅವರಿಗೆ ನಿಯಮಾವಳಿ ಸಾರ ವೇತನ ಒದಗಿಸಬೇಕು ಎಂದು ಸರ್ಕಾರ ಸೂಚಿಸಿದೆ.

ನೋಂದಣಿ ಮಾಡಿಕೊಳ್ಳುವುದು ಹೇಗೆ?
ಈ ಉದ್ಯೋಗ ಮೇಳವು ಇದೇ ಫೆಬ್ರವರಿ 26 ಮತ್ತು 27 ರಂದು ನಡೆಯಲಿದೆ. ಆಸಕ್ತರು ನೋಂದಾಣಿ ಮಾಡಿಕೊಳ್ಳಲು ಇಲಾಖೆ ಅಧಿಕೃತ ಜಾಲತಾಣ https://skillconnect.kaushalkar.com/ ಇಲ್ಲಿಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 180059 99918 ಗೆ ಸಂಪರ್ಕಿಸುವಂತೆ ಇಲಾಖೆ ತಿಳಿಸಿದೆ.












Click it and Unblock the Notifications