ನಟಿ, ಮಾಜಿ ಸಂಸದೆ ರಮ್ಯಾ ವಿರುದ್ದ ಕುಮಾರಸ್ವಾಮಿ ಗಂಭೀರ ಆರೋಪ

Posted By:
Subscribe to Oneindia Kannada

ಮಾತೆತ್ತಿದರೆ ದಾಖಲೆ ಬಿಡುಗಡೆ ಮಾಡುತ್ತೇನೆ ಎನ್ನುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ, ಸುದ್ದಿಯೇ ಅಲ್ಲದ ಸುದ್ದಿಯನ್ನು ಸದ್ದು ಮಾಡುವ ಕಲೆ ಕರಗತವಾಗಿದೆ. ಅದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಸಿದ್ದರಾಮಯ್ಯನವರ ವಾಚ್ ಪುರಾಣ.

ರಾಜ್ಯದಲ್ಲಿ ವಿಪಕ್ಷ ಮುಖಂಡರು ಬಿಜೆಪಿಯವರೋ ಅಥವಾ ಕುಮಾರಸ್ವಾಮಿಯವರೋ ಎನ್ನುವ ರೀತಿಯಲ್ಲಿ ಸುದ್ದಿಯಲ್ಲಿರುವ ಕುಮಾರಸ್ವಾಮಿ, ನಿರಂತರವಾಗಿ ತಮ್ಮ ಪ್ರಮುಖ ಎದುರಾಳಿ ಸಿದ್ದರಾಮಯ್ಯ ಮತ್ತು ಬಿಜೆಪಿಯವರ ವಿರುದ್ದ ಟೀಕಾ ಪ್ರಹಾರ ನಡೆಸುತ್ತಲೇ ಬರುತ್ತಿದ್ದಾರೆ. (ಸಿದ್ದು ಕೈಗಡಿಯಾರ ಟೈಂಲೈನ್)

ಪಕ್ಷದಲ್ಲಿನ ಅಶಿಸ್ತಿನ ಬಗ್ಗೆ ದೇವೇಗೌಡರು ಸಂಯಮ ಪಾಲಿಸಿದರೂ, ಕುಮಾರಸ್ವಾಮಿ ತನ್ನ ಖಡಕ್ ನಿರ್ಧಾರ ಮತ್ತು ಹೇಳಿಕೆಯ ಮೂಲಕ ಜಮೀರ್, ಚೆಲುವನಾರಾಯಣಸ್ವಾಮಿ ಮತ್ತು ಬಾಲಕೃಷ್ಣ ಅವರಿಗೆ ಬಿಸಿ ಮುಟ್ಟಿಸುತ್ತಲೇ ಬರುತ್ತಿದ್ದಾರೆ.['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೆ ಆರ್ ಪೇಟೆಯಲ್ಲಿ ಸೋಮವಾರ (ಜ15) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. (ಮಾಜಿ, ಹಾಲಿಗಳ ಮುಗಿಯದ ವಾಚ್ ಸಮರ)

ರಮ್ಯಾ ಅವರ ಕಾಲ್ಗುಣ ಸರಿಯಿಲ್ಲ, ಅವರು ಮಂಡ್ಯಕ್ಕೆ ಕಾಲಿಟ್ಟ ನಂತರ ರೈತರು ನಿರಂತರವಾಗಿ ಸಾವನ್ನಪ್ಪುತ್ತಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಂದೆ ಓದಿ..

ನಮ್ಮ ಪಕ್ಷ ರೈತರ ಪರವಾಗಿ

ನಮ್ಮ ಪಕ್ಷ ರೈತರ ಪರವಾಗಿ

ಕೆ ಆರ್ ಪೇಟೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಮ್ಮ ಪಕ್ಷ ನಿರಂತರವಾಗಿ ರೈತರ ಪರವಾದ ಹೋರಾಟ ಮಾಡುತ್ತಲೇ ಬರುತ್ತಿದೆ. ಇದರ ಅರಿವು ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

ರಮ್ಯಾ ಕಾಲ್ಗುಣ ಸರಿಯಿಲ್ಲ

ರಮ್ಯಾ ಕಾಲ್ಗುಣ ಸರಿಯಿಲ್ಲ

ರಮ್ಯಾ ಅವರ ಕಾಲ್ಗುಣ ಸರಿಯಿಲ್ಲ, ಅವರು ಕಾಲಿಟ್ಟ ನಂತರ ಮಂಡ್ಯದಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ಬಂದು ರೈತರ ಕಷ್ಟಸುಖ ವಿಚಾರಿಸುವುದು ಇದ್ಯಾವ ರಾಜಕೀಯ ಎಂದು ಕುಮಾರಸ್ವಾಮಿ, ರಮ್ಯಾ ಅವರನ್ನು ಪ್ರಶ್ನಿಸಿದ್ದಾರೆ.

ರೈತರ ಆತ್ಮಹತ್ಯೆಯ ಸರಣಿ

ರೈತರ ಆತ್ಮಹತ್ಯೆಯ ಸರಣಿ

ಮಂಡ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ರಮ್ಯಾ ಕಾಲಿಟ್ಟ ನಂತರ ರೈತರು ಆತ್ಮಹತ್ಯೆಯ ಸರಣಿ ಇಲ್ಲಿ ಆರಂಭವಾಯಿತು. ಇದು ಈ ಕ್ಷೇತ್ರದ ಜನತೆಗೆ ರಮ್ಯಾ ಕೊಟ್ಟ ಬಳುವಳಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ

ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದ ಕುಮಾರಸ್ವಾಮಿ, ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಏನು ಎನ್ನುವುದನ್ನು ರಾಜ್ಯದ ಜನರು ಅರಿತಿದ್ದಾರೆ. ಸಿದ್ದರಾಮಯ್ಯ ಸರಕಾರ ನಿದ್ದೆ ಮಾಡುತ್ತಿದೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಶೀರ್ವದಿಸಿ ಎಂದು ಕುಮಾರಸ್ವಾಮಿ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS State President HD Kumaraswamy statement on former MP Ramya, HDK says, farmers committing suicide in Mandya because of entry of Ramya.
Please Wait while comments are loading...