JDS Candidates list: 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿದ ಜೆಡಿಎಸ್‌, ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್‌ 19: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.

ಬುಧವಾರ ಜೆಡಿಎಸ್‌ 59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್‌ ಘೋಷಣೆ ಮಾಡಿದ್ದ ಜೆಡಿಎಸ್‌ ಈಗ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ಬಿಡುಗಡೆ ಮಾಡಿ ಬರೋಬ್ಬರಿ 12 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.

JDS Replaced Candidates Name For 12 Constituency In Karnataka Assembly Election 2023

ಇದರಲ್ಲಿ ಮುಖ್ಯವಾಗಿ ಹೈವೋಲ್ಟೇಜ್‌ ಕ್ಷೇತ್ರವಾಗಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ ಶ್ರೀನಿವಾಸ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು. ಆದರೆ ಬಿ ಫಾರಂ ನೀಡಿರಲಿಲ್ಲ. ಕ್ಷೇತ್ರದಲ್ಲಿ ಇನ್ನೂ ಮೂವರು ಅಭ್ಯರ್ಥಿಗಳು ಟಿಕೆಟ್‌ ಆಕಾಂಕ್ಷಿಗಳಿದ್ದರು, ಅವರುಗಳೆಂದರೆ ಶಾಸಕ ಎಂ ಶ್ರೀನಿವಾಸ್‌ ಅವರ ಅಳಿಯ ಯೋಗೇಶ್‌, ಮನ್ಮುಲ್‌ ಅಧ್ಯಕ್ಷ ಬಿಆರ್‌ ರಾಮಚಂದ್ರು ಹಾಗೂ ವಿಜಯಾನಂದ ಇದ್ದರು.

JDS Replaced Candidates Name For 12 Constituency In Karnataka Assembly Election 2023

ಕೊನೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಆರ್‌ ರಾಮಚಂದ್ರು ಅವರಿಗೆ ಬಿ ಫಾರಂ ನೀಡಲಾಯಿತು. ಇದರಂತೆ ಒಟ್ಟು 12 ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದ್ದ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗಿದೆ. ಅವರ ಪಟ್ಟಿ ಇಂತಿದೆ.

ಜೆಡಿಎಸ್ ಬದಲಿಸಿದ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ

ಅಭ್ಯರ್ಥಿ ಮೊದಲು ಟಿಕೆಟ್‌ ಪಡೆದಿದ್ದ ಅಭ್ಯರ್ಥಿ 3ನೇ ಪಟ್ಟಿಯಲ್ಲಿ ಟಿಕೆಟ್‌ ಪಡೆದ ಅಭ್ಯರ್ಥಿ
ಬಸವನ ಬಾಗೇವಾಡಿ ಪರಮಾನಂದ ಬಸಪ್ಪ ತನಿಖೆದಾರ್‌ ಸೋಮನಗೌಡ ಪಾಟೀಲ್‌
ಬಸವಕಲ್ಯಾಣ ಸೈಯ್ಯದ್‌ ಯಶ್ರಬ್‌ ಆಲಿ ಖಾದ್ರಿ ಸಂಜಯ್‌ ವಾಡೇಕಾರ್‌
ಬೀದರ್‌ ರಮೇಶ ಪಾಟೀಲ್‌ ಸೋಲಾಪುರ ಸೂರ್ಯಕಾಂತ ನಾಗರಮಾರಪಲ್ಲಿ
ಕುಷ್ಟಗಿ ತುಕಾರಾಂ ಸುರ್ವೆ ಶರಣಪ್ಪ ಕುಂಬಾರ
ಹಗರಿಬೊಮ್ಮನಹಳ್ಳಿ ಪರಮೇಶ್ವರಪ್ಪ ನೇಮಿರಾಜ ನಾಯ್ಕ್‌
ಬಳ್ಳಾರಿ ನಗರ ಅಲ್ಲಾಭಕ್ಷ ಮುನ್ನಾ ಅನಿಲ್‌ ಲಾಡ್‌
ಚೆನ್ನಗಿರಿ ಎಂ ಯೋಗೇಶ್‌ ತೇಜಸ್ವಿ ಪಾಟೇಲ್‌
ಮೂಡಿಗೆರೆ ಬಿಬಿ ನಿಂಗಯ್ಯ ಎಂಪಿ ಕುಮಾರಸ್ವಾಮಿ
ರಾಜಾಜಿ ನಗರ ಗಂಗಾಧರ ಮೂರ್ತಿ ಡಾ. ಅಂಜನಪ್ಪ
ಬೆಂಗಳೂರು ದಕ್ಷಿಣ ಆರ್ ಪ್ರಭಾಕರ ರೆಡ್ಡಿ ರಾಜಗೋಪಾಲ ರೆಡ್ಡಿ
ಮಂಡ್ಯ ಎಂ ಶ್ರೀನಿವಾಸ್‌ ಬಿಆರ್‌ ರಾಮಚಂದ್ರ
ವರುಣಾ ಅಭಿಷೇಕ್‌ ಡಾ.ಭಾರತಿ ಶಂಕರ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+