ಅನಂತ್‌ಕುಮಾರ್ ಹೆಗಡೆ ವಿರುದ್ಧ ಜೆಡಿಎಸ್‌ನ 'ಪುಟಗೋಸಿ' ಪ್ರತಿಭಟನೆ
Recommended Video

ಜೆಡಿಎಸ್ ಬಗ್ಗೆ ಅನಂತ್ ಕುಮಾರ್ ಹೆಗಡೆ ಕೊಟ್ಟ ಕೀಳು ಹೇಳಿಕೆ | ನಂತರ ಏನಾಯ್ತು? | Oneindia Kannada
ಬೆಂಗಳೂರು, ಜೂನ್ 04: ಜೆಡಿಎಸ್ ಪಕ್ಷವನ್ನು ಪುಟಗೋಸಿ ಪಕ್ಷ ಎಂದು ಜರಿದ ಕೇಂದ್ರ ಬಿಜೆಪಿ ಮಂತ್ರಿ ಅನಂತಕುಮಾರ್ ಹೆಗಡೆ ವಿರುದ್ಧ ಜೆಡಿಎಸ್ ಕಾರ್ಯಕರ್ತರು 'ಪುಟಗೋಸಿ' ಮಾಡಲಿದ್ದಾರೆ.
ತಮ್ಮ ಬಿಡು-ಬೀಸು ಮಾತಿನಿಂದಲೇ ಖ್ಯಾತರಾಗಿರುವ ಅನಂತಕುಮಾರ ಹೆಗಡೆ ಅವರು ಇತ್ತೀಚೆಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಜೆಡಿಎಸ್ ಪಕ್ಷವನ್ನು 'ಪುಟಗೋಸಿ'ಗೆ ಹೋಲಿಸಿದ್ದರು.
ಇದೀಗ ಅನಂತ್‌ಕುಮಾರ್ ಹೆಗಡೆ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಹಾಸನ, ಮಂಡ್ಯ ಸೇರಿದಂತೆ ಹಲವು ಕಡೆ ಪುಟಗೋಸಿಗಳ ಪ್ರದರ್ಶನ ಮಾಡಿ ಅನಂತ್‌ಕುಮಾರ್ ಹೆಗಡೆ ವಿರುದ್ಧ ಪ್ರತಿಭಟಿಸಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ 'ಪುಟಗೋಸಿ ಪೋಸ್ಟ್' ಪ್ರತಿಭಟನೆ ಮಾಡಲಾಗುತ್ತಿದೆ.
ಅನಂತ್‌ಕುಮಾರ್ ಹೆಗಡೆ ಮಾತಿಗೆ ಕಿಡಿಕಾರಿದ್ದ ಸಿಎಂ ಕುಮಾರಸ್ವಾಮಿ ಅವರು, 'ಅವರ ಮಾತು ಸಂಸ್ಕೃತಿ ಹೇಳುತ್ತದೆ, ಅವರ ಮಾತುಗಳು ಅವರೊಬ್ಬ ಅನಾಗರೀಕ ಎಂಬುದನ್ನು ಸಾಬೀತು ಮಾಡುತ್ತದೆ' ಎಂದು ಹೇಳಿದ್ದರು.












Click it and Unblock the Notifications