Get Updates
Get notified of breaking news, exclusive insights, and must-see stories!

JDS Pancharatna Yatra: ಮೈಸೂರಿನಲ್ಲಿ ಬೃಹತ್ ಜೆಡಿಎಸ್ 'ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ': ಲಕ್ಷಾಂತರ ಜನ ಭಾಗಿ

ಮೈಸೂರು, ಮಾರ್ಚ್‌ 26: ಕರ್ನಾಟಕದ ಸ್ಥಳಿಯ ಪಕ್ಷವಾಗಿರುವ ಜೆಡಿಎಸ್ ನಾಲ್ಕು ತಿಂಗಳ ಕಾಲ ರಾಜ್ಯಾದ್ಯಂತ 'ಪಂಚರತ್ನ ರಥಯಾತ್ರೆ' ಮೂಲಕ ನಡೆಸಿದ ಸಮಾರಂಭಕ್ಕೆ ಇಂದು ತೆರೆ ಬಿದ್ದಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಉತ್ತನಹಳ್ಳಿ ಬಳಿಯ ವಿಶಾಲ ಮೈದಾನದಲ್ಲಿ ಬೃಹತ್ ಜೆಡಿಎಸ್‌ 'ಪಂಚರತ್ನ ರಥಯಾತ್ರೆ' ಹಮ್ಮಿಕೊಳ್ಳಲಾಗಿದೆ. ಈ ವೇಳೆ ಬಹುದಿನಗಳ ನಂತರ ಅಂದರೆ ಸುಮಾರು ಆರು ತಿಂಗಳ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿಮಂತ್ರಿ ಎಚ್‌.ಡಿ.ದೇವೇಗೌಡ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಜನರು ಆಗಮಿಸಿದ್ದರು.

Karnataka: JDS Pancharatna Ratha Yatra Closing Ceremony in Mysore, Hd Deve gowda Participate

ಈ ವೇಳೆ ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸಾಥ್ ನೀಡಿದರು. ಜೆಡಿಎಸ್ ಪಕ್ಷದ ಪ್ರಮುಖರು ಜಮಾಯಿಸಿದ್ದ ಜನರೆನ್ನೆಲ್ಲ ನೋಡಿ ಭಾವುಕರಾದರು.

ವೇದಿಕೆ ಮುಂಭಾಗ ನಿಗದದಿತ ಸ್ಥಳಕ್ಕೆ ದೇವೇಗೌಡರನ್ನು ಕರೆತರುತ್ತಿದ್ದಂತೆ ಅವರತ್ತ ನೆರೆದಿದ್ದ ಜನರೆಲ್ಲ ಕೈಮಾಡಿ ಘೋಷಣೆ ಕೂಗಿದರು. ಎಲ್ಲರಿಗೂ ದೇವೇಗೌಡರು ಕೈ ಮುಗಿದು ನಮಸ್ಕರಿಸಿದರು. ಪಕ್ಷ ಮತ್ತು ಕುಮಾರಸ್ವಾಮಿಯವರ ಕಾರ್ಯ, ರಥಯಾತ್ರೆ ಕುರಿತು ಅವರು ಮಾತನಾಡಿದರು.

Karnataka: JDS Pancharatna Ratha Yatra Closing Ceremony in Mysore, Hd Deve gowda Participate

88 ವಿಧಾನಸಭಾ ಕ್ಷೇತ್ರಗಳಲ್ಲಿ 'ರಥಯಾತ್ರೆ'

2022ರ ನವಂಬರ್ 18ರಂದು ಕೋಲಾರದ ಮುಳಬಾಗಿಲು ಕ್ಷೇತ್ರದ ಕುರುಡುಮಲೆಯಲ್ಲಿ ಜೆಡಿಎಸ್ 'ಪಂಚರತ್ನ ರಥಯಾತ್ರೆ'

ಆರಂಭವಾಗಿತ್ತು. ಒಟ್ಟು ನಾಲ್ಕು ತಿಂಗಳಲ್ಲಿ 99 ದಿನಗಳನ್ನು ಪೂರೈಸಿದ ರಥಯಾತ್ರೆ ಯಶಸ್ವಿಯಾಗಿದೆ ಎಂದು ಮುಖಂಡರು ಹರ್ಷ ವ್ಯಕ್ತಪಡಿದರು.

2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಎಲ್ಲ ನಾಯಕರು ರಥಯಾತ್ರೆ ಮೂಲಕ ರಾಜ್ಯದಲ್ಲಿ 224 ಕ್ಷೇತ್ರಗಳ ಪೈಕಿ 88 ವಿಧಾನಸಭಾ ಕ್ಷೇತ್ರಗಳಲ್ಲಿ ಅವಿರತ ಸಂಚಾರ ನಡೆಸಿದರು ಮತಯಾಚಿಸಿದರು. ಒಟ್ಟು 5000ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ಕೊಡಲಾಗಿದೆ.

ರಥಯಾತ್ರೆ ವೇಳೆ ತಾವು ರಾಜ್ಯಕ್ಕಾಗಿ ಹಾಕಿಕೊಂಡು ಯೋಜನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಜನರ ಸಮಸ್ಯೆ ಆಲಿಸಿ, ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ಜೆಡಿಎಸ್ ತಿಳಿಸಿದೆ. ರಥಯಾತ್ರೆ ಒಟ್ಟು 10,000 ಕೀಲೋ ಮೀಟರ್ ಕ್ರಮಿಸಿದೆ ಎಂದು ಜೆಡಿಎಸ್ ತಿಳಿಸಿದೆ.

55 ಲಕ್ಷಕ್ಕೂ ಹೆಚ್ಚು ಜನರ ನೇರ ಭಾಗಿ

ಜೆಡಿಎಸ್ ಸಾಮಾಜಿಕ ಜಾಲತಾಣದ ಮೂಲಕ 3 ಕೋಟಿಗೂ ಅಧಿಕ ಜನರನ್ನು ತಲುಪಿದೆ. ಇದೊಂದು ಐತಿಹಾಸಿಕ ರಥಯಾತ್ರೆ, ಮಾಜಿ ಮುಖ್ಯಮಂತ್ರಿ ಒಬ್ಬರು ದೇಶದಲ್ಲಿಯೇ ನಡೆಸಿದ ಮೊದಲ ಯಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಎಚ್‌ಡಿ ಕುಮಾರಸ್ವಾಮಿ ಅವರು ದಿನದ 18 ಗಂಟೆಗಳ ಕಾಲ ನಿರಂತರ ಪ್ರವಾಸ ಮಾಡಿದ್ದಾರೆ. ಪಂಚರತ್ನ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ. ಪಂಚರತ್ನ ರಥಯಾತ್ರೆಯಲ್ಲಿ ಅರ್ಧಕೋಟಿಗೂ ಹೆಚ್ಚು ಜನರು ನೇರವಾಗಿ ಪಾಲ್ಗೊಂಡಿದ್ದರು ಎಂದು ಜೆಡಿಎಸ್ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+