ಜೆಡಿಎಸ್ ಭಿನ್ನಮತ ಸ್ಫೋಟ, ಶಕೀಲ್ ನವಾಜ್ ರಾಜೀನಾಮೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 03 : ಜೆಡಿಎಸ್ ಪಕ್ಷದಲ್ಲಿನ ಭಿನ್ನಮತ ರಾಜೀನಾಮೆ ತನಕ ಸಾಗಿದೆ. ಶಾಸಕ ಜಮೀರ್ ಅಹಮದ್ ಖಾನ್ ಅವರ ಪರಮಾಪ್ತರಾದ ಎಚ್.ಎಂ.ಶಕೀಲ್ ನವಾಜ್ ಅವರು, ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬುಧವಾರ ಬೆಳಗ್ಗೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ಎಂ.ಶಕೀಲ್ ನವಾಜ್ ಅವರು, ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ರವಾನಿಸಿದ್ದಾರೆ. [ಉಸ್ತುವಾರಿ ಸಮಿತಿಯಲ್ಲಿ ಜಮೀರ್ ಇಲ್ಲ]

hm shakil nawaz

ರಾಜೀನಾಮೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್.ಎಂ.ಶಕೀಲ್ ನವಾಜ್ ಅವರು, 'ಪಕ್ಷದಲ್ಲಿನ ಇತ್ತೀಚಿನ ವಿದ್ಯಮಾನಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಆದರೆ, ಪಕ್ಷದ ಸದಸ್ಯನಾಗಿ ಮುಂದುವರೆಯುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ. [ಜಮೀರ್ ಉಚ್ಛಾಟನೆ ಮಾಡುವುದಿಲ್ಲ]

ಜಮೀರ್ ಪರಮಾಪ್ತರು : ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಎಚ್.ಎಂ.ಶಕೀಲ್ ನವಾಜ್ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ಪರಮಾಪ್ತರು. ಎಚ್.ಡಿ.ದೇವೇಗೌಡರು ಜಮೀರ್ ಅಹಮದ್ ಅವರ ಮೇಲೆ ಕೆಂಗಣ್ಣು ಬೀರಿದ ತಕ್ಷಣ ಶಕೀಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. [ಗೌಡರ ವಿರುದ್ಧ ಗುಡುಗಿದ ಜಮೀರ್, ಚೆಲುವರಾಯಸ್ವಾಮಿ]

ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಎಚ್.ಡಿ.ದೇವೇಗೌಡರು ಜಮೀರ್ ಅಹಮದ್ ಖಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಜಮೀರ್ ಮತ್ತು ಅವರನ್ನು ಬೆಂಬಲಿಸುವವರು ಪಕ್ಷ ಬಿಟ್ಟು ಹೋಗಬಹುದು. ಅವರು ಹೋದ ಮೇಲೆಯೂ ಪಕ್ಷ ಉಳಿಯಲಿದೆ' ಎಂದು ಹೇಳಿದ್ದರು.

ಹೆಬ್ಬಾಳ ಉಪ ಚುನಾವಣೆಗೆ ನಾಲ್ವರು ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿತ್ತು. ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಶಕೀಲ್ ನವಾಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karataka JDS minority wing state president H.M.Shakil Nawaz resigned. Shakil Nawaz on Wednesday send his resignation letter to JDS supremo H.D.Deve Gowda.
Please Wait while comments are loading...