ಜೆಡಿಎಸ್ ಬಹುಮತ ಪಡೆದು ಕುಮಾರಸ್ವಾಮಿ ಸಿಎಂ ಆಗುವುದು ಸೂರ್ಯಚಂದ್ರ ಇರುವಷ್ಟೇ ಸತ್ಯ: ನಿಖಿಲ್ ಕುಮಾರಸ್ವಾಮಿ
ರಾಮನಗರ,ಜನವರಿ 4: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಸೂರ್ಯಚಂದ್ರ ಇರುವಷ್ಟೇ ಸತ್ಯ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾಮನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾರು ಎಷ್ಟೇ ಪ್ರಯತ್ನ ಮಾಡಿದರು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ. ನಮ್ಮ ತಾತ, ತಂದೆ ಹಾಗೂ ತಾಯಿಯವರು ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
ಇನ್ನೂ ಈಗ ನಾನು ಅವರಂತೆಯೇ ನಿಮ್ಮೆಲ್ಲರ ಸೇವೆಗಾಗಿ ಬಂದಿದ್ದೇನೆ. ಇಲ್ಲಿಯೇ ಕಚೇರಿ ತೆರೆದು ಜನರ ಕಷ್ಟಗಳಿಗೆ ಸ್ಪಂದಿಸಿ ಕೈಲಾದ ನೆರವು ಕಲ್ಪಿಸುತ್ತೇನೆ. ಇದೀಗ ಮತ್ತೆ ಕೋವಿಡ್ ಭೀತಿ ಆವರಿಸುತ್ತಿದ್ದು, ಜನರ ದಿನನಿತ್ಯದ ಕಾರ್ಯಚಟುವಟಿಕೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ದೇವರ ಕಾಪಾಡಲೆಂದು ಪ್ರಾರ್ಥಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಹೆಚ್ಡಿಕೆ ಮಾಡಿರುವ ಅಭಿವೃದ್ಧಿಯನ್ನು ಜನರನ್ನು ಕೇಳಿ ತಿಳಿದುಕೊಳ್ಳಿ
ಇನ್ನೂ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಗೊತ್ತಿಲ್ಲದಿದ್ದರೆ, ಕ್ಷೇತ್ರದ ಜನರಲ್ಲಿ ಕೇಳಿ ತಿಳಿದುಕೊಳ್ಳಲಿ. ಅಶ್ವತ್ ನಾರಾಯಣ್ ಅವರಿಗೆ ನಿನ್ನೆ ಮೊನ್ನೆ ರಾಮನಗರದ ಅಡ್ರೆಸ್ ಗೊತ್ತಾಗಿದೆ ಎಂದು ಹೆಚ್ಡಿಕೆ ರಾಮನಗರದ ಅಭಿವೃದ್ಧಿ ಮಾಡಿಲ್ಲ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿಕೆಗೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ತಾಲ್ಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲಾಕೇಂದ್ರವಾಗಿ ಮಾಡಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು, ಚುನಾವಣೆಗಾಗಿ ಮಾತನಾಡುತ್ತಿರುವ ಬಿಜೆಪಿನೂ ಅಲ್ಲ ಅಶ್ವತ್ ನಾರಾಯಣ್ ಅಲ್ಲ. ಕ್ಷೇತ್ರದಲ್ಲಿ ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದ್ದರೆ ಜನಸಾಮಾನ್ಯರ ಬಳಿ ಕೇಳಿ ಪಡೆದುಕೊಳ್ಳಲಿ ಎಂದರು.

ಚನಾವಣೆ ಹತ್ತಿವಾಗುತ್ತಿದ್ದಂತೆ ರಾಮನಗರದಲ್ಲಿ ಚುನಾವಣಾ ಪಾಲಿಟಿಕ್ಸ್ ಜೋರಾಗಿದ್ದು, ರಾಮದೇವರ ಬೆಟ್ಟವನ್ನು ಅಯೋದ್ಯೆ ಮಾದರಿಯಲ್ಲಿ ನಿರ್ಮಾಣ ಮಾಡುವವ ವಿಚಾರದಲ್ಲಿ ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇತ್ತು. ಅದರೆ ಅಧಿಕಾರ ಕೊನೆ ದಿನಗಳಲ್ಲಿ ಅದನ್ನ ಪ್ರಸ್ತಾಪ ಮಾಡ್ತಾ ಇದಾರೆ. ಬಿಜೆಪಿ ನಾಯಕರಿಗೆ ಇಚ್ಛಾಶಕ್ತಿ ಇದ್ದಿದ್ದರೆ ಯಾವತ್ತೊ ಕಟ್ಟಬಹುದಿತ್ತು. ಚುನಾವಣೆ ಹತ್ತಿರ ಇಟ್ಟುಕೊಂಡು ಜನರಲ್ಲಿ ಮತ ಸೆಳೆಯುವ ಹುನ್ನಾರ ನಡೆಸಿದ್ದಾರೆ ಎಂದು ಕಿಡಿಕಾರಿದ್ದರು.












Click it and Unblock the Notifications