ಗಂಜಿ ಗಿರಾಕಿ ಡಿಕೆಶಿಯ ಧಮ್ಕಿ, ರೌಡಿಸಂಗೆ ಯಾರೂ ಹೆದರಲ್ಲ: ಜೆಡಿಎಸ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಬದುಕುತ್ತಿರುವ ಗಂಜಿ ಗಿರಾಕಿ ಡಿಕೆ ಶಿವಕುಮಾರ್, ನಿಮ್ಮ ಧಮ್ಕಿಗೆ ಇಲ್ಲಿ ಯಾರೂ ಜಗ್ಗುವುದಿಲ್ಲ. ನಿಮ್ಮ ಹಳೇ ಚಾಳಿಗೆ ರೌಡಿಸಂಗೆ ಯಾರೂ ಬೆದರಲ್ಲ ಎಂದು ತಿರುಗೇಟು ನೀಡಿದೆ. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಮೂರ್ಖನಂತೆ ಉತ್ತರ ಕೊಡುವ ನಿಮಗೆ ಅವರ ಪೂರ್ವಾಪರ ತಿಳಿದುಕೊಳ್ಳದೆ ಮಾತನಾಡುವ ಚಟ ಎಂದು ವಾಗ್ದಾಳಿ ನಡೆಸಿದೆ.
ಕುಮಾರಸ್ವಾಮಿಯವರ ವಿಚಾರದಲ್ಲಿ ನೀವು ನಾಲಿಗೆ ಜಾರುತ್ತಿರುವುದು ಇದೇ ಮೊದಲಲ್ಲ. ತೀರಾ ಇತ್ತೀಚೆಗೆ ರಾಷ್ಟ್ರೀಯ ಸುದ್ದಿಸಂಸ್ಥೆ ಜತೆ ಕುಮಾರಸ್ವಾಮಿಯವರ ಬಗ್ಗೆ ನಾಲಿಗೆ ಜಾರಿ ಪೆದ್ದರಾಗಿದ್ದೀರಿ. ಅಧಿಕಾರದ ಲಾಲಸೆಗೆ ಯಾರು ಏನು ಹೇಳಿದ್ದಾರೆ, ಇಲ್ಲವೋ ಎಂಬುದನ್ನು ತಿಳಿಯದೇ ಅವಿವೇಕಿಯಂತೆ ವರ್ತಿಸುತ್ತಿದ್ದೀರಿ. ನಿಮ್ಮ ಶೈಲಿಯಲ್ಲಿ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಲು ನಮಗೆ ಬರೋದಿಲ್ಲ ಎಂಬ ಭಂಡತನವೇ ನಿಮಗೆ? ಎಂದು ಕೇಳಿದೆ.

ನಿಮ್ಮ ಮಾತು, ನಿಮ್ಮ ಪದ ಬಳಕೆ ನೋಡಿದರೆ, ನಿಮ್ಮ ಮಾನಸಿಕ ಸ್ವಾಸ್ಥ್ಯ ಯಾವ ಮಟ್ಟದಲ್ಲಿದೆ? ಎಂಬುದು ಅರ್ಥವಾಗುತ್ತದೆ. ನಿಮ್ಮ ಬಗ್ಗೆ ಕರ್ನಾಟಕದ ಜನರು ಭೀತಿಗೊಂಡಿರುವುದಕ್ಕೆ ಇದೂ ಒಂದು ಕಾರಣ. ಮೊದಲು ಹೆಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಆ ಹೇಳಿಕೆ ನೀಡಿದ್ದಾರೆಯೇ? ಅದನ್ನು ಸಾಬೀತುಪಡಿಸಿ. ನೀವು ಮಾನ+ನಷ್ಟ ಮೊಕದ್ದಮೆ ಹೂಡುವುದು ನಂತರದ ಮಾತು. ಅದಕ್ಕೂ ಮೊದಲು ಮಾನವೂ ಇರಬೇಕು, ಮತಿಯೂ ಇರಬೇಕು. ಇವೆರಡೂ ನಿಮಗೆ ಇದ್ದಿದ್ದರೆ ನಿಮ್ಮ ನಾಲಿಗೆಯಿಂದ ಇಂಥ ಅಣಿಮುತ್ತು ಉದುರುತ್ತಿರಲಿಲ್ಲ ಎಂದು ವ್ಯಂಗ್ಯ ಮಾಡಿದೆ.
ಮಾತೆತಿದ್ದರೆ ಶ್ಲೋಕ ಇನ್ನೊಂದು ಹೇಳುವುದಲ್ಲ, "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಮೊದಲು ದಾಸರು ಹೇಳಿರುವ ಈ ಸರಳ ಪದವನ್ನು ಓದಿ ಅರ್ಥ ಮಾಡಿಕೊಳ್ಳಿ ಎಂದಿದೆ.
ಕುಮಾರಸ್ವಾಮಿ ಸರ್ಕಾರ ಕೆಡವಿದ್ದು ಸಿದ್ದರಾಮಯ್ಯ
ಇಂದು ಸಿಎಂ ಸ್ಥಾನದಲ್ಲಿರುವ ಮಹಾನುಭಾವ, ಅಂದು ಕುಮಾರಸ್ವಾಮಿಯವರ ಸರ್ಕಾರವನ್ನು ಕೆಡವಿದ್ದು ಎಂದು ಹೆಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ. ಸಿದ್ದರಾಮಯ್ಯನ ದ್ವೇಷ ಎಷ್ಟಿದೆ ಎಂದರೇ ಜೆಡಿಎಸ್ ಪಕ್ಷದ ನೂತನ ಕಚೇರಿಯ ಜಾಗ ಮಂಜೂರು ವೇಳೆಯೂ ಅಡ್ಡಗಾಲು ಹಾಕಿದ್ದರು. ಜೆಡಿಎಸ್ ಪಕ್ಷಕ್ಕೆ ನಿಮ್ಮ ದೇಣಿಗೆ ಏನು ಸಿದ್ದರಾಮಯ್ಯ? ಮಾತನಾಡುವಾಗ ಕನಿಷ್ಠ ಪಕ್ಷ ಕೃತಜ್ಞತೆ, ಪ್ರಾಮಾಣಿಕತೆ ಉಳಿಸಿಕೊಳ್ಳಿ ಎಂದಿದ್ದಾರೆ.
ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದು, ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರ ನಿದ್ದೆಗೆಡಿಸಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿಯಲ್ಲ. ಇನ್ನೊಂದು ಪಕ್ಷವನ್ನು ಲಘುವಾಗಿ ತೆಗಳುವುದು, ಅವಹೇಳನ ಮಾಡುವುದನ್ನ ಬಿಡಬೇಕು. ಇನ್ನಾದರೂ ಕಾಂಗ್ರೆಸ್ ನಾಯಕರು ಜನರ ಮುಂದೆ ತಗ್ಗಿ-ಬಗ್ಗಿ ನಡೆಯುವುದನ್ನು ಕಲಿಯಲಿ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications