ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ
ಬೆಂಗಳೂರು, ಜೂನ್ 01: ಸಂಪುಟ ವಿಸ್ತರಣೆ ಕುರಿತ ಜೆಡಿಎಸ್-ಕಾಂಗ್ರೆಸ್ ಪಕ್ಷವು ಸುದ್ದಿಗೋಷ್ಠಿ ನಡೆಸುತ್ತಿದ್ದು. ಸಮ್ಮಿಶ್ರ ಸರ್ಕಾರದ ಕುರಿತು ಅತ್ಯಂತ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಮಹತ್ವದ ಅಂಶಗಳು ಈ ರೀತಿ ಇವೆ.
* ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿವೆ.
* ಜೆಡಿಎಸ್‌ನ ಕುಮಾರಸ್ವಾಮಿ ಅವರೇ 5 ವರ್ಷದ ಅವಧಿಗೂ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ.

* ಸಮ್ಮಶ್ರ ಸರ್ಕಾರದ ನೀತಿ,ನಿರೂಪಣೆಗಳನ್ನು ಚರ್ಚಿಸಿ ಸಲಹೆ ನೀಡಲು ಸಮನ್ವಯ ಸಮಿತಿ ಸ್ಥಾಪಿಸಲಾಗಿದ್ದು, ಇದು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಲಿದೆ.
* ಸಮಯ್ವಯ ಸಮಿತಿಯ ಪ್ರಮುಖ ಸ್ಥಾನದಲ್ಲಿ ಎರಡೂ ಪಕ್ಷಗಳ ಒಬ್ಬೊಬ್ಬ ಹಿರಿಯ ಮುಖಂಡರು ವಹಿಸಿಕೊಂಡಿರುತ್ತಾರೆ.
* ಎರಡೂ ಪಕ್ಷಗಳು ಸಮಾನವಾಗಿ ಸಚಿವ ಸ್ಥಾನವನ್ನು ಹಂಚಿಕೊಂಡಿದ್ದು, ಜೆಡಿಎಸ್‌ಗೆ ಹಣಕಾಸು ನೀಡಿ, ಕಾಂಗ್ರೆಸ್ ಗೃಹ ಇಲಾಖೆ ಉಳಿಸಿಕೊಂಡಿದೆ.
* ಜೂನ್ 6ಕ್ಕೆ ನೂತನ ಸಚಿವರು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ.












Click it and Unblock the Notifications