ಜನವರಿ 25ಕ್ಕೆ ಜೆಡಿಎಸ್-ಕಾಂಗ್ರೆಸ್ ಮಹತ್ವದ ಸಮನ್ವಯ ಸಮಿತಿ ಸಭೆ
ಬೆಂಗಳೂರು, ಜನವರಿ 24: ನಾಳೆ (ಜನವರಿ 25) ರಂದು ಸಮನ್ವಯ ಸಮಿತಿ ಸಭೆ ಕರೆಯಲಾಗಿದ್ದು, ಲೋಕಸಭೆ ಚುನಾವಣೆ, ಆಪರೇಷನ್ ಕಮಲ, ಶಾಸಕರ ಕಿತ್ತಾಟದ ವಿಷಯಗಳು ಪ್ರಥಮವಾಗಿ ಚರ್ಚೆ ಆಗಲಿವೆ.
ಮಾಮೂಲಿನಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಜೆಡಿಎಸ್‌ನ ದೆಹಲಿ ವಕ್ತಾರ ಡ್ಯಾನಿಶ್ ಅಲಿ ಅವರು ಭಾಗವಹಿಸಲಿದ್ದಾರೆ.
ಆಪರೇಷನ್ ಕಮಲದ ಭೀತಿ ಇನ್ನೂ ಆರದೇ ಇರುವುದು, ಹತ್ತಿರವಿರುವ ಲೋಕಸಭೆ ಚುನಾವಣೆಯ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ, ಮಹಾಘಟಬಂಧನ್ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸುವ ಬಗ್ಗೆ, ಕಾಂಗ್ರೆಸ್ ಶಾಸಕರ ಕಿತ್ತಾಟ, ಜೆಡಿಎಸ್ ಶಾಸಕರ ಸಚಿವ ಸಂಪುಟಕ್ಕೆ ಸೇರ್ಪಡೆ ಬಗ್ಗೆ ಮಾತುಕತೆಗಳು ನಡೆಯಲಿವೆ.

ಸಮನ್ವಯ ಸಮಿತಿ ಸಭೆಗೆ ಮುನ್ನಾ ವೇಣುಗೋಪಾಲ್ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಲಿದ್ದು, ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿದೆ, ಆ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ಅವರು ನೀಡಲಿದ್ದಾರೆ ಎನ್ನಲಾಗಿದೆ.












Click it and Unblock the Notifications