JDS Candidate 4th List: ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ; ಜೆಡಿಎಸ್ ಅಭ್ಯರ್ಥಿಗಳ 4ನೇ ಪಟ್ಟಿ ಘೋಷಣೆ!

2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಗುರುವಾರ, ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ರಾಜಕೀಯ ಪಕ್ಷಗಳು ಗೆಲ್ಲುವ ಕುದುರೆಗಳಿಗಾಗಿ ಕಡೆ ಕ್ಷಣದವರೆಗೂ ಹುಡುಕಾಟ ನಡೆಸಲಾಗುತ್ತಿದೆ. ಇದೇ ವೇಳೆ ಜೆಡಿಎಸ್ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಿದೆ.

ನಾಮಪತ್ರ ಸಲ್ಲಿಸಲು ಕೆಲವೇ ಗಂಟೆಗಳು ಬಾಕಿ ಇರುವಾಗ ಜಾತ್ಯಾತೀತ ಜನತಾ ದಳ (ಜೆಡಿಎಸ್) ಪಕ್ಷದ 13 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

JDS 4th Candidates List

ಕಾಂಗ್ರೆಸ್‌ನಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಸಿಗದ ಕಾರಣ ಜೆಡಿಎಸ್‌ಗೆ ಬಂದ ಮೋಹಿನುದ್ದೀನ್ ಬಾವಾ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ಶಶಿಧರ್ ಚನ್ನಪ್ಪ ಯಲಿಗಾರ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ.

ಕ್ರ, ಸಂಖ್ಯೆ ಕ್ಷೇತ್ರ ಅಭ್ಯರ್ಥಿಗಳು
01 ಗೋಕಾಕ್ ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ (ಚಂದನ್ ಕುಮಾರ್)
02 ಕಿತ್ತೂರು ಅಶ್ವಿನಿ ಸಿಂಗಯ್ಯ ಪೂಜೇರಾ
03 ಯಾದಗಿರಿ ಎಬಿ ಮಾಲಕರೆಡ್ಡಿ
04 ಭಾಲ್ಕಿ ರೌಫ್ ಪಟೇಲ್
05 ಶಿಗ್ಗಾಂವಿ ಶಶಿಧರ್ ಚನ್ನಪ್ಪ ಯಲಿಗಾರ
06 ಮೊಳಕಾಲ್ಮೂರು ಮಹಾದೇವಪ್ಪ
07 ಪುಲಕೇಶಿನಗರ ಅನುರಾಧ
08 ಶಿವಾಜಿನಗರ ಅಬ್ದುಲ್ಲಾ ಜಫರ್ ಅಲಿ
09 ಶಾಂತಿನಗರ ಮಂಜುನಾಥ್ ಗೌಡ
10 ಬೆಳ್ತಂಗಡಿ ಅಶ್ರಫ್ ಅಲಿ ಕುಂ‍ಞ್
11 ಮಂಗಳೂರು ಉತ್ತರ ಮೋಹಿನುದ್ದೀನ್ ಬಾವಾ
12 ಮಂಗಳೂರು ಆಲ್ತಾಪ್ ಕುಂಪಾಲ
13 ಬಂಟ್ವಾಳ ಪ್ರಕಾಶ್ ರಫಾಯಲ್ ಗೊಮ್ಸ್

ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ 92 ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳನ್ನು ಪ್ರಕಟಿಸಲಾಗಿತ್ತು. ಇನ್ನು ಏಪ್ರಿಲ್ 19ರಂದು ಬಿಡುಗಡೆಯಾದ ಪಟ್ಟಯಲ್ಲಿ 70 ಅಭ್ಯರ್ಥಿಗಳ ಹೆಸರುಗಳು ಇದ್ದವು. ಅಂತಿಮ ಪಟ್ಟಿಯಲ್ಲಿ 13 ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಸಮಾಧಾನಿತರಿಗೆ ಮಣೆ ಹಾಕಲಾಗಿದೆ.

ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಸ್ಪರ್ಧಿಸುತ್ತಿರುವ ಗೋಕಾಕ್ ಕ್ಷೇತ್ರದಿಂದ ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರಗೆ ಜೆಡಿಎಸ್ ಟಿಕೆಟ್ ಸಿಕ್ಕಿದೆ. ಬಿಜೆಪಿಯಿಂದ ಜೆಡಿಎಸ್‌ಗೆ ಬಂದಿರುವ ಎ.ಬಿ. ಮಾಲಕರೆಡ್ಡಿಗೆ ಯಾದಗಿರಿ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದ್ದರೆ, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+