ಯಶವಂತಪುರ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಕುಮಾರಸ್ವಾಮಿ; ಯಾರು ಆ ಅಭ್ಯರ್ಥಿ ?
ಯಶವಂತಪುರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು,ಫೆಬ್ರವರಿ7: 2023ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಜೆಡಿಎಸ್ ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದು, ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಯಶವಂತಪುರ ಜೆಡಿಎಸ್ ಭದ್ರ ಕೋಟೆ. ಈಗಾಗಲೇ ಮನೆ ಹಾಳು ಮಾಡಿಕೊಂಡಿದ್ದೀಯಾ. ನಿಮ್ಮ ಮನೆ ಮಕ್ಕಳು ಮುಂದೆ ಬೀದಿಗೆ ಬರುವುದಕ್ಕ ನಾನು ಬಿಡಲ್ಲ. ಮುಂದೆ ಹಾಗೆ ಆಗುವುದಿಲ್ಲ. ಯಶವಂತಪುರ ಗೆಲ್ಲದಿದ್ದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ. ಇನ್ನು ಮೂರು ತಿಂಗಳು ಓಡಾಡು, ಚುನಾವಣಾ ಪ್ರಚಾರ ಮಾಡು. ಇದು ಕೊನೆಯ ಡಿಷಿಷನ್, ನೀವು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.

ನಾನು ಯಶವಂತಪುರದಲ್ಲಿ ಸ್ಪರ್ಧಿಸಿದರೆ ತಪ್ಪು ಸಂದೇಶ ರವಾನೆ ಆಗುತ್ತೆ: ಹೆಚ್ಡಿಕೆ
ಇನ್ನೂ ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಒತ್ತಾಯಿಸುತ್ತಿದ್ದು, ಈ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯಿಸಿದ ಅವರು, ನಾನು ಯಶವಂತಪುರದಲ್ಲಿ ಸ್ಪರ್ಧಿಸಿ ತಪ್ಪು ಸಂದೇಶ ರವಾನೆ ಆಗುತ್ತೆ. ಜವರಾಯಿಗೌಡರೇ ಯಶವಂತಪುರ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಎಂದು ಸ್ಪಷ್ಟನೆ ನೀಡಿದರು.

ಯಶವಂತಪುರದಲ್ಲಿ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ: ಹೆಚ್ಡಿಕೆ
ಯಶವಂತಪುರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜವರಾಯಿಗೌಡ ಅವರು ಮೂರು ಬಾರಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇದರಿಂದ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಈ ಬಾರಿ ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿಲ್ಲ. ಜವರಾಯಿಗೌಡರೇ ನಿಮಗೆ ಉತ್ತಮ ಅಭ್ಯರ್ಥಿ ಯಶವಂತಪುರದಲ್ಲಿ ಗೆಲ್ಲುವುದು ಮುಖ್ಯ. ಜವರಾಯಿಗೌಡರು ಬೇರೆ ನಿರ್ಧಾರ ಮಾಡಬಾರದು. ನೀವು ಅಭ್ಯರ್ಥಿ ಆಗಲೇಬೇಕು. ನಿಮ್ಮನ್ನ ಉಳಿಸಿಕೊಡೋದು ನಮ್ಮ ಜವಾಬ್ದಾರಿ. ಕಾರ್ಯಕರ್ತರನ್ನು ಉಳಿಸಿಕೊಳ್ಳೋಣ ಎಂದು ಜಯರಾಯಿಗೌಡ ಅವರಿಗೆ ಈ ಬಾರಿ ಚುನಾವಣೆಗೆ ನಿಲ್ಲುವಂತೆ ಹುರಿದುಂಬಿಸಿದರು.

ಯಶವಂತಪುರ ಜೆಡಿಎಸ್ ಪಕ್ಷದ ಭದ್ರಕೋಟೆ
ಯಶವಂತಪುರ ಜೆಡಿಎಸ್ ಪಕ್ಷದ ಭದ್ರಕೋಟೆ. ನಮ್ಮ ಕೆಲವು ಸಮಸ್ಯೆಗಳಿಂದ ಈ ಹಿಂದೆ ನಮಗೆ ಹಿನ್ನಡೆಯಾಗಿದೆ. ಹಾಗಾಗಿ ನಾವು ಯಶವಂತಪುರ ಕ್ಷೇತ್ರದಲ್ಲಿ ಸೋತಿದ್ದೇವೆ ಅಷ್ಟೇ. ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾ ಹೇಳಿ ದಾರಿ ತಪ್ಪಿಸಿದ್ದರು. ಹಾಗಾಗಿ ಕಡಿಮೆ ಅಂತರದಲ್ಲಿ ಯಶವಂತಪುರದಲ್ಲಿ ಸೋಲು ಆಗಿದೆ. ಜವರಾಯಿಗೌಡಗೆ ಚುನಾವಣೆ ಹೇಗೆ ನಡೆಸಬೇಕು ಎಂಬುದು ಗೊತ್ತಾಗಿಲ್ಲ. ಮೂರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಆರ್ಥಿಕವಾಗಿ ಸುಸ್ತಾಗಿದ್ದಾರೆ. ಮೂರು ಬಾರಿ ನಮ್ಮ ಅಭ್ಯರ್ಥಿ ಸೋತರೂ ಜನರು ನಮ್ಮ ಕೈಬಿಟ್ಟಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ
ಕಾರ್ಯಕರ್ತರು ದೇವರಿದ್ದಂತೆ, ಕಾರ್ಯಕರ್ತರೇ ಮಾಡಿದ ಕಾರ್ಯಕ್ರಮವಿದು. ಯಾರಿಗೂ ದುಡ್ಡು ಕೊಟ್ಟು ಕಾರ್ಯಕ್ರಮ ಮಾಡಿ ಎಂದು ಹೇಳಿಲ್ಲ ಎಂದು ಕುಮಾರಸ್ವಾಮಿ ಹೇಳಿದಾಗ ವೇದಿಕೆಯ ಮೇಲೆ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಅವರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಇನ್ನೂ ನಿಷ್ಠಾವಂತ ಕಾರ್ಯಕರ್ತರು ಇಲ್ಲಿ ಇದ್ದಾರೆ. ಯಶವಂತಪುರದಲ್ಲಿ 2013 ರಲ್ಲಿ ಅಭ್ಯರ್ಥಿ ಆದರು. 2013 ರಲ್ಲಿ 15 ಸಾವಿರದಲ್ಲಿ ಸೋತಿದ್ದೇವೆ. ಶೋಭಾ ಕರಂದ್ಲಾಜೆ ರಾಜಾಜಿನಗರದಲ್ಲಿ ಅಭ್ಯರ್ಥಿ ಆದರು. ಬಿಜೆಪಿ ಅಂದು 30 ಸಾವಿರ ಮತ ಪಡೆದಿದ್ದರೆ, ಜವರಾಯಿಗೌಡ ಶಾಸಕರಾಗುತ್ತಿದ್ದರು. ಉಪ ಚುನಾವಣೆ ವೇಳೆ ಕಾಂಗ್ರೆಸ್ ಬಿಜೆಪಿ ಸೇರಿ ಮಾಡಿದ ಚುನಾವಣೆ ಅದು. ಸೋಮಶೇಖರ್ ಅವರಿಗೇ ಕಾಂಗ್ರೆಸ್ ಅವರು ಮತ ಹಾಕಿದ್ರು. ಈ ಕ್ಷೇತ್ರ ಇಂದಿಗೂ ಜೆಡಿಎಸ್ ನ ಭದ್ರಕೋಟೆ ಎಂದರು












Click it and Unblock the Notifications