ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ: ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಾಯಕರಿಗೆ ಮರ್ಮಾಘಾತ!

ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. 2023ರಲ್ಲಿ ಭರ್ಜರಿ 130ಕ್ಕೂ ಹೆಚ್ಚು ಸ್ಥಾನ ಗೆದ್ದು, ವಿಧಾನಸಭೆ ಅಧಿಕಾರ ಹಿಡಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರಿಗೆ ಭಯ ಕಾಡುತ್ತಲೇ ಇದೆ. ಈ ಭಯದ ನಡುವೆ ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಓಡಿದ್ದಾರೆ. ಈ ಮೂಲಕವೇ ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್ ನಾಯಕರಿಗೆ ಮರ್ಮಾಘಾತ ಆಗಿದೆ!

ಅಷ್ಟಕ್ಕೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂಚಲನ ಸೃಷ್ಟಿ ಮಾಡಿತ್ತು. ಒಂದ್ಕಡೆ ಮಾಜಿ ಸಿಎಂ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ನಡೆದಿದ್ದ ಎಲೆಕ್ಷನ್ ಇದಾಗಿತ್ತು. ಮತ್ತೊಬ್ಬರು ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದು ಕಿಚ್ಚು ಹೊತ್ತಿಸಿತ್ತು. ಸಾಲು ಸಾಲು ವಿವಾದ ನಡುವೆ ಬಿಜೆಪಿ ಅಧಿಕಾರವನ್ನೂ ಕಳೆದುಕೊಂಡಿತ್ತು. ಆದರೆ ಹೀಗೆ ಕೆಲವೇ ತಿಂಗಳ ಹಿಂದೆ ಬಿಜೆಪಿ ಬಿಟ್ಟು ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ ಮತ್ತೆ ಬಿಜೆಪಿಗೆ ವಾಪಸ್ ಬಂದಿದ್ದಾರೆ.

Jagadish Shettars BJP Return Poses a Huge Blow to Congress Ahead of 2024 Lok Sabha Elections

ಯಡಿಯೂರಪ್ಪ ತಂತ್ರ ವರ್ಕೌಟ್?

ಮಾಜಿ ಸಿಎಂ ಯಡಿಯೂರಪ್ಪ ಈಗಲೂ ಕರ್ನಾಟಕದ ರಾಜಕೀಯದಲ್ಲಿ ಅದೆಷ್ಟು ಹಿಡಿತ, ಶಕ್ತಿಯನ್ನ ಹೊಂದಿದ್ದಾರೆ ಎಂಬುದು ಈಗ ಮತ್ತೊಮ್ಮೆ ಪ್ರೂವ್ ಆಗಿದೆ. ಯಾಕಂದ್ರೆ ಇದೀಗ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ವಾಪಸ್ ಕರೆತರುವಲ್ಲಿ ಬಿ.ಎಸ್. ಯಡಿಯೂರಪ್ಪ, ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಶ್ರಮ ಸಾಕಷ್ಟು ಇದೆ ಎನ್ನಲಾಗಿದೆ. ಅದರಲ್ಲೂ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಗೆ ತಂತ್ರ ಹೂಡುವಾಗಲೇ ದೊಡ್ಡ ಆಘಾತನ ಕೊಟ್ಟಿದೆ ಕರ್ನಾಟಕ ಬಿಜೆಪಿ.

ರಾಜ್ಯಾಧ್ಯಕ್ಷ ವಿಜಯೇಂದ್ರ ವಿಜಯ!

ಕೆಲವು ತಿಂಗಳ ಹಿಂದಷ್ಟೇ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭರ್ಜರಿ ಸ್ಟ್ರಾಟಜಿ ಪ್ಲೇ ಮಾಡಿ ಗೆದ್ದಿದ್ದಾರೆ. ಅದ್ರಲ್ಲೂ ಕಾಂಗ್ರೆಸ್ ನಾಯಕರಿಗೆ ಇದರಿಂದ ದೊಡ್ಡ ಆಘಾತ ನೀಡಿದ್ದಾರೆ. ಈ ಮೂಲಕ ಈಗಾಗಲೇ ಲೋಕಸಭೆ ಚುನಾವಣೆ ಅಖಾಡದಲ್ಲಿ ಮುಂದೆ ಇರುವ ಬಿಜೆಪಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರ ಸೇರ್ಪಡೆ ಬಿಜೆಪಿಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಅಲ್ಲದೆ ಈ ಬದಲಾವಣೆ ಮತ್ತೆ ಬಿಜೆಪಿಗೆ ಶಕ್ತಿ ತುಂಬುವ ನಿರೀಕ್ಷೆ ದಟ್ಟವಾಗಿದೆ.

Jagadish Shettars BJP Return Poses a Huge Blow to Congress Ahead of 2024 Lok Sabha Elections

ಕಾಂಗ್ರೆಸ್ ನಾಯಕರಿಗೆ ಭಾರಿ ಆಘಾತ

ಇನ್ನು ದಿಢೀರ್ ಹೀಗೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಬಿಟ್ಟು ಮತ್ತೊಮ್ಮೆ ಬಿಜೆಪಿಯ ಬಾಗಿಲನ್ನು ತಟ್ಟಿರುವುದು ಕಾಂಗ್ರೆಸ್ ನಾಯಕರಿಗೂ ಆಘಾತ ಕೊಟ್ಟಿದೆ. ಯಾಕಂದ್ರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ ಅವರನ್ನು ಅದ್ಧೂರಿಯಾಗಿಯೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ, ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ದೊಡ್ಡ ಆಘಾತ ನೀಡಿದ್ದಾರೆ.

ಮತ್ತಷ್ಟು ಕಾಂಗ್ರೆಸ್ ನಾಯಕರು ಬಿಜೆಪಿಗೆ?

ಜಗದೀಶ್ ಶೆಟ್ಟರ್ ರೀತಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲೇ, ಹಲವು ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬಂದಿದ್ದರು. ಆದರೆ ಇದೀಗ ಅವರೆಲ್ಲಾ ವಾಪಸ್ ಬಿಜೆಪಿಯ ಬಾಗಿಲು ಬಡಿಯುತ್ತಾರಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಜಗದೀಶ್ ಶೆಟ್ಟರ್‌ಗೆ ಈ ರೀತಿ ಬಿಜೆಪಿ ನಾಯಕರು ಭರ್ಜರಿ ಸ್ವಾಗತ ನೀಡಿದ್ದು ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಹೀಗಾಗಿ ವಲಸೆ ಬಂದ ನಾಯಕರ ಜೊತೆಗೆ ಕಾಂಗ್ರೆಸ್ ನಾಯಕರು, ಗಂಭೀರ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ 2024ರ ಲೋಕಸಭೆ ಚುನಾವಣೆಗು ಮೊದಲು ಆಘಾತದ ಮೇಲೆ ಆಘಾತ ಎದುರಿಸುತ್ತಿದೆ ಕರ್ನಾಟಕ ಕಾಂಗ್ರೆಸ್. ಈಗಾಗಲೇ ಆಂತರಿಕ ಸಮೀಕ್ಷೆಗಳಲ್ಲೂ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದು ಮತ್ತಷ್ಟು ಹಿನ್ನಡೆ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಈಗ ಯಾವ ತಂತ್ರ ಹೂಡುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+