Jagadish Shettar: ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತು ಜಗದೀಶ್ ಶೆಟ್ಟರ್‌ ಹೇಳಿದ್ದೇನು?

ಕೊಪ್ಪಳ, ಜುಲೈ26: ವಿಧಾನಸಭಾ ಚುನಾವಣೆಯ ಬಳಿಕೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಮುಂದಿನ ಲೋಕಸಭೆ ಚುನಾವಣೆಗೆ‌ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು , ಇದೀಗ ಸ್ಪಷ್ಟನೇ ನೀಡಿದ್ದಾರೆ.

ಈ ಕುರಿತು ಕೊಪ್ಪಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರು ಏನು ಸೂಚನೆ ಕೊಡುತ್ತಾರೋ ಅದನ್ನು ಪಾಲನೆ ಮಾಡುತ್ತೇನೆ. ಪಕ್ಷ ಏನು ಜವಾಬ್ದಾರಿ ನೀಡುತ್ತೋ‌ ಅದನ್ನ ನಿಭಾಯಿಸುತ್ತೆನೆ. ಲೋಕಸಭೆ ಚುನಾವಣೆಯ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ ಎಂದು ಹೇಳಿದರು.

jagadish-shettar

ಇನ್ನೂ ಲೋಕಸಭಾ ಚುನಾವಣೆಯಲ್ಲಿ ನಾವು ಕನಿಷ್ಠ ಅಂದ್ರೂ 15 ಸ್ಥಾನ ಗೆಲ್ಲುತ್ತೇವೆ. ಅದು 20 ಸ್ಥಾನಕ್ಕೂ ಹೋಗಬಹುದು. ಧಾರವಾಡ ಸೇರಿದಂತೆ ಪಕ್ಷ ಗೆಲ್ಲಿಸುವಂತ ಕೆಲಸ ಮಾಡುತ್ತೇನೆ, ಈಗಾಗಲೇ ಕಾಂಗ್ರೆಸ್‌ ಪಕ್ಷ ನನಗೆ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿ ಗೌರವದಿಂದ ನಡೆಸಿಕೊಳ್ಳುತ್ತಿದೆ. ಅಲ್ಲದೇ ಇನ್ನೂ ಇನ್ನು ಹೆಚ್ಚಿನ ಸ್ಥಾನಮಾನ ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹೊರ ಬಂದಿದ್ದೇವೆ, ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ ? ಎಂದು ಪ್ರಶ್ನಿಸಿದ ಅವರು, 66 ಸ್ಥಾನಕ್ಕೆ ಕುಸಿದಿದ್ದಾರೆ. ಬಿಜೆಪಿಯವರಿಗೆ ಓರ್ವ ವಿಪಕ್ಷ ನಾಯಕರನ್ನ ನೇಮಿಸಲು ಆಗುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ದರೂ ಹೊಸ ಅಧ್ಯಕ್ಷರ ನೇಮಕ ಮಾಡುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಲೀಡರ್ ಗಳೇ ಸಿಗುತ್ತಿಲ್ಲ. ಯಾವ ಪಕ್ಷದಲ್ಲಿಯೂ ಸಿದ್ದಾಂತ, ನೈತಿಕತೆ ಉಳಿದಿಲ್ಲ. ಬಿಜೆಪಿಯವರು ರೌಡಿ ಶೀಟರ್ ಗಳನ್ನ ಎಲೆಕ್ಷನ್ ನಿಲ್ಲಿಸುತ್ತಾರೆ. ಏನು ಉಳಿದಿದೆ ಆ ಪಕ್ಷದಲ್ಲಿ ಎಂದು ಪ್ರಶ್ನಿಸಿದರು.

ಇನ್ನು ಸಚಿವರ ವಿರುದ್ದ ಶಾಸಕರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಈಗಾಗಲೇ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕೆಲವರು ನಕಲಿ ಪತ್ರ ಮಾಡಿದ್ದರೆಂದು ಹೇಳಿದ್ದಾರೆ. ಅದು ಪಕ್ಷದ ಆಂತರಿಕ ವಿಚಾರವಾಗಿದ್ದು, ಸಭೆ ಆಗಬೇಕಿತ್ತು,ಕೆಲವೊಂದು ಕಾರಣಕ್ಕೆ ಮೂಂದಡಲಾಗುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+