ಸಿದ್ದರಾಮಯ್ಯ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ : ಸತೀಶ್ ಜಾರಕಿಹೊಳಿ

ಕೊಪ್ಪಳ,ಡಿಸೆಂಬರ್ 17: ವಿರೋಧ ಪಕ್ಷದ ನಾಯಕರಾಅದ ಸಿದ್ದರಾಮಯ್ಯ ಹೋದಲ್ಲೆಲ್ಲಾ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೋದ ಕಡೆಯೆಲ್ಲಾ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ. ಟಿಕೆಟ್ ಗಾಗಿ ಅರ್ಜಿ ಹಾಕಿದವರಿಗೆ ತಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರು ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಸಹಜವಾಗಿ ಆಕಾಂಕ್ಷಿಗಳಲ್ಲಿ ಅಸಮಾಧಾನವಾಗುತ್ತದೆ. ಟಿಕೆಟ್ ಯಾರಿಗೆ ಎಂಬುವುದನ್ನು ಕಮಿಟಿ ನಿರ್ಧರಿಸುತ್ತದೆ. ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ, ಮತ್ತೊಂದು ಕಡೆ ಇವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ ಎಂದು ಹೇಳಿದರು.

ಇನ್ನೂ ಈ ವೇಳೆ ಬೆಳಗಾವಿ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಈ ವಿಚಾರ ಒಂದು ರೀತಿ ವರ್ಷಕ್ಕೆ ಒಮ್ಮೆ ಮಳೆ ಬಂದ ಹಾಗೆ ಆಗುತ್ತಿದೆ. ಚುನಾವಣೆ ಬಂದಾಗೆಲ್ಲಾ ಗಡಿ ವಿವಾದ ಹುಟ್ಟಿಕೊಳ್ಳುತ್ತದೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಕರ್ನಾಟಕ ಗಡಿ ಮಧ್ಯೆ ವಿವಾದದಲ್ಲಿ ಕೇಂದ್ರ ಸರ್ಕಾರ ಯಾವಗಲೂ ಇಬ್ಬಗಿ ನೀತಿ ಅನುಸರಿಸುತ್ತಿದೆ. ಬೆಳಗಾವಿಯಲ್ಲಿ ಮೂರು ಜಿಲ್ಲೆಯನ್ನು ಮಾಡಬೇಕು. ಗೋಕಾಕ್, ಚಿಕ್ಕೋಡಿ ಜಿಲ್ಲೆಯಾಗಬೇಕು ಮಹಾರಾಷ್ಟ್ರದವರು ಆಗಾಗ ಗಡಿ ವಿವಾದ ಹೇಳುತ್ತಾರೆ.

Its Not Right For Siddaramaiah To Announce Candidates Says Satish Jarkiholi

ಸಚಿವರಾದ ಆನಂದ್ ಸಿಂಗ್ ಉತ್ತರ ಕರ್ನಾಟಕ ಪ್ರತ್ಯೇಕವಾಗುವ ಹೇಳಿಕೆ ನೀಡಿದ್ದಾರೆ. ಈಗ ಪ್ರತ್ಯೇಕವಾಗುವಂಥ ಸ್ಥಿತಿ ಇಲ್ಲ ಎಂದು ಹೇಳಿದರು.

ಮತದಾರರ ಮಾಹಿತ ಕಳವು ಪ್ರಕರಣವನ್ನ ಡೈವರ್ಟ್ ಮಾಡಲು ಮಂಗಳೂರು ಬಾಂಬ್ ಬ್ಲ್ಯಾಸ್ಟ್ ಪ್ರಕರಣವನ್ನ ಬಳಸಿಕೊಂಡಿದ್ದಾರೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಹೇಳಿಕೆಗೆ ಅವರನ್ನೇ ಕೇಳಬೇಕು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಅವರಿಗೆ ಗೊತ್ತು ಎಂದರು.

Its Not Right For Siddaramaiah To Announce Candidates Says Satish Jarkiholi

ಟಿಕೆಟ್‌ ಘೋಷಿಸಿಲ್ಲ, ಆಶೀರ್ವಾದ ಮಾಡಿ ಎಂದಿದ್ದೇನೆ: ಸಿದ್ದರಾಮಯ್ಯ

ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನಾನು ಕಾಂಗ್ರೆಸ್‌ದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಎಲ್ಲೂ ಘೋಷಿಸಿಲ್ಲ. ಸ್ಪರ್ಧಿಸಲು ಬಯಸಿರುವ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಎಂದಷ್ಟೇ ಜನರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿತರು ಕೆಪಿಸಿಸಿಗೆ ಸಲ್ಲಿಸಿರುವ ಅರ್ಜಿ ವಿಲೇವಾರಿಯಾಗುವ ಮೊದಲೇ ಅಭ್ಯರ್ಥಿಗಳ ಹೆಸರು ಘೋಷಿಸುತ್ತಿರುವ ಕ್ರಮಕ್ಕೆ ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಈ ಸ್ಪಷ್ಟನೆ ನೀಡಿದ್ದಾರೆ. ನಾನು ಎಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಐವರಿಗೆ ಆಶೀರ್ವಾದ ಮಾಡಿ ಎಂದಿದ್ದೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+