ನೈಸ್ ಸಂಸ್ಥೆ ಅಕ್ರಮ; ನನಗೆ ಬೆದರಿಕೆ ಕರೆ ಎಂದ ಶಾಸಕ ಟಿಬಿ ಜಯಚಂದ್ರ
ಬೆಂಗಳೂರು, ಜುಲೈ 28: ನೈಸ್ ಸಂಸ್ಥೆ ಅಕ್ರಮದ ಬಗ್ಗೆ ರಿಪೋರ್ಟ್ ನೀಡಿದ ಬೆನ್ನಲ್ಲೇ ರೈತರಂತೆ ಕರೆ ಮಾಡಿ ನನಗೆ ಬೆದರಿಕೆ ಕರೆ ಬಂದಿದ್ದು ನಿಜ ಎಂದು ಶಿರಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನೈಸ್ ಸಂಸ್ಥೆ ಅಕ್ರಮದ ಬಗ್ಗೆ ರಿಪೋರ್ಟ್ ನೀಡಿದ ಬೆನ್ನಲ್ಲೇ ರೈತರಂತೆ ಕರೆ ಮಾಡಿ ಜಿಲ್ಲೆಯ ಶಿರಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು ಈ ಬಗ್ಗೆ ಟಿ.ಬಿ.ಜಯಚಂದ್ರ ಅವರು ತಿಳಿಸಿದ್ದಾರೆ. ಇನ್ನೂ ರೈತರ ಹಗರಣದ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ರಾಮನಗರಕ್ಕೆ ಭೇಟಿ ನೀಡಿದ್ದ ಶಾಸಕ ಟಿ ಬಿ ಜಯಚಂದ್ರ, ಈ ವೇಳೆ ರೈತರ ಜೊತೆ ಚರ್ಚೆ ಮಾಡಿದ್ದರು. ಭೇಟಿ ಬಳಿಕ ಇದೀಗ ಶಾಸಕ ಜಯಚಂದ್ರಗೆ ಬೆದರಿಕೆ ಕರೆಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.

ನೈಸ್ ಸಂಸ್ಥೆಯ ಅಕ್ರಮದ ಬಗ್ಗೆ ನಾನು ರಿಪೋರ್ಟ್ ನೀಡಿದ್ದೆ. ಸಾವಿರಾರು ಎಕರೆ ಸರ್ಕಾರಿ, ಖಾಸಗಿ ರೈತರ ಜಮೀನು ಕಬಳಿಸಿದ್ದಾರೆ ಎಂದು ಹೇಳಿದರು. ರೈತರು ಆಹ್ವಾನಿಸಿದ್ದರಿಂದ ಬಿಡದಿಗೆ ಹೋಗಿದ್ದೆ. ರೈತರನ್ನು ಭೇಟಿ ಮಾಡಿ ಬಂದ ಬಳಿಕ ಬೆದರಿಕೆ ಕರೆ ಶುರುವಾಗಿದೆ. ನೀವು ಈ ಕ್ಷೇತ್ರದಲ್ಲಿ ಎಲೆಕ್ಷನ್ಗೆ ನಿಲ್ಲಬೇಕಾ. ನಿಮಗೂ ಇದಕ್ಕೂ ಏನು ಸಂಬಂಧ. ಯಾಕೆ ಬರ್ತಿರಾ ಅಂತ ಕರೆಯ ಮೂಲಕ ಕೇಳುತ್ತಿದ್ದರು ಎಂದರು.
ಇನ್ನೂ ನಾನು ಸಾರ್ವಜನಿಕ ಜೀವನದಲ್ಲಿ 45 ವರ್ಷಗಳಿಂದ ಇದ್ದೇನೆ. ಇದಕ್ಕೆಲ್ಲ ಹೆದರಲ್ಲ. ಕೂಡಲೇ ಸರ್ಕಾರ ರೈತರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಈ ರಿಪೋರ್ಟ್ ಅಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.












Click it and Unblock the Notifications