ಜಮ್ಮು ಕಾಶ್ಮೀರ ವಿಭಜನೆ: ಶಾಂಪ್ರಸಾದ್ ಮುಖರ್ಜಿಯ ನೆನೆದ ಯಡಿಯೂರಪ್ಪ
Recommended Video
ಜಮ್ಮು ಕಾಶ್ಮೀರ ವಿಭಜನೆ: ಶಾಂಪ್ರಸಾದ್ ಮುಖರ್ಜಿಯ ನೆನೆದ ಯಡಿಯೂರಪ್ಪ/ B. S. Yeddyurappa
ಬೆಂಗಳೂರು, ಆಗಸ್ಟ್ 05: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ್ಯತೆ ರದ್ದು ಮಾಡಿರವ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಟ್ಟಿಗೆ ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, 'ಸ್ವಾತಂತ್ರ್ಯಾ ನಂತರ ತೆಗೆದುಕೊಂಡ ಮಹತ್ವದ ಹಾಗೂ ಐತಿಹಾಸಿಕ ನಿರ್ಣಯ ಇದಾಗಿದೆ' ಎಂದು ಹೇಳಿದರು.
ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ವಿರೋಧಿಸಿ ಕಾಂಗ್ರೆಸ್‌ನಿಂದ ಹೊರಬಂದು ಜನಸಂಘ ಕಟ್ಟಿದ ಶಾಂಪ್ರಸಾದ್ ಮುಖರ್ಜಿ ಅವರನ್ನು ನೆನಪಿಸಿಕೊಂಡ ಯಡಿಯೂರಪ್ಪ ಅವರು, 'ಏಕ್ ದೇಶ ಮೇ ದೋ ಪ್ರಧಾನ್, ದೋ ನಿಶಾನ್, ದೋ ವಿಧಾನ್ ನಹಿ ಹೋಸಕ್ತಾ' ಎಂದಿದ್ದ ಶಾಂಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ದೊರೆತಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಇಂದಿನ ನಿರ್ಧಾರವನ್ನು ಎಲ್ಲರೂ ಸ್ವಾಗತ ಮಾಡುತ್ತಾರೆ, ಇದೊಂದು ಐತಿಹಾಸಿಕ ನಿರ್ಣಯ ಎಂದು ಯಡಿಯೂರಪ್ಪ ಬಣ್ಣಿಸಿದರು.












Click it and Unblock the Notifications