ಕರ್ನಾಟಕ- ಕೇರಳ ಗಡಿಯಲ್ಲಿ ಚಳಿ ಕಾಯಿಸುತ್ತಿರುವ ಐಎಸ್ಐಎಸ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 13: ಧರ್ಮದ ಹೆಸರಿನಲ್ಲಿ ಮುಗ್ಧ ಮುಸ್ಲಿಂ ಯುವಕ, ಯುವತಿಯರನ್ನು ಭಯೋತ್ಪಾದನೆಯತ್ತ ಸೆಳೆಯುತ್ತಿರುವ ಐಎಸ್ಐಎಸ್ ಉಗ್ರಸಂಘಟನೆ ಈಗ ಕರ್ನಾಟಕ-ಕೇರಳ ಗಡಿಯಲ್ಲಿ ಚಳಿ ಕಾಯಿಸುತ್ತಿದೆ ಎಂಬ ಆಘಾತಕಾರಿ ಸುದ್ದಿಯನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಕರ್ನಾಟಕ ಹಾಗೂ ಕೇರಳ ಗಡಿ ಭಾಗವನ್ನು ತೀವ್ರವಾಗಿ ನಿಗಾವಹಿಸಿ ಗಮನಿಸಲಾಗುತ್ತಿದ್ದು, ಉಗ್ರರ ಚಟುವಟಿಕೆಗಳಿಗೆ ಇಂಬು ನೀಡುವಂಥ ಚಟುವಟಿಕೆಗಳ ದಾಖಲೆ ಪಡೆದುಕೊಳ್ಳಲಾಗುತ್ತಿದೆ. ಕಾಸರಗೋಡಿನಿಂದ ಅನೇಕ ಮಂದಿ ನಾಪತ್ತೆಯಾಗಿರುವುದು ಗುಪ್ತಚರ ಇಲಾಖೆಯ ಅಧ್ಯಯನ ಪ್ರಮುಖ ವಿಷಯವಾಗಿದೆ.

ISIS module from Kerala could spill into Karnataka, warns IB

ಕಾರವಾರ, ಮಂಗಳೂರಿಗೂ ಈ ನಾಪತ್ತೆ ಪ್ರಕರಣ ಹಬ್ಬುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚಿನ ನಿಗಾವಹಿಸುವಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರು ಕೂಡಾ ಈ ಬಗ್ಗೆ ಮಂಗಳೂರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಐಎಸ್ಐಎಸ್ ವಿಸ್ತರಣಾ ಜಾಲ ಈಗ ಕೇರಳ ದಾಟಿ ಕರ್ನಾಟಕಕ್ಕೆ ಕಾಲಿಡುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಹಾಗಾಗಿ, ಕೇರಳ ಗಡಿಯಲ್ಲಿರುವ ಕರ್ನಾಟಕದ ಊರುಗಳಲ್ಲಿ ಹೆಚ್ಚಿನ ತಪಾಸಣೆ, ಭದ್ರತೆಗೆ ಅದ್ಯತೆ ನೀಡಲಾಗುತ್ತಿದೆ. ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ವಿಷ ಬೀಜ ಬಿತ್ತಲು ಇರಾಕಿ ಉಗ್ರ ಸಂಘಟನೆ ಹೊಂಚು ಹಾಕುತ್ತಿದೆ ಎಂದು ಅಧಿಕಾರಿಯೊಬ್ಬರು ಒನ್ ಇಂಡಿಯಾಗೆ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Intelligence Bureau officials are keeping a close watch on the Karnataka-Kerala border in the wake of an increased ISIS related activity. The Kerala police while investigating an ISIS related case had found that a large number of those who went missing were from Kasargod which borders Karnataka.
Please Wait while comments are loading...