ನಿತ್ಯಾನಂದನ ಕೈಲಾಸ ದೇಶದಲ್ಲಿ ನ್ಯಾಯಾಧೀಶರಿದ್ದಾರೆಯೇ?

ಬೆಂಗಳೂರು, ಫೆಬ್ರವರಿ 20: ಬಿಡದಿಯ ನಿತ್ಯಾನಂದ ಧ್ಯಾನ ಪೀಠದ ಪೀಠಾಧಿಪತಿ ನಿತ್ಯಾನಂದ ಕೈಲಾಸ ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ಪೀಠದ ನ್ಯಾಯಾಧೀಶರಿದ್ದಾರೆಯೇ?. ಹೀಗೆಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಪ್ರಶ್ನಿಸಿದೆ. ಅಲ್ಲದೆ, ಅಲ್ಲಿನ ವಿಳಾಸ ನೀಡಿದರೆ ಅಲ್ಲಿಗೆ ನೋಟಿಸ್ ಕಳುಹಿಸುವುದಾಗಿ ಹೇಳಿದೆ.

ಜಾರ್ಖಂಡ್ ರಾಜ್ಯದ ರಾಂಚಿಯ ದಯಾಶಂಖರ್ ಪಾಲ್ ಅವರು ತಮ್ಮ ಪುತ್ರ ಕೃಷ್ಣಕುಮಾರ್ ಪಾಲ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Is There Judge In Nityanadans Kalish Country HC Questioned

ವಿಶೇಷ ಸರ್ಕಾರಿ ಅಭಿಯೋಜಕರು, "ಬಿಡಿದಿಯ ನಿತ್ಯಾನಂದ ಪೀಠದಲ್ಲಿ ಕೃಷ್ಣ ಕುಮಾರ್ ಅವರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತೃತೀಯ ಪ್ರತಿವಾದಿಯಾಗಿರುವ ಬಿಡದಿಯ ನಿತ್ಯಾನಂದ ಧ್ಯಾನ ಪೀಠದಿಂದ ನಿತ್ಯಾನಂದ ಅವರು ಪ್ರಪಂಚ ತ್ಯಜಿಸಿದ್ದಾರೆ ಎಂದು ಇ-ಮೇಲ್ ಬಂದಿದೆ. ಮಠದವರಿಗೂ ನಿತ್ಯಾನಂದ ಎಲ್ಲಿದ್ದಾರೆ? ಎನ್ನುವ ಮಾಹಿತಿ ಇಲ್ಲ" ಎಂದರು.

ಇದನ್ನು ಆಲಿಸಿದ ಪೀಠವು ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಆಗ ಅರ್ಜಿದಾರರ ಪರ ವಕೀಲರು ನಿತ್ಯಾನಂದ ಕೈಲಾಸದಲ್ಲಿದ್ದಾರೆ ಎಂದರು. ವಕೀಲರೇ ನೀವು ಕೈಲಾಸ ದೇಶಕ್ಕೆ ಹೋಗಿ ಬನ್ನಿ ಎಂದು ಹೇಳಿದ ನ್ಯಾಯಪೀಠ, ಕೊನೆಗೆ ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.

ನಿತ್ಯಾನಂದ ಕಿಂಗ್ ಆಫ್ ಕಿಂಗ್ : ಇದಕ್ಕೆ ಪೀಠವು ನಿತ್ಯಾನಂದ ಎಲ್ಲಿದ್ದಾರೆ? ಎಂಬ ಮಾಹಿತಿ ಕೊಟ್ಟರೆ ನಾನು ಅಲ್ಲಿಗೆ ಪ್ರೊಸಸ್ ಕೊಡುತ್ತೇನೆ. ಕೈಲಾಸ ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಧೀಶರು ಯಾರು?. ಕೈಲಾಸದಲ್ಲಿ ನಿತ್ಯಾನಂದ ಮಹಾಸ್ವಾಮಿ ಇದ್ದಾನೆ ಎಂದು ನೀವು ಹೇಳಿದ ಮೇಲೆ ಅದರ ಮಾಹಿತಿ ಕೊಡಿ. ಅದು ನಿಮ್ಮ ಕರ್ತವ್ಯ. ನ್ಯಾಯಾಲಯಕ್ಕೆ ಸಹಾಯ ಮಾಡುವುದು ಎಂದರೆ ನಿತ್ಯಾನಂದನ ಬಗ್ಗೆ ಮಾಹಿತಿ ನೀಡುವುದಾಗಿದೆ. ನಿತ್ಯಾನಂದ ಕೈಲಾಸ ದೇಶದಲ್ಲಿ ಕಿಂಗ್ ಆಫ್ ಕಿಂಗ್ ಎಂದು ಲಘು ಧಾಟಿಯಲ್ಲಿ ಹೇಳಿದರು.

ಜತೆಗೆ ನೀವು ಅದರ ಮಾಹಿತಿ ನೀಡಿದರೆ ಕಾನ್ಸುಲೇಟ್ ಮೂಲಕ ನಾನು ಪ್ರೊಸಸ್ ಕೊಡುತ್ತೇನೆ. ಇಲ್ಲವಾದರೆ ಕಮಿಷನರೇಟ್ ಮೂಲಕ ಅಥವಾ ರಾಯಭಾರಿಗಳ ಮೂಲಕ ಪ್ರೊಸಸ್ ಕೊಡುತ್ತೇನೆ. ನೀವು ಮಾಹಿತಿ ನೀಡಿದರೆ ನಾನು ಕಾನ್ಸುಲೇಟ್ ಮೂಲಕ ಹೋಗುವೆ. ಎಕ್ಸಿಕ್ಯೂಟ್ ಮಾಡಲು ನಿಮ್ಮನ್ನೇ ಕಳುಹಿಸುವೆ.. ನೀವು ಕೈಲಾಸ ದೇಶದಲ್ಲೂ ಎಂಜಾಯ್ ಮಾಡಬೇಕು ಎಂದು ನ್ಯಾಯಮೂರ್ತಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+