ಪವಿತ್ರ ಶಿವಲಿಂಗ ನಿಮಗೆ ಅಲಂಕಾರಿಕ ವಸ್ತುವೇ: ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್02: ಹಿಂದೂಗಳ ಆರಾಧ್ಯ ದೈವ ಶಿವಲಿಂಗವನ್ನು ಕಾರಂಜಿ ರೂಪದಲ್ಲಿ ಅಲಂಕಾರಿಕ ವಸ್ತವನ್ನಾಗಿ ದೆಹಲಿಯ ಬೀದಿಗಳಲ್ಲಿ ಬಳಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಂತರ ಭಾರತೀಯರಿಗೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಧರ್ಮವನ್ನು ದಂಧೆ ಮಾಡಿಕೊಂಡು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು, ದ್ವೇಷದ ಬೆಳೆ ಬಿತ್ತಿ ಅದನ್ನೇ ಉಸಿರಾಡುತ್ತಿರುವ ಬಣ್ಣ ಬಯಲಾಗುತ್ತಿದೆ. ಕೋಟ್ಯಾನು ಕೋಟಿ ಭಾರತೀಯರು ಭಕ್ತಿಯಿಂದ ಪೂಜಿಸುವ ಶಿವಲಿಂಗಗಳಿಗೆ ಬಿಜೆಪಿ ಮತ್ತದರ ಸೇವಕ ಲೆಫ್ಟಿನೆಂಟ್ ಗವರ್ನರ್ ಅವಮಾನ ಮಾಡಿದ್ದಾರೆ. ಬಿಜೆಪಿ ಶಿವ ದ್ವೇಷಿಯಾಗಿದೆ ಎಂದರು.

ದೆಹಲಿಯ ಧೌಲಾ ಕೌನ್‌ನಲ್ಲಿ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಶಿವಲಿಂಗದ ಆಕಾರದ ಕಾರಂಜಿಗಳನ್ನು ಅಳವಡಿಸಿದ್ದಾರೆ. ಶಿವಲಿಂಗವನ್ನು ಪೂಜಿಸುವ ವೀರಶೈವ ಲಿಂಗಾಯತ ಸಮುದಾಯಕ್ಕೆ, ಶಿವಲಿಂಗವನ್ನು ಗೌರವಿಸುವ ಸಮಸ್ತ ಹಿಂದೂಗಳಿಗೆ ತೋರಿದ ಅಗೌರವವಿದು. ಸದಾ ಹಿಂದೂಗಳ ಪರ ಎಂದು ತೋರ್ಪಡಿಸಿಕೊಳ್ಳುವ ನರೇಂದ್ರ ಮೋದಿ ಅವರೇ ಶಿವಲಿಂಗಗಳಿಗೆ ಅವಮಾನ ಮಾಡಿದ್ದಾರೆ ಎಂದರು.
ಬಿಜೆಪಿಯ ನಾಯಕರು ಇಂತಹ ಅವಮಾನಕರ ಫೋಟೊ, ವಿಡಿಯೋಗಳನ್ನು ನಾಚಿಕೆಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಇದು ಖಂಡನಾರ್ಹ. ಹಿಂದೂಗಳ ಪವಿತ್ರ ಸಂಕೇತವಾದ ಶಿವಲಿಂಗವನ್ನು ಅವಮಾನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವಿದಿಲ್ಲ. ತಕ್ಷಣ ಕೇಂದ್ರ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ಶಿವಲಿಂಗ ಆಕಾರದ ಅಲಂಕಾರಿಕ ಕಾರಂಜಿಗಳನ್ನು ತೆರವುಗೊಳಿಸಬೇಕು. ಸಮಸ್ತ ಭಾರತೀಯ ಕ್ಷಮೆ ಕೇಳಬೇಕು. ದೇಶದ ಕ್ಷಮೆಯನ್ನು ಕೇಳಿ, ಶಿವಲಿಂಗಗಳನ್ನು ಸೂಕ್ತ ಗೌರವದ ಜೊತೆಗೆ ಸೂಕ್ತ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದರು.

ಚಂದ್ರಯಾನ-3 ಯಶಸ್ಸಿನ ಬಳಿಕ ವಿಕ್ರಮ್ ಲ್ಯಾಂಡರ್ ಇಳಿದ ಜಾಗಕ್ಕೆ ಶಿವಶಕ್ತಿ ಎಂದು ಹೆಸರಿಟ್ಟು ಹಿಂದೂ ಪರ ಎಂದು ಬಿಂಬಿಸಿಕೊಂಡಿದ್ದರು. ಆದರೆ ಅದೇ ಶಿವನನ್ನು ಅಲಂಕಾರಿಕ ವಸ್ತುವಾಗಿ ದೆಹಲಿಯ ಬೀದಿಗಳಲ್ಲಿ ಅಳವಡಿಸುವ ಮೂಲಕ ತಮ್ಮ ನೈಜ ಮನಸ್ಥಿತಿಯನ್ನು ತೋರಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಬಿಜೆಪಿ ಹಿಂದೂ ವಿರೋಧಿಯಾಗಿದೆ. ಹಿಂದುತ್ವ, ಹಿಂದೂ ದೇವರನ್ನು ಬಿಜೆಪಿ ಕೇವಲ ಮತ ಸೆಳೆಯುವುದಕ್ಕಾಗಿ ಬಳಕೆ ಮಾಡುತ್ತದೆ' ಎಂದು ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಟೀಕಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದರಿಂದ ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ದೆಹಲಿಯನ್ನು ಹಲವು ರೀತಿಯಲ್ಲಿ ಸಿಂಗರಿಸಲಾಗುತ್ತಿದೆ. ಶಿವಲಿಂಗವನ್ನು ಹೋಲುವ ಕಾರಂಜಿಗಳನ್ನು ಅಲಂಕಾರಿಕವಾಗಿ ಬಳಸಲಾಗಿದೆ. ಶಿವಲಿಂಗವು ಎಂದಿಗೂ ಶುಭ ಭಕ್ತರುಗಳ ಆಧ್ಯಾತ್ಮಿಕ ಹಾಗೂ ದೈವಿಕವೇ ಹೊರತು ಆಡಂಬರಿಕವಾಗಿ ತೋರ್ಪಡಿಸಿಕೊಳ್ಳುವಂತಹ ವಸ್ತುವಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ವಿಚಾರವಾಗಿ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿನಯ್ ಕುಮಾರ್ ಸಕ್ಸೆನಾ ಕಲ್ಲುಗಳಿಗೆ ಪೂಜೆ ಮಾಡುವ ಭಾರತೀಯರು ಎಂದು ಮಾತನಾಡಿದ್ದನ್ನು ಜಗದೀಶ್ ವಿ. ಸದಂ ಕಟು ಮಾತುಗಳಿಂದ ಟೀಕಿಸಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications