Live

Yoga Day 2022 Live Updates: ಮೈಸೂರಲ್ಲಿ ಡಿಜಿಟಲ್ ಯೋಗ ಕೇಂದ್ರ ವೀಕ್ಷಿಸಿದ ಪ್ರಧಾನಿ

ಬೆಂಗಳೂರು, ಜೂನ್ 21; ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಸಂಜೆ ಮೈಸೂರಿಗೆ ಆಗಮಿಸಿರುವ ಅವರು ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ 8ನೇ ಕಾರ್ಯಕ್ರಮ ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸುಮಾರು 15 ಸಾವಿರ ಜನರ ಜೊತೆ ಪ್ರಧಾನಿ ಮೋದಿ ಯೋಗ ಮಾಡಲಿದ್ದಾರೆ.

ನರೇಂದ್ರ ಮೋದಿ ಸೋಮವಾರ ಸಂಜೆಯ ತನಕ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಬಳಿಕ ಮೈಸೂರಿಗೆ ತೆರಳಿದ್ದರು. ಅಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಸುತ್ತೂರು ಮಠ ಮತ್ತು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

Yoga Day 2022

ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಮೈಸೂರು ಅರಮನೆಯಲ್ಲಿ ರಾಜಮನೆತನದವರ ಜೊತೆ ಉಪಹಾರ ಸೇವಿಸಲಿದ್ದಾರೆ. ಬಳಿಕ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಯ ವಿವರ, ಕಾರ್ಯಕ್ರಮ, ಫೋಟೋ, ವಿಡಿಯೋಗಳು ಈ ಲೈವ್ ಪುಟದಲ್ಲಿ ನಿಮಗೆ ಸಿಗಲಿವೆ...

Jun 21, 2022, 10:18 am IST

ಪ್ರಧಾನಿ ಮೋದಿ ಮೈಸೂರು ಅರಮನೆಯಲ್ಲಿ ಉಪಹಾರ ಸೇವಿಸಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು.
Jun 21, 2022, 9:37 am IST

ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಸ್ತುಪ್ರದರ್ಶನ ಮೈದಾನದಲ್ಲಿ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ವೀಕ್ಷಿಸಿದರು. ಆಯುಷ್‌ ಇಲಾಖೆಯು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಪ್ರದರ್ಶನದಲ್ಲಿ ಯೋಗ ಶಿಕ್ಷಣ ನೀಡುವ ಸಂಸ್ಥೆಗಳು, ಅಕಾಡೆಮಿಗಳ ಭರಪೂರ ಮಾಹಿತಿಯೊಂದಿಗೆ ದೇಶಿಯ ಉತನ್ನಗಳ ಪರಿಚಯವನ್ನು ಖುದ್ದು ಮೋದಿ ವೀಕ್ಷಿಸಿದರು.
Jun 21, 2022, 9:28 am IST

ಹೈದರಾಬಾದ್‌ನಲ್ಲಿ ಯೋಗ ಮಾಡಿದ ಪಿ. ವಿ. ಸಿಂಧು, ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ
Jun 21, 2022, 9:06 am IST

ಮೈಸೂರಿನ ಅರಮನೆ ಆವರಣದಲ್ಲಿ ಇರುವ ಡಿಜಿಟಲ್ ಯೋಗ ಪ್ರದರ್ಶನ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವೀಕ್ಷಿಸಿದರು.
Jun 21, 2022, 9:05 am IST

ಮೈಸೂರಿನಲ್ಲಿ ಡಿಜಿಟಲ್ ವಸ್ತು ಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
Jun 21, 2022, 8:55 am IST

ಒಡಿಶಾದ ಪೂರಿ ಬೀಚ್ ನಲ್ಲಿ ವಿಶ್ವ ಯೋಗ ದಿನದ ಹಿನ್ನೆಲೆ ಮರಳಿನ ಚಿತ್ರಣವನ್ನು ಬಿಡಿಸಿದ ಸುದರ್ಶನ್ ಪಟ್ನಾಯಕ್.
Jun 21, 2022, 8:54 am IST

ವಿಶ್ವ ಯೋಗ ದಿನದ ಹಿನ್ನೆಲೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗಾಭ್ಯಾಸ ಮಾಡಿದರು.
Jun 21, 2022, 8:33 am IST

ಗುಜರಾತಿನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವೀಯಾ ಯೋಗಾಭ್ಯಾಸ ಮಾಡಿದರು.
Jun 21, 2022, 8:23 am IST

ಯೋಗಾಭ್ಯಾಸ ಮುಗಿಸಿ ಹೊರಟ ಪ್ರಧಾನಮಂತ್ರಿ ನರೇಂದ್ರ ಮೋದಿ ಅರಮನೆ ಆವರಣದಲ್ಲಿ ಇರುವ ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ.
Jun 21, 2022, 7:53 am IST

ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ಮಾಡಿದರು.
Jun 21, 2022, 7:52 am IST

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ. ಸಂಸದ ಬಿ. ವೈ. ರಾಘವೇಂದ್ರ ಜನರ ಜೊತೆ ಯೋಗ ಮಾಡಿದರು.
Jun 21, 2022, 7:50 am IST

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜಯರಾಂ ಠಾಕೂರ್ ಯೋಗ ಮಾಡುತ್ತಿದ್ದಾರೆ.
Jun 21, 2022, 7:43 am IST

8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಧಾನ ಕಾರ್ಯಕ್ರಮದಲ್ಲಿ ವಕ್ರಾಸನ, ಭುಜಂಗಾಸನ, ಶಲಭಾಸನ, ಕಪಾಲಭಾತಿ, ಸೇತುಬಂಧಾಸನ ಮಾಡಲಾಯಿತು.
Jun 21, 2022, 7:41 am IST

ಮರಳು ಕಲಾವಿದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದ್ದು ಹೀಗೆ
Jun 21, 2022, 7:36 am IST

ಮೈಸೂರು ಅರಮನೆ ಆವರಣದಲ್ಲಿ ಮೋದಿ ಯೋಗಾಭ್ಯಾಸ
Jun 21, 2022, 7:33 am IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೋಯ್ಡಾದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ಮಾಡುತ್ತಿದ್ದಾರೆ.
Jun 21, 2022, 7:29 am IST

8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಸುಮಾರು 15 ಸಾವಿರ ಜನರು ಮೈಸೂರು ಅರಮನೆ ಆವರಣದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.
Jun 21, 2022, 7:26 am IST

ದಂಡಾಸನ, ತ್ರಿಕೋನಾಸನ, ತಾಡಾಸನ, ವೃಕ್ಞಾಸನಗಳನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರರು ಮೈಸೂರು ಅರಮನೆ ಆವರಣದಲ್ಲಿ ಮಾಡುತ್ತಿದ್ದಾರೆ.
Jun 21, 2022, 7:24 am IST

ತ್ಯಾಗರಾಜ ಸ್ಟೇಡಿಯಂನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯೋಗಾಸನ ಮಾಡುತ್ತಿದ್ದಾರೆ.
Jun 21, 2022, 7:24 am IST

ಅರಮನೆ ಆವರಣದಲ್ಲಿ ಎಲ್ಲರೂ ಪಾದ ಹಸ್ತಾಸನವನ್ನು ಪೂರ್ಣಗೊಳಿಸಿದ್ದಾರೆ.
Jun 21, 2022, 7:22 am IST

ವೇದಿಕೆ ಮೇಲಿನಿಂದ ನೀಡುತ್ತಿರುವ ಸೂಚನೆಗೆ ಅನುಗುಣವಾಗಿ ಮೈಸೂರು ಅರಮನೆ ಆವರಣದಲ್ಲಿ ಎಲ್ಲರೂ ಯೋಗ ಮಾಡುತ್ತಿದ್ದಾರೆ. ಮೋದಿ ಸಹ ಹಲವಾರು ಆಸನಗಳನ್ನು ಸೂಚನೆಗೆ ಅನುಗುಣವಾಗಿ ಮಾಡುತ್ತಿದ್ದಾರೆ.
Jun 21, 2022, 7:18 am IST

ಮೈಸೂರು ಅರಮನೆ ಆವರಣದಲ್ಲಿ ಮೋದಿ ಯೋಗ ಮಾಡುತ್ತಿದ್ದಾರೆ.
Jun 21, 2022, 7:11 am IST

ಮೈಸೂರು ಅರಮನೆ ಆವರಣದಲ್ಲಿ ಮೋದಿ ಯೋಗ ಮಾಡುತ್ತಿದ್ದಾರೆ.
Jun 21, 2022, 7:10 am IST

ವೇದಿಕೆ ಮೇಲಿನಿಂದ ತರಬೇತಿದಾರರು ನೀಡುತ್ತಿರುವ ಸೂಚನೆಯಂತೆ ಅರಮನೆ ಮೈದಾನದಲ್ಲಿ ಎಲ್ಲರೂ ಯೋಗ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಹ ಜನರ ಜೊತೆ ಯೋಗ ಮಾಡುತ್ತಿದ್ದಾರೆ.
Jun 21, 2022, 7:08 am IST

ವಿಡಿಯೋ; ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಆರಂಭಿಸಿದ್ದಾರೆ.
Jun 21, 2022, 7:07 am IST

ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ಜೋಡಿಸಿ ನಮಸ್ಕಾರ ಮುದ್ರೆ ಆರಂಭಿಸಲಾಗಿದೆ. ಮೂರು ಬಾರಿ ಓಂ ಎಂದು ಹೇಳುವ ಮೂಲಕ ನಮಸ್ಕಾರ ಮುದ್ರೆ ಪ್ರಾರಂಭಿಸಲಾಗಿದೆ.
Jun 21, 2022, 7:06 am IST

ಪ್ರಾರ್ಥನೆಯೊಂದಿಗೆ ಮೈಸೂರಿನ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಆರಂಭವಾಗಿದೆ.
Jun 21, 2022, 7:05 am IST

ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಿಂದ ಕೆಳಗೆ ಬಂದು ಮ್ಯಾಟ್ ಮೇಲೆ ಯೋಗ ಮಾಡಲು ಕುಳಿತರು.
Jun 21, 2022, 7:03 am IST

ನಮ್ಮ ಯುವಕರು ಯೋಗ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೇಂದ್ರ ಆಯುಷ್ ಸಚಿವಾಲಯ ಯುವಕರು ಯೋಗ ಮಾಡಲು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಹೇಳಿದರು.
Jun 21, 2022, 7:00 am IST

ಯೋಗದಿಂದಾಗಿ ವಿಶ್ವವೇ ಒಂದಾಗುತ್ತಿದೆ. ಯೋಗದ ಈ ಪ್ರಯೋಗ ಈಗ ಕೇವಲ ಜೀವನದ ಭಾಗವಾಗಿಲ್ಲ. ಯೋಗ ಈಗ ಜೀವನದ ದಾರಿಯಾಗಿದೆ ಎಂದು ಮೋದಿ ಬಣ್ಣಿಸಿದರು.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+