ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರದೇಶ ಪೊಲೀಸರು ಟ್ವಿಟ್ಟರ್‌ ಎಂಡಿಗೆ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ

|
Google Oneindia Kannada News

ಬೆಂಗಳೂರು, ಜೂನ್ 24:ಉತ್ತರ ಪ್ರದೇಶದ ಪೊಲೀಸರು ಟ್ವಿಟ್ಟರ್ ಇಂಡಿಯಾದ ಮನೀಶ್‌ಗೆ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಉತ್ತರ ಪ್ರದೇಶ ಪೊಲೀಸರು ಸಮನ್ಸ್ ಜಾರಿ ಮಾಡಿರುವ ಹಿನ್ನೆಲೆ ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಉತ್ತರ ಪ್ರದೇಶದ ಪೊಲೀಸರು ಟ್ವಿಟ್ಟರ್ ಇಂಡಿಯಾದ ಮನೀಶ್‌ಗೆ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮನೀಶ್ ಮಹೇಶ್ವರಿ ಕರ್ನಾಟಕ ಹೈಕೋರ್ಟ್​ಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.'

ಉತ್ತರ ಪ್ರದೇಶ ಪೊಲೀಸರಿಂದ ಟ್ವಿಟ್ಟರ್ ಇಂಡಿಯಾ ಎಂಡಿಗೆ ನೋಟಿಸ್ಉತ್ತರ ಪ್ರದೇಶ ಪೊಲೀಸರಿಂದ ಟ್ವಿಟ್ಟರ್ ಇಂಡಿಯಾ ಎಂಡಿಗೆ ನೋಟಿಸ್

ಟ್ವಿಟರ್ ಇಂಡಿಯಾದ ಮುಖ್ಯಸ್ಥ ಮನೀಶ್ ಮಹೇಶ್ವರಿ ದೆಹಲಿ-ಉತ್ತರ ಪ್ರದೇಶ ಗಡಿ ಭಾಗದ ಪೊಲೀಸರು ತಮ್ಮನ್ನು ವಿಚಾರಣೆಗೆ ಒಳಪಡಿಸುವ ಮೊದಲೇ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ.

Twitter Indias Maheshwari Moves Karnataka HC In Loni Assault Case

ಘಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿಸಿದ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದ ಪ್ರಕರಣದಲ್ಲಿ ಮಹೇಶ್ವರಿ ಅವರ ವಿಚಾರಣೆ ನಡೆಯಬೇಕಿದೆ.

ವಿಡಿಯೋ ಕಾಲ್ ಮೂಲಕ ವಿಚಾರಣೆ ಎದುರಿಸುವುದಾಗಿ ಮಹೇಶ್ವರಿ ಹೇಳಿದ್ದರು. ಆದರೆ ಬೆಳಿಗ್ಗೆ 10.30 ಕ್ಕೆ ಹಾಜರಿರಬೇಕೆಂದು ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು.

ಪೊಲೀಸ್ ಠಾಣೆಯಲ್ಲಿ ನೀಡಲಾದ ಸಮಯಕ್ಕೆ ಅವರು ಹಾಜರಾಗಲಿಲ್ಲ, ಆದರೆ ಮಧ್ಯಾಹ್ನದ ವೇಳೆಗೆ ಅವರು ಹಾಜರಾಗುವ ಸಾಧ್ಯತೆ ಇದೆ ಎಂದು ಅತುಲ್ ಕುಮಾರ್ ಸೋನ್ಕರ್, ಸರ್ಕಲ್ ಆಫೀಸರ್ (ಲೋನಿ) ಮಾಹಿತಿ ನೀಡಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿ ಜಿ.ನಾಗೇಂದ್ರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಈ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಪತ್ರಕರ್ತರಾದ ರಾಣಾ ಅಯುಬ್, ಸಬಾ ನಖ್ವಿ, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮದ್ ಮತ್ತು ಮಸ್ಕೂರ್ ಉಸ್ಮಾನಿ ಇತರರನ್ನು ಹೆಸರಿಸಲಾಗಿತ್ತು. ಇವರೆಲ್ಲರೂ ದಾರಿತಪ್ಪಿಸುವ ಟ್ವೀಟ್​, ವಿಡಿಯೊಗಳ ಜೊತೆಗೆ ಕೋಮು ಭಾವನೆ ಕೆರಳಿಸುವಂಥ ಅಂಶಗಳನ್ನು ಟ್ವೀಟ್ ಮಾಡಿದ್ದರು ಎಂಬ ಆರೋಪವನ್ನು ಇವರ ವಿರುದ್ಧ ಹೊರಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರಾಣಾ ಅಯೂಬ್​ಗೆ ಬಾಂಬೆ ಹೈಕೋರ್ಟ್​ ಈ ವಾರದ ಆರಂಭದಲ್ಲಿ ನಾಲ್ಕು ವಾರಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸುವಂತೆ ಗಾಜಿಯಾಬಾದ್ ಪೊಲೀಸರು ಮಹೇಶ್ವರಿ ಅವರಿಗೆ ಸಮನ್ಸ್​ ಜಾರಿ ಮಾಡಿದ್ದರು. ಪೊಲೀಸರ ಎದುರು ಹೇಳಿಕೆ ದಾಖಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಬೆಳವಣಿಗೆಯ ನಂತರ, ನಿನ್ನೆ (ಜೂನ್ 23) ಮನೀಶ್‌ ಮಹೇಶ್ವರಿ ಹೈಕೋರ್ಟ್ ಮೆಟ್ಟಿಲೇರಿದರು.

ಇಂದು ಮುಂಜಾನೆ 10.30ಕ್ಕೆ ಲೊನಿ ಪೊಲೀಸ್ ಠಾಣೆಯಲ್ಲಿ ಮಹೇಶ್ವರಿ ವಿಚಾರಣೆ ಎದುರಿಸಲು ಹಾಜರಾಗಬೇಕಿತ್ತು. ಆದರೆ ಈವರೆಗೆ ಅವರು ಬಂದಿಲ್ಲ ಎಂದು ಸರ್ಕಲ್ ಇನ್​ಸ್ಪೆಕ್ಟರ್ ಅತುಲ್ ಸೊಂಕರ್ ಹೇಳಿದ್ದರು. ತಾವು ವಿಡಿಯೊ ಕಾಲ್ ಮೂಲಕ ವಿಚಾರಣೆ ಎದುರಿಸಲು ಸಿದ್ಧವಿರುವುದಾಗಿ ಮಹೇಶ್ವರಿ ಕಳೆದ ಸೋಮವಾರ ಹೇಳಿದ್ದರು.

ಮಹೇಶ್ವರಿ ಬೇಡಿಕೆಯನ್ನು ಪೊಲೀಸರು ಒಪ್ಪಲಿಲ್ಲ. ಟ್ವಿಟರ್ ಇಂಡಿಯಾದ ಗ್ರಾಹಕ ಸಂಪರ್ಕ ಅಧಿಕಾರಿ ಧರ್ಮೇಂದ್ರ ಚತುರ್ ಅವರನ್ನೂ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

Recommended Video

ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಟೀಮ್ ಇಂಡಿಯಾಗೆ ಸಿಕ್ತು ಮತ್ತೊಂದು ಚಾನ್ಸ್ | Oneindia Kannada

ಜೈ ಶ್ರೀ ರಾಮ್, ವಂದೇ ಮಾತರಂ ಘೋಷಣೆ ಕೂಗುವಂತೆ ಒತ್ತಾಯಿಸಿ ಉತ್ತರ ಪ್ರದೇಶದಲ್ಲಿ ಅಬ್ದುಲ್ ಸಮದ್ ಎಂಬ ವ್ಯಕ್ತಿಯನ್ನು ಥಳಿಸಲಾಗಿದೆ ಎಂಬ ವಿಡಿಯೊ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಟ್ವಿಟರ್ ಇಂಡಿಯಾ, ಕೆಲ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕಳೆದ ವಾರ ಎಫ್​ಐಆರ್​ ದಾಖಲಿಸಲಾಗಿತ್ತು.

English summary
Twitter India head Manish Maheshwari has moved the Karnataka High Court seeking relief in connection with the Loni assault case, sources said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X