ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯ ಸ್ಥಾಪನೆ: ಬಸವರಾಜ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 8 : ಕರ್ನಾಟಕದಲ್ಲಿ ಅಭಿವೃದ್ಧಿ ಹಾಗೂ ನಾವಿನ್ಯತೆಯ ಪಯಣ, ಇದಕ್ಕೆ ಕಾರಣವಾಗಿರುವ ಸಾಧಕರು, ಇವರ ಸಾಧನೆಗಳನ್ನು ಬಿಂಬಿಸುವ (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಬೆಂಗಳೂರು ವಿನ್ಯಾಸಕಾರರ ಸಮುದಾಯದ ವತಿಯಿಂದ ಆಯೋಜಿಸಿದ್ದ ಬಿ.ಎಲ್.ಆರ್ ಡಿಸೈನ್ ವೀಕ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ನಾವಿನ್ಯತೆ, ಅವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವ ಅಂತರರಾಷ್ಟ್ರೀಯ ಮಟ್ಟದ ಮ್ಯೂಸಿಯಂ ಇದಾಗಲಿದ್ದು, ಹಸಿರಿನ ಪರಿಸರವನ್ನೂ ಒಳಗೊಂಡಿರಲಿದೆ. ಇದರಿಂದ ವಿದೇಶಿ ಪ್ರವಾಸೋದ್ಯಮವನ್ನು ಪ್ರೋತ್ಸಾಹ ದೊರೆಯುತ್ತದೆ. ಈ ಮ್ಯೂಸಿಯಂ ನಿಂದ ಯುವ ಆವಿಷ್ಕಾರಿಗಳು, ವಿನ್ಯಾಸಕಾರರಿಗೆ ಸ್ಪೂರ್ತಿ ದೊರೆಯಲಿದೆ ಎಂದರು.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ವಿಶ್ವದ ಯಾವುದೇ ಸಣ್ಣ ನಗರದಲ್ಲಿ ಒಂದು ನಗರ ಕೇಂದ್ರವಿರುವಂತೆ, ಬೆಂಗಳೂರಿನ 8 ದಿಕ್ಕುಗಳಲ್ಲಿ 8 ನಗರ ಕೇಂದ್ರಗಳ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಬೆಂಗಳೂರು ನಗರಕ್ಕೆ ಮಾತ್ರ ನಗರಕೇಂದ್ರವೆಂಬುದಿಲ್ಲ. ಆದ್ದರಿಂದ 8 ನಗರಕೇಂದ್ರಗಳನ್ನು ನಿರ್ಮಿಸಿ, ಇದಕ್ಕೆ ಪೂರಕವಾಗಿ ರಸ್ತೆ, ರೈಲುಗಳನ್ನು ಅಭಿವೃದ್ಧಿಗೊಳಿಸಬಹುದು. ಈ ಯೋಜನೆಗೆ ಬೇಕಾದ ಸಲಹೆಗಳನ್ನು ವಿನ್ಯಾಸಕಾರರಿಂದ ಬಯಸುವುದಾಗಿ ತಿಳಿಸಿದರು.

Innovation Experience Exhibition to come up in Bengaluru says CM Basavaraj Bommai

ಬೆಂಗಳೂರು ಜನರ ನೆಚ್ಚಿನ ನಗರವಾಗಿದ್ದು, ಈ ನಗರದಲ್ಲಿ ಅವಿಷ್ಕಾರ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರತಿಭಾವಂತರಿದ್ದಾರೆ. ಜೆನೋಟಿಕ್ಸ್ ನಿಂದ ಏರೋಸ್ಪೇಸ್ ವರೆಗೆ 400 ಸಂಶೋಧನಾ ಕೇಂದ್ರಗಳಿವೆ. ರಾಜ್ಯದಲ್ಲಿ 400 ಫಾರ್ಚೂನ್ ಕಂಪನಿಗಳಿವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಅಭಿವೃದ್ಧಿಗೆ ಬಹಳ ಅವಕಾಶಗಳಿವೆ. ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಸಕಾರಾತ್ಮಕತೆ ಎಲ್ಲರಲ್ಲೂ ಇರಬೇಕು. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು.

ಉತ್ತಮ ವಿನ್ಯಾಸಕಾರರು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಆಂತರ್ಯವನ್ನು ನೋಡಬೇಕು. ನಿಮ್ಮ ಆತ್ಮಸಾಕ್ಷಿಯ ಮಾತನ್ನು ಕೇಳಬೇಕು. ಆಗಲೇ ಉತ್ತಮ ವಿನ್ಯಾಸಗಳು ಹೊರಹೊಮ್ಮಲು ಸಾಧ್ಯ. ಹೊಸ ವಿನ್ಯಾಸಗಳು ಹೆಚ್ಚಿನ ವ್ಯತ್ಯಾಸವನ್ನು ಮಾಡುವ ಜೊತೆಗೆ ಪರಿಣಾಮವನ್ನೂ ಬೀರುತ್ತದೆ. ಯುವ ವಿನ್ಯಾಸಕಾರರು, ಜೀವನದಲ್ಲಿ ಸುಧಾರಣೆಗಳನ್ನು ತರುವಂತಹ ವಿನ್ಯಾಸಗಳನ್ನು ಮಾಡುವ ಶಕ್ತಿಯನ್ನು ಪ್ರತಿಭೆಯನ್ನು ಹೊಂದಿದ್ದಾರೆ. ಉತ್ತಮ ವಿನ್ಯಾಸ ಸ್ಪೂರ್ತಿಯನ್ನೂ ನೀಡುತ್ತದೆ. ವಿನ್ಯಾಸ ರಚನೆ ನಿರಂತರವಾದ ಪ್ರಕ್ರಿಯೆ ಎಂದರು.

ಜನರ ಜೀವನ ಸುಗಮಗೊಳಿಸುವಂತಹ ವಿನ್ಯಾಸಗಳ ರಚನೆಯಾಗಬೇಕು

ಬೆಂಗಳೂರು ನಮ್ಮ ಪರಂಪರೆ, ಕಲೆ, ಸಂಸ್ಕೃತಿ, ಇಂಜಿನಿಯರಿಂಗ್, ಆವಿಷ್ಕಾರ, ಸೃಜನಾತ್ಮಕತೆ ಎಲ್ಲವೂ ಇಲ್ಲಿದೆ. ಆದರೆ ಇವೆಲ್ಲವನ್ನೂ ಸಂಯೋಜಿಸುವ ಅಗತ್ಯವಿದೆ. ಈ ಸಂಯೋಜನೆಯ ಫಲವಾಗಿ ರಚಿಸಲಾಗುವ ವಿನ್ಯಾಸಗಳೇ ಬ್ರ್ಯಾಂಡ್ ಬೆಂಗಳೂರಿನ ವಿನ್ಯಾಸಗಳಾಗಬೇಕು. ಕಾಲ ಚಲಿಸಿದಂತೆ ನಾವೂ ಮುಂದುವರೆಯಬೇಕು. ಹಲವಾರು ಸವಾಲುಗಳು ಮಾನವ ನಿರ್ಮಿತವೇ. ನಾನು ಕೆಲವು ಸವಾಲುಗಳನ್ನು ನಿಮ್ಮ ಮುಂದಿರಿಸುತ್ತೇನೆ. ಈಗ ಲಭ್ಯವಿರುವ ಮೂಲಭೂತಸೌಕರ್ಯಗಳನ್ನು ಬಳಸಿ ಜನರ ಜೀವನ ಸುಗಮಗೊಳಿಸುವಂತಹ ಮಾಡೆಲ್ ಗಳನ್ನು ವಿನ್ಯಾಸಗೊಳಿಸಬೇಕು.

Innovation Experience Exhibition to come up in Bengaluru says CM Basavaraj Bommai

ಈಗಿರುವ ಮೂಲಸೌಕರ್ಯಗಳನ್ನು ಬದಲಾಯಿಸದೇ ಅವುಗಳನ್ನು ಸುಧಾರಿಸುವ ಕೆಲಸವನ್ನು ಮಾಡುಬೇಕು. ಉದಾಹರಣೆಗೆ ಬೆಂಗಳೂರಿನ ಎಂಜಿರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಮಲ್ಲೇಶ್ವರಂ, ಇಂದಿರಾನಗರ, ಹೀಗೆ ಇಂತಹ ಪ್ರದೇಶಗಳನ್ನು ಜನರಿಗೆ ಅನುಕೂಲವಾಗುವಂತಹ, ಪರಂಪರೆಯನ್ನು ಉಳಿಸುವ ರೀತಿಯಲ್ಲಿ ಮರುವಿನ್ಯಾಸಗೊಳಿಸಬೇಕು. ಬೆಂಗಳೂರಿನಲ್ಲಿರುವ ಕೆರೆಗಳ ವಿನ್ಯಾಸವನ್ನು ಬದಲಿಸಬೇಕು. ನೀರು ನಿರ್ವಹಣೆ, ರಸ್ತೆ ನಿರ್ವಹಣೆ ಹಾಗೂ ವಾಣಿಜ್ಯ ನಿರ್ವಹಣೆಗಳನ್ನು ಎದುರಿಸಬೇಕೆನ್ನುವ ಸವಾಲುಗಳನ್ನು ತಮ್ಮ ಮುಂದಿಡುತ್ತೇನೆ ಎಂದರು.

ವಿನ್ಯಾಸಕಾರರು ತಾವು ರಚಿಸಿದ ವಿನ್ಯಾಸಗಳ ಬಗ್ಗೆ ಪ್ರಪಂಚಕ್ಕೆ ತಿಳಿಸಬೇಕು. ಬೆಂಗಳೂರು ನಗರವನ್ನು ಉತ್ತಮ ವಿನ್ಯಾಸಹೊಂದಿರುವ, ಜನಸ್ನೇಹಿಯಾಗಿರುವ ನಗರವನ್ನಾಗಿಸೋಣ. ಇಲ್ಲಿನ ಆವಿಷ್ಕಾರಗಳನ್ನು ಹಾಗೂ ವಿನ್ಯಾಸಗಳನ್ನು ಹೊರದೇಶದವರು ಸ್ಪೂರ್ತಿಯಾಗಿಸಿಕೊಳ್ಳುವಂತೆ ಕೆಲಸ ಮಾಡಬೇಕು. ಇದನ್ನು ಸರ್ಕಾರ ಎಲ್ಲ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.

ಐ.ಟಿ. ಬಿ.ಟಿ, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸ್ಟಾರ್ಟ್ ಅಪ್ ವಿಷನ್ ಗುಂಪಿನ ಅಧ್ಯಕ್ಷ ಪ್ರಶಾಂತ್ ಭೂಷಣ್ ಮೊದಲಾದವರು ಉಪಸ್ಥಿತರಿದ್ದರು.

English summary
the State's development, journey of innovation, achievers responsible for it and their achievements will be set up in Bengaluru, said Chief Minister Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X