ಶ್ರೀಗಳ ಜಾಗ ತುಂಬಲಿರುವ ಸಿದ್ದಲಿಂಗ ಸ್ವಾಮಿ ಅವರ ವ್ಯಕ್ತಿ ಚಿತ್ರ
Recommended Video

ತುಮಕೂರು, ಜನವರಿ 23: ನೂರಾರು ವರ್ಷಗಳ ಇತಿಹಾಸವಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಕಲಿಯುತ್ತಿರುವ, ಕೋಟ್ಯಂತರ ಮಂದಿ ಭಕ್ತಾದಿಗಳ ಹೊಂದಿರುವ ಸಿದ್ದಗಂಗಾ ಮಠ, ಶ್ರೀಗಳು ಇಲ್ಲದೆ ಅನಾಥವಾಗಿದೆ.
ಹಲವು ದಶಕಗಳಿಂದ ಮಠವನ್ನು, ಈಗಿರುವ ಉಚ್ರಾಯ ಸ್ಥಿತಿಗೆ ತಲುಪಸಿದ ಶಿವಕುಮಾರ ಸ್ವಾಮೀಜಿ ಅವರು ಕಾಲವಾಗಿದ್ದಾರೆ. ಈಗ ಎಲ್ಲರ ಕಣ್ಣುಗಳು ಕಿರಿಯ ಶ್ರೀಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ ಅವರ ಮೇಲೆ ನೆಟ್ಟಿವೆ. ಕೆಲವರು ಭರವಸೆಯ ಕಣ್ಣಿಂದ ನೋಡಿದರೆ ಇನ್ನು ಕೆಲವರು ಇವರ ಕೈಲಿ ಮಠ ನಡೆಸಲು ಸಾಧ್ಯವಾ ಎಂಬ ಅನುಮಾನದ ಕಣ್ಣುಗಳಿಂದಲೂ ನೋಡುತ್ತಿದ್ದಾರೆ.
ಸಿದ್ದಲಿಂಗ ಸ್ವಾಮಿಗಳು 2011 ರಲ್ಲಿಯೇ ಶಿವಕುಮಾರ ಸ್ವಾಮೀಜಿಗಳಿಂದ ಮಠದ ಅಧ್ಯಕ್ಷ ಪಟ್ಟಪಡೆದು ಆಗಿನಿಂದಲೂ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಸಿದ್ದಗಂಗಾ ಮಠವನ್ನು ನಡೆಸುತ್ತಾ ಬರುತ್ತಿದ್ದಾರೆ. ಶ್ರೀಗಳ ನೆರಳಾಗಿಯೇ ಇದ್ದು ಹಲವು ವರ್ಷಗಳ ಕಾಲ ಅವರ ಕಾರ್ಯ ವೈಖರಿ, ಅವರ ಜನಾನುರಾಗಿತನವನ್ನು ಗಮನಿಸಿದ್ದಾರೆ. ಮೇಲಾಗಿ ಸಿದ್ದಲಿಂಗ ಸ್ವಾಮಿಗಳು ಶಿವಕುಮಾರಸ್ವಾಮಿ ಅವರು ಮೆಚ್ಚಿ ಆರಿಸಿದ ಉತ್ತರಾಧಿಕಾರಿ ಹಾಗಾಗಿ ಅವರ ಸಾಮರ್ಥ್ಯದ ಮೇಲೆ ಅನುಮಾನಪಡುವ ಕಾರಣಗಳಿಲ್ಲ.

ವರ್ಷಗಳ ಹಿಂದೆಯೇ ಅಧಿಕಾರ ಹಸ್ತಾಂತರ
ಸಿದ್ದಗಂಗಾ ಮಠಕ್ಕೆ ಇಂದಿನಿಂದ ಸಿದ್ದಲಿಂಗ ಸ್ವಾಮಿಗಳು ಪೀಠಾಧಿಪತಿಗಳಾಗಿರುತ್ತಾರೆ. ಕೆಲವು ವರ್ಷಗಳ ಹಿಂದೆಯೇ ಸಿದ್ದಲಿಂಗ ಸ್ವಾಮಿಗಳನ್ನು ಶ್ರೀ ಮಠದ ಪೀಠಾಧಿಪತಿ ಮಾಡಲಾಗಿತ್ತು. ಆದರೂ ಸಹ ಸಿದ್ದಲಿಂಗಯ್ಯ ಅವರು ಪೀಠಾಧಿಪತಿ ಎಂದು ಅಹಂ ಅನ್ನು ತೋರದೆ ವಿನಯದಿಂದ ಶಿವಕುಮಾರಸ್ವಾಮೀಜಿ ಅವರ ನೆರಳಿನಲ್ಲೇ ಇದ್ದು ಕಾರ್ಯನಿರ್ವಹಿಸಿದರು.

ಕುಂಚಗಲ್‌ನಲ್ಲಿ ಜನಿಸಿರುವ ಸಿದ್ದಲಿಂಗ ಸ್ವಾಮಿ
ಸಿದ್ದಲಿಂಗ ಸ್ವಾಮಿಗಳು 1963 ರಲ್ಲಿ ಜುಲೈ 23 ರಂದು ಮಾಗಡಿಯ ಕಂಚುಗಲ್‌ನಲ್ಲಿ ಸದಾಶಿವಯ್ಯ ಮತ್ತು ಶಿವರುದ್ರಮ್ಮ ಅವರ ಪುತ್ರನಾಗಿ ಜನಿಸಿದ್ದರು. ಸಿದ್ದಲಿಂಗ ಸ್ವಾಮಿಗಳು ಪೂರ್ವಾಶ್ರಮದ ಹೆಸರು ವಿಶ್ವನಾಥ. ಕುಂಚಗಲ್ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸಿದ್ದಲಿಂಗ ಸ್ವಾಮಿಗಳು, ಸಿದ್ದಗಂಗಾ ಮಠಕ್ಕೆ ಪಿಯುಸಿ ಕಲಿಯಲು ಬಂದರು. ಆದರೆ ಅಂದು ಇದೇ ಮಠಕ್ಕೆ ಪೀಠಾಧಿಪತಿ ಆಗುವೆನೆಂಬ ಕಲ್ಪನೆಯೂ ಸಿದ್ದಲಿಂಗ ಸ್ವಾಮಿಗಳಿಗೆ ಇರಲಿಲ್ಲ.

ಸಿದ್ದಗಂಗಾ ಮಠದಲ್ಲೇ ಕಲಿತಿರುವ ಸಿದ್ದಲಿಂಗ ಸ್ವಾಮಿ
ಸಿದ್ದಗಂಗಾ ಹಳೆ ಮಠದಲ್ಲಿ ಸಂಸ್ಕೃತ ಮತ್ತು ವೇದಗಳನ್ನು ಅಭ್ಯಾಸ ಮಾಡಿದ ಸಿದ್ದಲಿಂಗ ಸ್ವಾಮಿಗಳು ಅಧ್ಯಾತ್ಮದ ಮೇಲೆ ಆಸಕ್ತಿ ಬೆಳೆಸಿಕೊಂಡರು ಅದೇ ಸಮಯದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಒಡನಾಟವೂ ದೊರಕಿತ್ತು. ಅವರ ಬಳಿ ಚರ್ಚೆಗಳು, ಅವರ ಸೇವೆಯಲ್ಲಿ ನಿರತರಾಗಿದ್ದ ಸಿದ್ದಲಿಂಗ ಸ್ವಾಮಿಗಳಲ್ಲಿನ ಸೇವಾಭಾವ, ತ್ಯಾಗ ಭಾವ ಗುರುತಿಸಿದ ಶಿವಕುಮಾರ ಸ್ವಾಮೀಜಿ ಅವರು ಸಿದ್ದಲಿಂಗ ಸ್ವಾಮಿ ಅವರನ್ನು 1988 ರಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದರು.

2011 ರಲ್ಲಿ ಮಠದ ಅಧಿಕಾರ ಹಸ್ತಾಂತರ
ಆ ನಂತರ 2011, ಆಗಸ್ಟ್ 04 ರಂದು ಸಿದ್ದಗಂಗಾ ಮಠದ ಅಧಿಕಾರವನ್ನು ಕಾನೂನು ಬದ್ಧವಾಗಿ ಸಿದ್ದಲಿಂಗ ಸ್ವಾಮಿ ಅವರಿಗೆ ನೀಡಲಾಯಿತು. ಈ ಕಾರ್ಯವನ್ನು ಶಿವಕುಮಾರ ಸ್ವಾಮಿಗಳವರೇ ನೆರವೇರಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಸ್ಥಳದಲ್ಲಿ ಹಾಜರಿದ್ದರು. ಆಗಲೇ ಅಧಿಕಾರ ಸಿಕ್ಕಿದ್ದರೂ ಸಹ ಶಿವಕುಮಾರ ಸ್ವಾಮಿ ಅವರ ಹಿಂದೆ ನಿಂತೇ ಅವರು ಮಠವನ್ನು ನಿಭಾಯಿಸಿದರೆ ವಿನಃ ಮಠದ ಮೇಲೆ ಅಧಿಕಾರ ಹೊಂದಿದವರಾಗಿ ಆಳ್ವಿಕೆ ಮಾಡಲಿಲ್ಲ.

ಸರ್ವಸ್ವನ್ನೂ ತ್ಯಾಗ ಮಾಡಿ ಕಟ್ಟಿದ ಮಠ
ಸಿದ್ದಗಂಗಾ ಶ್ರೀಗಳಿಗಿದ್ದ ಅಪಾರವಾದ ಧಾರ್ಮಿಕ ಪ್ರಭೆ ಸಿದ್ದಲಿಂಗ ಸ್ವಾಮಿಗಳಿಗೆ ಬರಲಾರದೇನೋ. ಶಿವಕುಮಾರ ಸ್ವಾಮೀಜಿ ಅವರು ಸರ್ವಸ್ವನ್ನೂ ತ್ಯಜಿಸಿ ಕಟ್ಟಿದ ಬೃಹತ್ ಸೇವಾ ಮಂದಿರ ಸಿದ್ದಗಂಗಾ ಮಠದ ಪೂರ್ಣ ಜವಾಬ್ದಾರಿ ಸಿದ್ದಲಿಂಗ ಸ್ವಾಮಿಗಳ ಹೆಗಲಮೇಲೆ ಇದೆ. ವಿಶ್ವಮಟ್ಟದಲ್ಲಿ ಹೆಸರುಗಳಿಸಿರುವ ಮಠವನ್ನು ಅದೇ ವೈಭವದಲ್ಲಿ, ಭಕ್ತಿ-ಭಾವ ಕೇಂದ್ರವಾಗಿ, ಸೇವಾ ಸಾಗರವಾಗಿ ಮುಂದುವರೆಸಿಕೊಂಡು ಹೋಗಬೇಕಿದೆ. ಶಿವಕುಮಾರ ಸ್ವಾಮಿ ಅವರೇ ಇಷ್ಟಪಟ್ಟು ಆರಿಸಿದ ಸಿದ್ದಲಿಂಗ ಸ್ವಾಮಿಗಳಿಗೆ ಆ ಶಕ್ತಿ, ಆ ಸಂಕಲ್ಪ ಇದೆ ಎಂದೇ ರಾಜ್ಯವು ನಂಬಿದೆ.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications