ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?

ಬೆಂಗಳೂರು, ಜು.14: ಮಲೆನಾಡು, ಕೊಡಗು, ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು ರಾಜ್ಯದಲ್ಲಿರುವ ಜಲಾಶಯಗಳ ಒಳಹರಿವು ಭಾನುವಾರ ಮಧ್ಯಾಹ್ನದಿಂದ ಹೆಚ್ಚಾಗಿದ್ದು, ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ.

ತುಂಗಾನದಿಯ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಿದೆ. ಲಿಂಗನಮಕ್ಕಿಯಲ್ಲಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಿದ್ದು, ಈಗ 1752.60 ಅಡಿ ನೀರು ಸಂಗ್ರಹವಾಗಿದೆ. 12,284 ಕ್ಯೂಸೆಕ್‌ ಒಳಹರಿವು ಇದೆ. 102 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಭದ್ರಾ ಜಲಾಶಯದಲ್ಲಿ ಗರಿಷ್ಠ ಮಟ್ಟ 186 ಅಡಿಗಳಿದ್ದು, ಈಗ ಜಲಾಶಯದಲ್ಲಿ 141 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 4,771ಕ್ಯೂಸೆಕ್‌ ಇದೆ. 117 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

krs dam

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು, ಹಾರಂಗಿ ಮತ್ತು ಕೆಆರ್‌ಎಸ್‌ ಜಲಾಶಗಳ ಒಳ ಹರಿವು ಹೆಚ್ಚಾಗಿದೆ. ಮೈಸೂರಿನ ಕೆಆರ್‌ಎಸ್‌‌ ಡ್ಯಾಂನ ಗರಿಷ್ಠ ಮಟ್ಟ 124 ಅಡಿಗಳಿದ್ದು, ಪ್ರಸ್ತುತ ಜಲಾಶಯದಲ್ಲಿ 83.50 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 3,000 ಕ್ಯೂಸೆಕ್‌ ಇದೆ. 350 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.[ಕರಾವಳಿ, ಮಲೆನಾಡಿನಲ್ಲಿ ಭಾರೀ ವರ್ಷಧಾರೆ]

ಹಾರಂಗಿ ಡ್ಯಾಂನ ಗರಿಷ್ಠ ಮಟ್ಟ 2,859 ಅಡಿಗಳಿದ್ದು, ಇಂದು ಜಲಾಶಯದಲ್ಲಿ 2,834.71 ಅಡಿಗಳಷ್ಟು ನೀರಿದೆ. ಜಲಾಶಯದ ಒಳ ಹರಿವು 2156 ಕ್ಯೂಸೆಕ್‌ ಇದೆ.

ಹಾಸನ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿದ್ದು ಗೊರೂರು ಹೇಮಾವತಿ ಜಲಾಶಯಯದಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳಿದ್ದು, ಪ್ರಸ್ತುತ ಜಲಾಶಯದಲ್ಲಿ 2877 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 3,695 ಕ್ಯೂಸೆಕ್‌ ಇದೆ. 250 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಕ್ಯೂಸೆಕ್‌ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಆಗಲಿದೆ.

ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?
ಜಲಾಶಯ ಗರಿಷ್ಠ ಮಟ್ಟ ಇಂದಿನ ನೀರಿನ ಮಟ್ಟ ಒಳ ಹರಿವು ಹೊರ ಹರಿವು
ಲಿಂಗನಮಕ್ಕಿ 1819 1752.60 12,284 102
ಭದ್ರಾ 186 141 4,771 117
ಹಾರಂಗಿ 2,859 2,834.71 2156 ----
ಕೆಆರ್‌ಎಸ್‌‌ 124 83.50 3,000 350
ಹೇಮಾವತಿ 2922 2877 3,695 250
ಕಬಿನಿ 2284 2273 12,000 1000
ಗೇರುಸೊಪ್ಪ 54.99 ಮೀ 49.75 ಮೀ. 3.758 --
ಕಾಳಿ 564 ಮೀ 522.79 ಮೀ. 4,771 ---
ಕದ್ರಾ 34.49 ಮೀ. 522.79 ಮೀ. 4,911 ---
ಕೊಡಸಳ್ಳಿ 75.49 ಮೀ. 70.88 ಮೀ. 1,599 --

*ನೀರಿನ ಮಟ್ಟ ಅಡಿಗಳಲ್ಲಿ
*ಒಳ ಹರಿವು ,ಹೊರಹರಿವು ಕ್ಯೂಸೆಕ್‌ ಲೆಕ್ಕದಲ್ಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+