ನಮೋ & ಪುಟಿನ್ ಎದುರು ಪಾಪಿ ಪಾಕಿಸ್ತಾನ ಪ್ರಧಾನಿಯ ನಾಯಿಪಾಡು... Indian PM Modi

150 ಕೋಟಿ ಜನಸಂಖ್ಯೆಗೆ ಎಂಟ್ರಿ ಕೊಡುತ್ತಿರುವ ಭಾರತದಲ್ಲಿ ಇದೀಗ ಸಂಚಲನ ಸೃಷ್ಟಿ ಆಗುತ್ತಿದೆ. ಯಾಕೆ ಅಂದ್ರೆ ಭಾರತ ಬಲಿಷ್ಠವಾಗಿ ಬೆಳೆದು ನಿಂತಿದೆ ಅಂತಾ ತುಳಿಯಲು ಶತ್ರುಗಳು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಭಾರತದ ಜೊತೆಗೆ ಸ್ನೇಹಿತನ ರೀತಿಯಲ್ಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರ್ ತನ್ನ ಅಸಲಿ ಬಣ್ಣ ಬಯಲು ಮಾಡಿದ್ದು, ಪಾಪಿ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದಾರೆ. ಭಾರತ ಕೂಡ ಎಲ್ಲಾ ಆಟಗಳಿಗೆ ತಕ್ಕ ಉತ್ತರ ನೀಡಿದೆ. ಹೀಗಿದ್ದಾಗಲೇ, ನಮೋ & ಪುಟಿನ್ ಎದುರು ಪಾಪಿ ಪಾಕಿಸ್ತಾನ ಪ್ರಧಾನಿಯ ನಾಯಿಪಾಡು...

ಭಾರತೀಯರಿಂದ ಮತ ಅಂದ್ರೆ ವೋಟ್ ಹಾಕಿಸಿಕೊಂಡು ಅಮೆರಿಕ ಅಧ್ಯಕ್ಷೀಯ ಎಲೆಕ್ಷನ್ ಗೆದ್ದಿದ್ದ ಇದೇ ಡೊನಾಲ್ಡ್ ಟ್ರಂಪ್ ದಿಢೀರ್ ಭಾರತೀಯರ ವಿರುದ್ಧವೇ ವಿಷ ಕಾರುತ್ತಿದ್ದಾರೆ. ಟ್ರಂಪ್ ಕಂಡ ಕಂಡ ದೇಶಗಳ ವಿರುದ್ಧ ತೆರಿಗೆ ಯುದ್ಧ ಮಾಡುತ್ತಿರುವ ಸಮಯದಲ್ಲೇ ಜಾಗತಿಕ ಆರ್ಥಿಕತೆ ಸೂಕ್ಷ್ಮ ಪರಿಸ್ಥಿತಿ ತಲುಪಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಜಗತ್ತು ಮತ್ತೊಂದು ಘೋರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಇಂತಹ ಸಮಯದಲ್ಲೇ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಎಂಟ್ರಿ ಕೊಟ್ಟು, ಅಮೆರಿಕ & ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಇದೇ ಸಮಯದಲ್ಲೇ ಚೀನಾ ನೆಲದಲ್ಲಿ, ಪಾಪಿ ಪಾಕಿಸ್ತಾನ ಪ್ರಧಾನಿಯ ನಾಯಿಪಾಡು ಇದೀಗ ಫುಲ್ ವೈರಲ್ ಆಗುತ್ತಿದೆ...

Indian Prime Minister Narendra Modi Name Is On Trend For This Reason

ಪಾಕಿಸ್ತಾನದ ಪಾಡು ಹೀನಾಯ...

ಹೌದು, ಚೀನಾ ನೆಲದಲ್ಲಿ ನಡೆದ ಮಹತ್ವದ ಸಮ್ಮೇಳನದಲ್ಲಿ ಪಾಕಿಸ್ತಾನ ಪ್ರಧಾನಿಯನ್ನು ಒಂದು ಮೂಲೆಯಲ್ಲಿ ನಿಲ್ಲಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಪಾಕಿಸ್ತಾನದ ಪಾಡು ಇಷ್ಟು ಕನಿಷ್ಠವಾಗಿದೆಯಾ? ಅನ್ನೋ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಒಟ್ನಲ್ಲಿ ಭಾರತದ ವಿರೋಧಿಗಳಿಗೆ ಇಂತಹದ್ದೇ ಪರಿಸ್ಥಿತಿ ಅಂತಾ ಕೂಡ ಕೆಲವರು ಈಗ ಕಮೆಂಟ್ ಹಾಕುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈಗ ಪಾಕಿಸ್ತಾನ ತನ್ನ ಮರ್ಯಾದಿ ತಾನೇ ಕಳೆದುಕೊಂಡು ನರಳುವ ಪರಿಸ್ಥಿತಿಗೆ ತಲುಪಿದೆ!

ಪಾಕ್ ಪ್ರಧಾನಿ ವಿಡಿಯೋ ವೈರಲ್!

ಭಾರತ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದು, ಜಾಗತಿಕವಾಗಿ ಭಾರತದ ಹೆಸರು ಬಲಿಷ್ಠವಾದ ದೇಶಗಳ ಸಾಲಿಗೆ ಬಂದು ನಿಂತಿದೆ. ಆದರೆ ಭಾರತದ ಜೊತೆಯಲ್ಲೇ ಸ್ವಾತಂತ್ರ್ಯ ಪಡೆದಿರುವ ಪಾಕಿಸ್ತಾನ ಮಾತ್ರ ಇವತ್ತಿಗೂ ಭಿಕ್ಷೆ ಬೇಡಿಕೊಂಡು ಬದುಕುವ ಪರಿಸ್ಥಿತಿ ಇದೆ. ಹೀಗಿದ್ದಾಗಲೇ ಪಾಕಿಸ್ತಾನ ಪ್ರಧಾನಿಯ ವಿಡಿಯೋ ಸಾಕಷ್ಟು ನಗೆಪಾಟಲಿಗೆ ಕೂಡ ಈಡು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+