Ratan Tata: ರತನ್ ಟಾಟಾ ನಿಧನದ ಸುದ್ದಿ ಕೇಳಿ ನಲುಗಿದ ಉದ್ಯಮ ವಲಯ

ರತನ್ ಟಾಟಾ ಇನ್ನಿಲ್ಲ.. ಈ ಸುದ್ದಿ ಕೇಳಿದ ಪ್ರತಿಯೊಬ್ಬ ಭಾರತೀಯರ ಎದೆಯಲ್ಲಿ ಈಗ ನೋವು ಶುರುವಾಗಿದೆ. ರತನ್ ಟಾಟಾ ಅವರ ಸಾವಿನ ಸುದ್ದಿ ಇದೀಗ ಜಗತ್ತಿನಾದ್ಯಂತ ಕಿಚ್ಚು ಹೊತ್ತಿಸಿದೆ. ದೇಶದ ಉದ್ಯಮ ವಲಯಕ್ಕೆ ದೊಡ್ಡ ಸೇವೆ ಸಲ್ಲಿಸಿ, ತಮ್ಮ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟಿದ್ದ ವ್ಯಕ್ತಿ ಇಂದು ಶತಕೋಟಿ ಭಾರತೀಯರನ್ನು ಬಿಟ್ಟು ಹೋಗಿದ್ದಾರೆ. ಈ ಮೂಲಕ ಭಾರತೀಯ ಉದ್ಯಮ ವಲಯವು ಇದೀಗ, ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನಲುಗಿ ಹೋಗಿದೆ.

ಭಾರತೀಯರ ಪಾಲಿಗೆ ರತನ್ ಟಾಟಾ ಅವರು ಎಂದೆಂದಿಗೂ ಲೆಜೆಂಡ್ ಅಂತಾ ಹೇಳಬಹುದು. ಎಲ್ಲವೂ ಚೆನ್ನಾಗಿದೆ, ರತನ್ ಟಾಟಾ ಅವರ ಆರೋಗ್ಯವೂ ಚೆನ್ನಾಗಿದೆ ಎನ್ನವಾಗಲೇ ಇದೀಗ ನಡೆಯಬಾರದ ಘಟನೆ ನಡೆದು ಹೋಗಿದೆ. ರತನ್ ಟಾಟಾ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ರತನ್ ಟಾಟಾ ಅವರ ಅಭಿಮಾನಿಗಳಿಗೆ ತೀವ್ರ ಆಘಾತವೇ ಎದುರಾಗಿದೆ. ಭಾರತದಲ್ಲಿ ಉದ್ಯಮ ವಲಯವನ್ನು ಜಗತ್ತಿನ ಮಟ್ಟದಲ್ಲಿ ಎದ್ದು ನಿಲ್ಲುವಂತೆ ಬೆಳೆಸಿ, ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ ರತನ್ ಟಾಟಾ ಅವ್ರು ಶತಕೋಟಿ ಭಾರತೀಯರ ಆರಾಧ್ಯ ದೈವವೇ ಆಗಿದ್ದರು.

Indian Industrialists Are In Shock After Ratan Tata Passed Away

ರತನ್ ಟಾಟಾ ಸಮಾಜದ ಒಳಿತಿಗಾಗಿ ಮಾಡದೇ ಇರುವ ಕೆಲಸಗಳೇ ಇಲ್ಲ, ಯಾಕೆ ಅಂದರೆ ರತನ್ ಟಾಟಾ ಅವರು ಕಟ್ಟುತ್ತಿದ್ದ ಪ್ರತಿಯೊಂದು ಉದ್ಯಮದಲ್ಲೂ ಸಮಾಜ ಸೇವೆಗೆ ಬೇಕಾಗಿದ್ದ ವಿಚಾರಗಳು ಇರುತ್ತಿದ್ದವು. ಹೀಗಿದ್ದರೂ ರತನ್ ಟಾಟಾ ಅವರು ಕೋಟಿ ಕೋಟಿ ರೂಪಾಯಿ ದಾನ ಮಾಡಿ ಮಾದರಿ ಆಗಿದ್ದರು. ಹೀಗಿದ್ದಾಗಲೇ ರತನ್ ಟಾಟಾ ಅಭಿಮಾನಿಗಳಿಗೆ ಆಘಾತವೇ ಎದುರು ಬಂದು...

ಜಗತ್ತಿಗೇ ಆಘಾತದ ಸಿಡಿಲು ಬಡಿದಿದೆ

ರತನ್ ಟಾಟಾ ಅವರ ಆರೋಗ್ಯದ ಬಗ್ಗೆ ಮೊನ್ನೆಯಿಂದ ಕೂಡ ಸಾಕಷ್ಟು ಊಹಾಪೋಹ & ಸುಳ್ಳು ಸುದ್ದಿಗಳು ಓಡಾಡುತ್ತಿವೆ ಎಂಬ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ ಈ ಕುರಿತು ಖುದ್ದು ರತನ್ ಟಾಟಾ ಅವರೇ ಒಂದು ಸಂದೇಶ ನೀಡಿ, ನಾನು ಚೆನ್ನಾಗಿದ್ದೀನಿ. ನನ್ನ ಆರೋಗ್ಯವು ಚನ್ನಾಗಿ ಇದೆ. ನನಗೆ ವಯೋಸಹಜ ವೈದ್ಯಕೀಯ ಪರೀಕ್ಷೆಗಳು ಇರುವ ಕಾರಣ ಆಸ್ಪತ್ರೆಯಲ್ಲಿ ಪರೀಕ್ಷೆಗಾಗಿ ಬಂದಿದ್ದೇನೆ ಎಂದು ತಿಳಿಸಿದ್ದರು. ಆ ನಂತರ ರತನ್ ಟಾಟಾ ಅವರ ಫ್ಯಾನ್ಸ್ & ಶತಕೋಟಿ ಭಾರತೀಯರು ನಿಟ್ಟುಸಿರು ಬಿಟ್ಟಿದ್ದರು. ಹೀಗಿದ್ದಾಗಲೇ ಅಕ್ಟೋಬರ್ 9ರ ಬುಧವಾರ ಭಾರತದ ಉದ್ಯಮ ವಲಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಆಘಾತದ ಸಿಡಿಲು ಬಡಿದಿದೆ.

ಕಂಬನಿ ಮಿಡಿದ ಗಣ್ಯರು...

ರತನ್ ಟಾಟಾ ಅವರ ಹೆಸರು ಭೂಮಿ ಇರುವವರೆಗೂ, ಮನುಷ್ಯರು & ಮನುಷ್ಯತ್ವ ಇರುವ ತನಕವೂ ಬದುಕಿ ಉಳಿಯಲಿದೆ ಎಂಬುದು ಅವರ ಅಭಿಮಾನಿಗಳ ಮಾತು. ಯಾಕಂದ್ರೆ ಆ ರೀತಿಯ ದಾನ & ಧರ್ಮದ ಕಾರ್ಯಗಳನ್ನ ರತನ್ ಟಾಟಾ ಮಾಡಿದ್ದಾರೆ. ಇದೇ ಕಾರಣಕ್ಕೆ, ರತನ್ ಟಾಟಾ ಅವರ ಬದುಕನ್ನು ಕೋಟ್ಯಂತರ ಯುವಕರು ಫಾಲೋ ಮಾಡುತ್ತಿದ್ದಾರೆ. ಈ ರೀತಿ ಜಗತ್ತಿಗೇ ಮಾದರಿ ಆಗಿದ್ದ ಉದ್ಯಮಿ ರತನ್ ಟಾಟಾ ಅವರ ಅಗಲಿಕೆ ಇಡೀ ಜಗತ್ತಿನಲ್ಲೇ ನೋವು ತರಿಸಿದೆ. ರತನ್ ಟಾಟಾ ಅವರ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+