"ವಿದೇಶಿ ವೈದ್ಯರಿಗಿಂತಲೂ ಭಾರತೀಯ ವೈದ್ಯರು ಬುದ್ಧಿವಂತರು''

ಬಡತನ ನಿರ್ಮೂಲನೆ ಆಗಬೇಕಾದರೆ ಒಳ್ಳೆಯ ಆರೋಗ್ಯ ವ್ಯವಸ್ಥೆ ಗಟ್ಟಿಯಾಗಿರಬೇಕು. ಆ ನಿಟ್ಟಿನಲ್ಲಿ ಪಧಾನ ಮಂತ್ರಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ ಯೋಜನೆ ಜಾರಿ ಮಾಡಿದ್ದಾರೆ. ಕರ್ನಾಟಕದಲ್ಲಿ 63 ಲಕ್ಷ ಜನ ಆಯುಷ್ಮಾನ್ ಆರೋಗ್ಯ ಕಾರ್ಡ್ ಹೊಂದಿದ್ದು 2 ಕೋಟಿ ಜನ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಅಶೋಕ ಆಸ್ಪತ್ರೆಯಲ್ಲಿ ನೂತನ ಕ್ಯಾಥಲ್ಯಾಬ್ ಹಾಗೂ ಡಯಾಲಿಸಿಸ್ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಶೋಕ ಆಸ್ಪತ್ರೆ ಕ್ಯಾಥಲ್ಯಾಬ್ ಮತ್ತು ಡಯಾಲಿಸಿಸ್ ಉದ್ಘಾಟನೆಗೆ ಬಂದಾಗ ನಮ್ಮ ಅಶೋಕ್ ಹುಳಿಕುಪ್ಪೆ ಅವರು ನೆನಪಾದರು. ಅವರ ಮಗಳು ಮತ್ತು ಅಳಿಯ ವೈದ್ಯರಾಗಿದ್ದರಿಂದ ಒಳ್ಳೆಯ ಆಸ್ಪತ್ರೆ ಮಾಡಬೇಕೆಂಬ ಬಯಕೆ ಅವರದಾಗಿತ್ತು. ಅವರ ಸದುದ್ದೇಶ ಇವತ್ತು ಈಡೇರಿದೆ. ಇವತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿರುವುದು ನಮಗೆ ಬಹಳ ಸಂತೋಷ ತಂದಿದೆ. ಗಂಡ ಹೆಂಡತಿ ಬಹಳ ಕಷ್ಟ ಪಟ್ಟು ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಈ ಆಸ್ಪತ್ರೆ ಪರಿಪೂರ್ಣ ಆಗಿರುವುದಕ್ಕೆ ಬಂಗಾರ ಶೆಟ್ಟರು ಮತ್ತು ವರ್ಷಾ ಬಂಗಾ‌ರ್ ಶೆಟ್ಟರಿಗೆ ಅಭಿನಂದಿಸಿರು.

Indian Doctors Smarter Than Foreign Doctors Basavaraj Bommai

ಪ್ರತಿದಿನ ವೈದ್ಯರಿಗೆ ಪರೀಕ್ಷೆ ಇರುತ್ತದೆ. ಒಬ್ಬ ಎಂಜನೀಯರ್ ಹೇಗಿದ್ದಾನೆ ಎನ್ನುವುದು ಗೊತ್ತಾಗಲು ಒಂದು ವರ್ಷ ಬೇಕಾಗುತ್ತದೆ. ಒಬ್ಬ ಶಿಕ್ಷಕ ಹೇಗಿದ್ದಾನೆ ಎಂದು ತಿಳಿಯಲು ಹದಿನೈದು ವರ್ಷ ಬೇಕು. ಆದರೆ, ವೈದ್ಯ ಹೇಗಿದ್ದಾನೆ ಎಂದು ತಿಳಿಯಲು ಒಂದು ವಾರ ಸಾಕು. ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಮಾತ್ರೆ ಕೊಟ್ಟು, ಇಂಜಕ್ಷನ್ ಕೊಟ್ಟರೆ ಕಡಿಮೆಯಾದರೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ. ಅವರಿಗೆ ಪ್ರತಿದಿನ ಪರೀಕ್ಷೆ ಇರುತ್ತದೆ. ವೈದ್ಯಕೀಯ ವೃತ್ತಿ ನೋಬಲ್ ಪ್ರೊಫೇಷನ್, ಅದಕ್ಕಾಗಿ ಸಮಾಜದಲ್ಲಿ ವೈದ್ಯರಿಗೆ ಗೌರವ ಇದೆ ಎಂದು ವೈದ್ಯರ ಕಾರ್ಯ ಕುರಿತು ತಿಳಿಸಿದರು.

ಹೃದಯ ಖಾಯಿಲೆ ಬಗ್ಗೆ ನಾನು ಬಹಳ ಪರಿಣಿತಿ ಹೊಂದಿದ್ದೇನೆ. ನಮ್ಮ ತಂದೆ, ತಾಯಿ ಹಾಗೂ ನನಗೂ ಹೃದಯದ ಖಾಯಿಲೆ ಇದೆ. ನಮ್ಮ ತಂದೆಯವರಿಗೆ ಆಪರೇಷನ್ ಆಗಿತ್ತು. ಅವತ್ತೇ ನಮ್ಮ ತಾಯಿಗೆ ಹಾರ್ಟ್ ಆಟ್ಯಾಕ್ ಆಯಿತು. ನನಗೆ ಕಾಲು ನೋವಾಗಿತ್ತು. ಅದನ್ನು ಚೆಕ್ ಮಾಡಲು ಹೋದಾಗ ಹಾರ್ಟ್ ಆಪರೇಷನ್ ಮಾಡಬೇಕೆಂದರು. ಬೈಪಾಸ್ ಸರ್ಜರಿ ಮಾಡಿದರು. ಹೃದಯ ಚನ್ನಾಗಿಲ್ಲ ಎಂದರೆ ಬಿಪಿ ವ್ಯತ್ಯಾಸವಾಗುತ್ತದೆ. ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಒತ್ತಡದ ಜೀವನ ಶೈಲಿಯಿಂದ ಡಯಾಬಿಟಿಕ್ ಹಾರ್ಟ್ ಪ್ರಾಬ್ರಮ್ ಆಗುತ್ತದೆ. ನಾವು ಕಿಮ್ಸ್‌ನಲ್ಲಿ 10 ಕೋಟಿ ವೆಚ್ಚದಲ್ಲಿ ಕ್ಯಾಪ್ ಲ್ಯಾಬ್ ಆರಂಭಿಸಿದ್ದೇವು. ಹತ್ತು ವರ್ಷದ ನಂತರ ಅದು ಆರಂಭವಾಯಿತು. ಅಂತದರಲ್ಲಿ ಇಲ್ಲಿ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಲಭ್ಯ ಇರುವಂತೆ ಮಾಡಿರುವುದು ಖುಷಿಯಾಯಿತು.

ನಾನು ಸಿಎಂ ಆಗಿದ್ದಾಗ ಹಲವಾರು ಕೆಲಸ ಮಾಡಿದ್ದ ಅದರಲ್ಲಿ ಮನಸಿಗೆ ಖುಷಿಯಾಗುವ ಕೆಲವು ಕೆಲಸ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ದಿನಕ್ಕೆ ಮೊದಲು ಡಯಾಲಿಸಿಸ್ 30 ಸಾವಿರ ಸೈಕಲ್ ಇತ್ತು. ಅದನ್ನು 60 ಸಾವಿರಕ್ಕೆ ಹೆಚ್ಚಳ ಮಾಡಿದ್ದೆ. ಅದೇ ರೀತಿ ಕ್ಯಾನರಿಗೆ ಕಿಮೊ ಥೆರಪಿ 30 ರಿಂದ 60 ಸಾವಿರಕ್ಕೆ ಹೆಚ್ಚಿಸಿದ್ದೆವು. ತುರ್ತು ವೈದ್ಯಕೀಯ ಚಿಕಿತ್ಸೆ ಇನ್ನೂ ಅಗತ್ಯವಿದೆ. ನಮ್ಮ ದೇಶದ ವೈದ್ಯರು ವಿಶ್ವದ ಎಲ್ಲ ವೈದ್ಯರಿಗಿಂತ ಬುದ್ಧಿವಂತರಿದ್ದಾರೆ. ನಮ್ಮ ಭಾರತೀಯ ವೈದ್ಯರ ಮೇಲೆ ಅಮೇರಿಕ ಯುರೋಪ ಜನರು ನಂಬಿಕೆ ಇಟ್ಟಿದ್ದಾರೆ. 16, 17ನೇ ಶತಮಾನದಲ್ಲಿ ಅಮೇರಿಕಾಕ್ಕೆ ಹೋಗಿರುವ ನಮ್ಮ ಭಾರತೀಯ ವೈದ್ಯರು. ಅಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಈಗಲೂ ಶೇಕಡಾ 10 ರಷ್ಟು ಅಮೇರಿಕನ್ನರು ಭಾರತೀಯ ವೈದ್ಯರನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+