Independence Day 2026: ಶೋಭಾ ಹಿಲ್‌ವ್ಯೂನಲ್ಲಿ ಮೊಳಗಿದ ಸ್ವಾತಂತ್ರ್ಯದ ಸ್ಫೂರ್ತಿ, ದೇಶ ಭಕ್ತಿ

ಬೆಂಗಳೂರು: ನಗರದ ಕನಕಪುರ ರಸ್ತೆಯ ಶೋಭಾ ಹಿಲ್‌ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ 80ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯೊಂದಿಗೆ ಉತ್ಸಾಹದಿಂದ ಆಚರಿಸಿದರು.

ಸತ್ಯಾಗ್ರಹ, ಪ್ರತಿಭಟನೆ ಹಾಗೂ ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದ ಏಕೈಕ ರಾಷ್ಟ್ರ ಭಾರತ. ಈ ಸಂದರ್ಭದಲ್ಲಿ ನಿವಾಸಿಗಳು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ್, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ನಾಯಕರ ತ್ಯಾಗವನ್ನು ಭಕ್ತಿಪೂರ್ವಕವಾಗಿ ಸ್ಮರಿಸಿ ಗೌರವ ಸಲ್ಲಿಸಿದರು.

Independence Day

ಸಮುಚ್ಚಯದ ಭದ್ರತಾ ಸಿಬ್ಬಂದಿ ನಡೆಸಿದ ಶಿಸ್ತುಬದ್ಧ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡುವುದರೊಂದಿಗೆ ದೇಶಭಕ್ತಿಯನ್ನು ಪ್ರತಿಯೊಬ್ಬರಲ್ಲೂ ಅನುರಣಿಸುವಂತೆ ಮಾಡಿತು. ಕಾರ್ಯಕ್ರಮಕ್ಕೆ ಸಮುಚ್ಚಯದ ನಿವಾಸಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ STPIಯ ನಿವೃತ್ತ ಮಾಜಿ ಜುರಿಸ್ಡಿಕ್ಷನಲ್ ನಿರ್ದೇಶಕ ಶ್ರೀ ಸಂಜಯ್ ತ್ಯಾಗಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಗರಿಮೆ ಹೆಚ್ಚಿಸಿದರು.

ತ್ಯಾಗಿ ಅವರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತ ಎದುರಿಸಿದ ಸವಾಲುಗಳನ್ನು ಮೆಲುಕು ಹಾಕಿ, ಕಳೆದ ಹಲವು ದಶಕಗಳಲ್ಲಿ ಭಾರತ ಸಾಧಿಸಿರುವ ಅದ್ಭುತ ಪ್ರಗತಿಯನ್ನು ವಿವರಿಸಿದರು. ಸಮುದಾಯದಲ್ಲಿ ಸಾಮರಸ್ಯ ಹಾಗೂ ಗೌರವದಿಂದ ಬದುಕಬೇಕು. ಇಂದಿನ ಜಗತ್ತಿನಲ್ಲಿ ನಿಜವಾದ ಸ್ವಾತಂತ್ರ್ಯವೆಂದರೆ ದ್ವೇಷ, ಅಸೂಯೆ, ದಾಸ್ಯ, ಅನಾರೋಗ್ಯ ಹಾಗೂ ಸಂಕುಚಿತ ಮನೋಭಾವದಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳುವುದು. ವ್ಯಕ್ತಿ ಮತ್ತು ಸಮಾಜವನ್ನು ಬಲಪಡಿಸುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಂದೇ ಮಾತರಂನ 150ನೇ ವರ್ಷಾಚರಣೆಯ ಅಂಗವಾಗಿ ಹಾಗೂ ಭಾರತ ಸರ್ಕಾರದ ಉಪಕ್ರಮದಂತೆ, ಧ್ವಜಾರೋಹಣಕ್ಕೂ ಮುನ್ನ ವಂದೇ ಮಾತರಂ ಗೀತೆಯನ್ನು ಹಾಡಿದ್ದು ನಮ್ಮ ಸಮುದಾಯದ ಆಚರಣೆಯ ವಿಶೇಷ ಆಕರ್ಷಣೆಯಾಗಿತ್ತು. ಹೃದಯಸ್ಪರ್ಶಿಯಾಗಿ ಮೂಡಿಬಂದ ಈ ಗೀತೆಯು ದೇಶಭಕ್ತಿಯ ಭಾವ ಹೆಚ್ಚಿಸಿತು.

ದೇಶಕ್ಕೆ 80, ಹೆಚ್ಚಿದೆ ವೇಗ ವಿಶ್ವಗುರುವಾಗುವತ್ತ

ಅಪಾರ್ಟ್‌ಮೆಂಟ್ ಹಿರಿಯ ನಿವಾಸಿ ಹಾಗೂ Louis Dreyfus Companyಯಲ್ಲಿ Coffee International Execution ವಿಭಾಗದ ಮುಖ್ಯಸ್ಥರಾದ ಶ್ರೀ ಎಚ್. ಪ್ರಹ್ಲಾದ್ ರಾವ್ ಅವರು ತಮ್ಮ ಚುಟುಕುಗಳನ್ನು ಪ್ರಸ್ತುತಪಡಿಸಿ, ಕಾರ್ಯಕ್ರಮದ ಕಳೆ ಹೆಚ್ಚಿಸಿದರು.
"ಮನುಷ್ಯನಿಗೆ 80 ವರ್ಷವಾದಾಗ
ಅವನ/ಅವಳ ಜೀವನದ ವೇಗ ನಿಧಾನವಾಗುತ್ತದೆ.
ಭಾರತಕ್ಕೆ 80 ವರ್ಷವಾದಾಗ
ಅದರ ವೇಗ ಮತ್ತಷ್ಟು ಹೆಚ್ಚುತ್ತದೆ-
ವಿಶ್ವಗುರುವಾಗುವತ್ತ..." ಎಂಬ ಚುಟುಕು ವಾಚಿಸುವ ಮೂಲಕ ಭಾರತದ ಆರ್ಥಿಕ ಹಾಗೂ ಅಧ್ಯಾತ್ಮಿಕವಾಗಿ ಹೇಗೆ ಬೆಳೆಯುತ್ತಿದೆ ಎಂಬುದನ್ನು ಮನಮುಟ್ಟುವಂತೆ ನಾಲ್ಕು ನಾಲ್ಕೇ ಸಾಲುಗಳ "Bharath at 80"ಯಲ್ಲಿ ಹೇಳಿದರು.

ನಂತರ ಶೋಭಾ ಹಿಲ್ವ್ಯೂ ಮಕ್ಕಳು ನೆರೆದವರ ದೇಶ ಭಕ್ತಿ ಹೆಚ್ಚಿಸುವಂಥ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಸೆಳೆದರು. ದೇಶಭಕ್ತಿ ಗೀತೆಗಳು ಮತ್ತು ಮನಮೋಹಕ ನೃತ್ಯ ಪ್ರದರ್ಶನಗಳು ಎಲ್ಲರನ್ನೂ ರಂಜಿಸಿದವು. ಅವರ ಉತ್ಸಾಹ, ಆತ್ಮವಿಶ್ವಾಸ ಮತ್ತು ಪ್ರತಿಭೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿ, ಈ ವಿಶೇಷ ದಿನದ ಕಳೆ ಹೆಚ್ಚಿಸಿತು.

ಮಕ್ಕಳಿಂದ ಮಳಿಗೆ

ಸಂಜೆ ಮಕ್ಕಳಿಂದ ಆಯೋಜಿಸಿದ್ದ ವಿವಧ ಮಳಿಗೆಗಳು ಮತ್ತೊಂದು ಆಕರ್ಷಣೀಯವಾಗಿತ್ತು. ಮಕ್ಕಳು ಸ್ವತಃ ತಯಾರಿಸಿದ ಕರಕುಶಲ ವಸ್ತುಗಳು ಹಾಗೂ ರುಚಿಕರ ತಿಂಡಿ ತಿನಿಸುಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಕೆಲ ಮಕ್ಕಳು ಗಣಿತದ ಒಗಟುಗಳನ್ನೂ ಪ್ರದರ್ಶಿಸಿದರು. ಈ ಮಳಿಗೆಗಳಿಂದ ಸಂಗ್ರಹವಾಗುವ ಹಣವನ್ನು ಸೇನಾ ಕಲ್ಯಾಣ ನಿಧಿಗೆ ದೇಣಿಗೆಯಾಗಿ ನೀಡಲಾಗುತ್ತಿರುವುದು ಶ್ಲಾಘನೀಯ. ಒಟ್ಟಾರೆ, ಶೋಭಾ ಹಿಲ್‌ವ್ಯೂನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯು ಪ್ರತಿಯೊಬ್ಬರ ಹೃದಯದಲ್ಲೂ ದೇಶಭಕ್ತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದ ಅದ್ಭುತ, ಅರ್ಥಪೂರ್ಣ ಮತ್ತು ಸ್ಮರಣೀಯ ಆಚರಣೆಯಾಯಿತು.

ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಪುರಂದರ ದಾಸರ ಆರಾಧನೆ, ಸಂಕ್ರಾತಿ, ಯೋಗ ಹಾಗೂ ಪರಿಸರ ದಿನ ಸೇರಿ ವಿವಿಧ ದಿನಗಳನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಸಂಪೂರ್ಣ ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸುವುದು ವಿಶೇಷ. ಇದು ಜೆನ್ ಜೀ ಯುಗ. ನಮ್ಮ ಸಂಸ್ಕೃತಿ, ಭಾಷೆ, ಹಬ್ಬ ಹರಿದಿನಗಳನ್ನು ನಿರ್ಲಕ್ಷಿಸುತ್ತಾರೆಂಬ ಅಪವಾದ ಇಲ್ಲಿನ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಹಿರಿಯರೊಂದಿಗೆ ಕೈ ಜೋಡಿಸಿ ಪ್ರತಿಯೊಂದೂ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವುದು ಮತ್ತೊಂದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+