ಆ.15ರ ಧ್ವಜಾರೋಹಣಕ್ಕೆ 30 ಸಚಿವರ ನೇಮಕ; ಒಬ್ಬ ಸಚಿವರಿಗೆ ತಪ್ಪಿದ ಅವಕಾಶ! ಯಾವ ಜಿಲ್ಲೆಗೆ ಯಾರು?

ಬೆಂಗಳೂರು: ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲು ಸಚಿವರನ್ನು ನೇಮಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಉಳಿದ 30 ಜಿಲ್ಲೆಗಳಲ್ಲಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಯಾವುದೇ ಕಾರಣದಿಂದ ನಿಯೋಜಿತ ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರಾಗಿದ್ದಲ್ಲಿ, ಅನಾರೋಗ್ಯ ಅಥವಾ ಇತರ ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ರಾಷ್ಟ್ರಧ್ವಜಾರೋಹಣ ನೆರವೇರಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

Independence Day 2026 30 Ministers Assigned Flag Hoisting Duties Across Karnataka One Left Out

ಇನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ಬಾರಿ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.
ಇದೇ ವೇಳೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಈ ಬಾರಿ ಯಾವುದೇ ಜಿಲ್ಲೆಯಲ್ಲಿ ಧ್ವಜಾರೋಹಣದ ಜವಾಬ್ದಾರಿ ನೀಡಲಾಗಿಲ್ಲ. ಕಳೆದ ವರ್ಷ ಅವರು ಹಾಸನ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು. ಆದರೆ ಈ ಬಾರಿ ಬೆಂಗಳೂರಿನ ರಾಜ್ಯಮಟ್ಟದ ಕಾರ್ಯಕ್ರಮದ ಜವಾಬ್ದಾರಿಯನ್ನು ಅವರು ನಿಭಾಯಿಸಲಿದ್ದಾರೆ.

ಸಚಿವರ ಪಟ್ಟಿ ಇಲ್ಲಿದೆ

* ತುಮಕೂರು: ಡಾ. ಜಿ. ಪರಮೇಶ್ವರ

* ಬೆಂಗಳೂರು ಗ್ರಾಮಾಂತರ: ಕೆ. ಹೆಚ್. ಮುನಿಯಪ್ಪ

* ಚಿಕ್ಕಮಗಳೂರು: ಕೆ.ಜೆ. ಜಾರ್ಜ್

* ವಿಜಯಪುರ: ಎಂ. ಬಿ. ಪಾಟೀಲ್

* ಕೋಲಾರ: ರಾಮಲಿಂಗಾರೆಡ್ಡಿ

* ಬೆಳಗಾವಿ: ಸತೀಶ್ ಜಾರಕಿಹೊಳಿ

* ಕಲಬುರಗಿ: ಪ್ರಿಯಾಂಕ್ ಖರ್ಗೆ

* ದಕ್ಷಿಣ ಕನ್ನಡ: ಯು. ಟಿ. ಖಾದರ್

* ಬೀದರ್: ಈಶ್ವರ್ ಖಂಡ್ರೆ

* ಮೈಸೂರು: ಡಾ. ಯತೀಂದ್ರ ಸಿದ್ದರಾಮಯ್ಯ

* ಚಿಕ್ಕಬಳ್ಳಾಪುರ: ಸುರೇಶ್ ಬಿ. ಎಸ್

* ಯಾದಗಿರಿ: ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್

* ರಾಯಚೂರು: ಅಜಯ್ ಸಿಂಗ್

* ಬೆಂಗಳೂರು ದಕ್ಷಿಣ: ಹೆಚ್. ಸಿ. ಬಾಲಕೃಷ್ಣ

* ಗದಗ: ಬಸವರಾಜ್ ರಾಯರೆಡ್ಡಿ

* ಮಂಡ್ಯ: ಎನ್. ಚೆಲುವರಾಯಸ್ವಾಮಿ

* ಉತ್ತರ ಕನ್ನಡ: ಲಕ್ಷ್ಮಣ್ ಸಂಗಪ್ಪ ಸವದಿ

* ಶಿವಮೊಗ್ಗ: ಮಧು ಬಂಗಾರಪ್ಪ

* ದಾವಣಗೆರೆ: ಎಸ್. ಎಸ್. ಮಲ್ಲಿಕಾರ್ಜುನ್

* ಬಳ್ಳಾರಿ: ಬಿ. ನಾಗೇಂದ್ರ

* ಕೊಡಗು: ಪಿ. ಎಂ. ನರೇಂದ್ರಸ್ವಾಮಿ

* ಚಾಮರಾಜನಗರ: ಸಿ. ಪುಟ್ಟರಂಗಶೆಟ್ಟಿ

* ಹಾವೇರಿ: ರುದ್ರಪ್ಪ ಮಾನಪ್ಪ ಲಮಾಣಿ

* ಧಾರವಾಡ: ಸಂತೋಷ್ ಎಸ್. ಲಾಡ್

* ಹಾಸನ: ಕೆ. ಎಂ. ಶಿವಲಿಂಗೇ ಗೌಡ

* ಕೊಪ್ಪಳ: ತಂಗಡಗಿ ಶಿವರಾಜ್ ಸಂಗಪ್ಪ

* ಬಾಗಲಕೋಟೆ: ವಿಜಯಾನಂದ್‌ ಕಾಶಪ್ಪನವರ್‌

* ವಿಜಯನಗರ: ಬಿ. ಜಡ್. ಜಮೀರ್ ಅಹ್ಮದ್ ಖಾನ್

* ಚಿತ್ರದುರ್ಗ: ಟಿ. ರಘುಮೂರ್ತಿ

* ಉಡುಪಿ: ಬಸವಂತಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+