Power Cut in Bengaluru : ಬೆಂಗಳೂರು ಸೇರಿ ವಿವಿಧೆಡೆ ಇಂದಿನಿಂದ ಫೆ. 23ರವರೆಗೆ ವಿದ್ಯುತ್ ಕಡಿತ!, ಸ್ಥಳಗಳ ಮಾಹಿತಿ ಇಲ್ಲಿದೆ
ಬೆಸ್ಕಾಂ ಜೊತೆಗೂಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸಂಸ್ಥೆ ತುರ್ತು ನಿರ್ವಹಣಾ ಕೆಲಸ ನಡೆಸಲಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಎಲ್ಲೆಲ್ಲಿ ಎಂದು ತಿಳಿಯಿರಿ.
ಬೆಂಗಳೂರು, ಫೆಬ್ರವರಿ 21: ಬೆಸ್ಕಾಂ ಜೊತೆಗೂಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸಂಸ್ಥೆ ತುರ್ತು ನಿರ್ವಹಣಾ ಕೆಲಸ ನಡೆಸಲಿದೆ. ಇದರಿಂದ ಬೆಂಗಳೂರು ಸೇರಿದಂತೆ ವಿವಿಧ ಭಾಗದ ಹಲವೆಡೆ ಫೆಬ್ರವರಿ 23ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯಯತ್ಯವಾಗಲಿದೆ.
ಕೆಪಿಟಿಸಿಎಲ್ ಬೆಳಗ್ಗೆ10 ರಿಂದ ಮತ್ತು ಸಂಜೆ 4 ಗಂಟೆವರೆಗೆ ನಿರ್ವಹಣಾ ಕೆಲಸ ಮಾಡುವುದರಿಂದ ಈ ವಾರ ಸಿಲಿಕಾನ್ ಸಿಟಿಯ ಹಲವು ಪ್ರದೇಶಗಳು ವಿದ್ಯುತ್ ಕಡಿತದ ಸಮಸ್ಯೆ ಎದುರಿಸಲಿವೆ. ಇಂದನಿಂದಲೇ ವಿದ್ಯುತ್ ಕಡಿತಗೊಳ್ಳಲಿದೆ. ಮಂಗಳವಾರ ಬೆಂಗಳೂರಿನ ಹೊರ ವಲಯದ ಪ್ರದೇಶಗಳು ವಿದ್ಯುತ್ ಕಡಿತ ಸಮಸ್ಯೆ ಎದುರಿಸಲಿವೆ.
ವಿದ್ಯುತ್ ಕಡಿತದ ಪ್ರದೇಶಗಳು
ಫೆಬ್ರವರಿ 21ರಂದು ಮಂಗಳವಾರ ಕೊಂಡ್ಲಹಳ್ಳಿ,ಮೊಗಲಹಳ್ಳಿ, ಹಾನಗಲ್, ರಾಯಾಪುರ, ಬೈರಾಪುರ, ಮಾಟದಜೋಗಿಹಳ್ಳಿ, ಮರ್ಲಹಳ್ಳಿ, ಗುಂಡ್ಲೂರು, ಅಶೋಕ ತೋಡಲಹಳ್ಳಿ, ಬಿ.ಜಿ.ಕೆರೆ, ಗೌರಸಮುದ್ರ, ಅಬ್ಬೇನಹಳ್ಳಿ, ಸೂರಮ್ಮನಹಳ್ಳಿ, ಮುಷ್ಟಲಗುಮ್ಮಿ, ಗುಂಡ್ಲೂರು, ನಾಗಸಮುದ್ರ, ನಾಗಸಮುದ್ರ, ನಾಗಸಮುದ್ರ, ನಾಗಸಮುದ್ರ, ನಾಗಸಮುದ್ರ. ಐಪಿ ಸೆಟ್ ಪ್ರದೇಶ, ಹಬೀಬ್ ಕೈಗಾರಿಕಾ ಪ್ರದೇಶ, ತೋಟಗಾರಿಕೆ ಕಾಲೇಜು, ದೊಡ್ಡಘಟ್ಟ ಗ್ರಾಮ, ತುಮಕೂರು, ಬಿಐಎಎಲ್ ಬೇಗೂರು, ವಿದ್ಯಾನಗರ ವಿದ್ಯುತ್ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

ಅದೇ ರೀತಿ ನಾಳೆ ಫೆಬ್ರವರಿ 22ರಂದು ಬುಧವಾರ ಅನಂತನಹಳ್ಳಿ, ಗೌರಿಹಳ್ಳಿ, ಹರಕನಾಳ, ಯಲ್ಲಾಪುರ, ಹರಪನಹಳ್ಳಿ ಗ್ರಾಮಾಂತರ, ತ್ಯಾವಣಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಕೊಟ್ಟೂರು ರಸ್ತೆ, ಐಬಿ ಸರ್ಕಲ್, ಪಿಆರ್ ಪುರ, ಡಿ.ಬಿ.ಕೊಟ್ಟೂರಹಳ್ಳಿ, ಜಾಲಮಂಗಲ, ನಿಚ್ಚಾಪುರ, ಕಡಬಗೆರೆ, ಬಗಲಿ, ಎಸ್.ಡಿ.ಬಿ. ಖೈದಿಕುಂಟೆ, ಅಕ್ಕೂರು,ಕುಮಾರನಹಳ್ಳಿ, ಕೈಸಾಪುರ, ಸೋಲಾರ್ ಐಪಿಪಿ.
ಬೆಂಗಳೂರಿನ ಮಂಜುನಾಥನಗರ, ಶಿವನಗರ, ಗಾಯಿತ್ರಿನಗರ, ಪ್ರಕಾಶ್ ನಗರ, ಎಲ್‌ಎನ್ ಪುರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, ರಾಜಾಜಿನಗರ, ಅಮಜ್ಯೋತಿನಗರ, ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಟೆಲಿಕಾಂ ಲೇಔಟ್, ಆರ್‌ಪಿಸಿ ಲೇಔಟ್, ಹಂಪಿನಗರ, ಅಗ್ರಹಾರ, ಇಂದಿರಾ ನಗರ, ಸರಜ್ಯೋತಿ ನಗರ 6ನೇ ಬ್ಲಾಕ್, ವೃಷಭಾವತಿ ಡೌನ್ ಸ್ಟ್ರೀಮ್‌ಗಳು, ಚಂದ್ರಾ ಲೇಔಟ್, ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ, ಆರ್‌ಆರ್ ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ, ಲಿಂಗದಹಳ್ಳಿ ಮತ್ತು ಮೈಸೂರು ರಸ್ತೆ ಜೊತೆಗೆ ಅದರ ಸುತ್ತಮುತ್ತಲಿನ ಪ್ರದೇಶಗಳು.

ಬುಧವಾರ: ವಿದ್ಯುತ್ ಕಡಿತದ ಪ್ರದೇಶ
ಫೆಬ್ರವರಿ 23ರಂದು ಗುರುವಾರವು ಸಹ ವಿದ್ಯುತ್ ಕಡಿತಗೊಳ್ಳಲಿದೆ. ದೇವಸಮುದ್ರ, ಎನ್‌ಆರ್‌ಕೆ ಪುರ, ಮುರುಡಿ, ತಮ್ಮೇನಹಳ್ಳಿ, ಹನುಮನಗುಡ್ಡ, ರೈಲ್ವೆ ಲೋಡ್, ಮಂಜುನಾಥನಗರ, ಶಿವನಗರ, ಗಾಯಿತ್ರಿನಗರ, ಪ್ರಕಾಶ ನಗರ, ಎಲ್‌ಎನ್ ಪುರ, ಸುಬ್ರಹ್ಮಣ್ಯನಗರ, ಅಗ್ರಹಾರ, ದಾಸರಹಳ್ಳಿ, ಇಂದಿರಾ ನಗರ, ವಿಜಯನಗರ, ಜೆಬಿ ಹಳ್ಳಿ, ರಾಂಪುರ, ಬಿಡಿ ಹಳ್ಳಿ, ರಾಜಾಜಿನಗರ, ರಾಜಾಜಿನಗರ ಎರಡನೇ ಬ್ಲಾಕ್, ಅಮರಜ್ಯೋತಿ ನಗರ, ಸರಸ್ವತಿ ನಗರ, ವಿನಾಯಕ ಬಡಾವಣೆ ಮತ್ತು ಶಂಕರಮಠ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.












Click it and Unblock the Notifications