ಚಿತ್ರಗಳು : ಹಾವೇರಿಗೆ ಭೇಟಿ ನೀಡಿದ ರಾಹುಲ್ ಗಾಂಧಿ

ಹಾವೇರಿ, ಅಕ್ಟೋಬರ್ 10 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಎರಡು ದಿನದ ಕರ್ನಾಟಕ ಭೇಟಿ ಮುಕ್ತಾಯಗೊಂಡಿದೆ. ರಾಹುಲ್ ಗಾಂಧಿ ರೈತರಿಗೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ರೈತ ಸಮಾವೇಶದಲ್ಲಿ ರೈತರಿಗಾಗಿ ಹಲವು ಘೋಷಣೆಗಳನ್ನು ಮಾಡಿದ್ದಾರೆ.

ಎರಡು ದಿನದ ಪ್ರವಾಸದಲ್ಲಿ ರಾಹುಲ್ ಗಾಂಧಿ ಅವರು ಮಂಡ್ಯ, ಬೆಂಗಳೂರು ಮತ್ತು ಹಾವೇರಿಗೆ ಭೇಟಿ ನೀಡಿದ್ದರು. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ರೈತರು, ವಿದ್ಯಾರ್ಥಿಗಳು, ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. [ಹಾವೇರಿ ರೈತ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು?]

ಶುಕ್ರವಾರ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಶನಿವಾರ ಹಾವೇರಿಗೆ ಭೇಟಿ ಕೊಟ್ಟಿದ್ದರು. ರೈತನ ಮನೆಗೆ ಭೇಟಿ ಕೊಟ್ಟರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು, ಪಾದಯಾತ್ರೆ ಮಾಡಿದರು, ರೈತರೊಂದಿಗೆ ಸಂವಾದ ನಡೆಸಿದರು, ರೈತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. [ರಾಹುಲ್ ಗಾಂಧಿ ಸಮ್ಮುಖದಲ್ಲಿ ರೈತರಿಗೆ ಪ್ಯಾಕೇಜ್ ಘೋಷಣೆ]

ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ರೈತರ ಎಲ್ಲಾ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುವ ಪರಿಹಾರ ಧನ 5 ಲಕ್ಷಕ್ಕೆ ಹೆಚ್ಚಳ, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ 2 ಸಾವಿರ ರೂ. ವಿಧವಾ ವೇತನ ನೀಡುವುದು ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡಿದರು.

ಕಳಸಾ-ಬಂಡೂರಿ ಹೋರಾಟಗಾರರ ಭೇಟಿ

ಕಳಸಾ-ಬಂಡೂರಿ ಹೋರಾಟಗಾರರ ಭೇಟಿ

ಶನಿವಾರ ಬೆಳಗ್ಗೆ ರಾಣೆಬೆನ್ನೂರಿಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದಿ ರಾಹುಲ್ ಗಾಂಧಿ ಅವರನ್ನು ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರೈತರು ಭೇಟಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತಂದು ಯೋಜನೆಗೆ ಇರುವ ಅಡೆ-ತಡೆಗಳನ್ನು ನಿವಾರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ರೈತ ಅಶೋಕ ಮಡಿವಾಳರ ಮನೆಗೆ ಭೇಟಿ

ರೈತ ಅಶೋಕ ಮಡಿವಾಳರ ಮನೆಗೆ ಭೇಟಿ

ಹೆಲಿಪ್ಯಾಡ್‌ನಿಂದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೈದೂರು ತಾಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಅಶೋಕ ಮಡಿವಾಳರ ಮನೆಗೆ ರಾಹುಲ್ ಭೇಟಿ ನೀಡಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತ ರೈತ ಅಶೋಕ ಅವರ ಪುತ್ರನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ

ವಿದ್ಯಾರ್ಥಿಗಳೊಂದಿಗೆ ಸಂವಾದ

ರೈತನ ಮನೆಗೆ ಭೇಟಿ ಕೊಟ್ಟ ನಂತತ ಮೈದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದರು. ಶಾಲೆಯ 90 ಮಕ್ಕಳು ರಾಹುಲ್ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡಿದ್ದರು. ಶಾಲೆಯಲ್ಲಿನ ಬಿಸಿಯೂಟದ ಬಗ್ಗೆ ಪ್ರಶ್ನೆ ಕೇಳಿ ಮಕ್ಕಳಿಂದ ರಾಹುಲ್ ಉತ್ತರ ಪಡೆದರು.

ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ

ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ

ಮೈದೂರು ಗ್ರಾಮದಿಂದ ಗುಡಗೂರ ಗ್ರಾಮಕ್ಕೆ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ರಾಹುಲ್ ಗಾಂಧಿ ಅವರ ಜೊತೆ ಸುಮಾರು 6 ಕಿ.ಮೀ.ಪಾದಯಾತ್ರೆ ಮಾಡಿದರು.

ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್

ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್

ಗುಡಗೂರ ಗ್ರಾಮದಲ್ಲಿ 50 ಸಾವಿರಕ್ಕೂ ಅಧಿಕ ರೈತರಿದ್ದ ಸಮಾವೇಶ ಉದ್ದೇಶಿಸಿ ಮಾಡನಾಡಿದ ರಾಹುಲ್ ಗಾಂಧಿ ಅವರು, 'ಪ್ರಧಾನಿ ನರೇಂದ್ರ ಮೋದಿ ಸದಾ ಉದ್ಯಮಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಬಡವರ, ರೈತರ ಜೊತೆ ಅವರು ಫೋಟೊ ತೆಗೆಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಸೂಟ್ ಬೂಟ್ ನಾಯಕರಲ್ಲ, ಅವರು ರೈತರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕರು' ಎಂದು ಬಣ್ಣಿಸಿದರು.

ರೈತರಿಗಾಗಿ ಪ್ಯಾಕೇಜ್ ಘೋಷಣೆ

ರೈತರಿಗಾಗಿ ಪ್ಯಾಕೇಜ್ ಘೋಷಣೆ

ಶುಕ್ರವಾರ ರಾಹುಲ್ ಗಾಂಧಿ ಮಂಡ್ಯದಲ್ಲಿ ಮಾತನಾಡುತ್ತಾ, 'ರೈತರಿಗಾಗಿ ಕರ್ನಾಟಕ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆ' ಎಂದು ಹೇಳಿದ್ದರು. ಅದರಂತೆ ಸಿದ್ದರಾಮಯ್ಯ ಅವರು ಇಂದು ಪ್ಯಾಕೇಜ್ ಘೋಷಿಸಿದರು. ಇಂದಿನ ಘೋಷಣೆಗಳು

* ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುತ್ತಿದ್ದ ಪರಿಹಾರ 2ರಿಂದ 5 ಲಕ್ಷಕ್ಕೆ ಏರಿಕೆ
* ಮೃತ ರೈತರ ಮಕ್ಕಳ ಸ್ನಾತಕೋತ್ತರ ವಿದ್ಯಾಭ್ಯಾಸದ ತನಕದ ವೆಚ್ಚ ಸರ್ಕಾರದಿಂದ ಪಾವತಿ
* ರೈತರ ಅಲ್ಪ, ಮಧ್ಯಮ, ದೀರ್ಘಾವಧಿ ಸಾಲದ ಮೇಲಿನ ಎಲ್ಲಾ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ
* ರೈತ ಕುಟುಂಬಗಳಿಗೆ ಸರ್ಕಾರದಿಂದ ಜೀವವಿಮೆ
* ಮೃತ ರೈತರ ಪತ್ನಿಯ ವಿಧವಾ ಮಾಶಾಸನ 500 ರಿಂದ 2 ಸಾವಿರ ರೂ. ಗೆ ಏರಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+