ಕೇದಾರನಾಥದಲ್ಲಿ ಯಡಿಯೂರಪ್ಪ, ಶೋಭಾ, ಸೋಮಣ್ಣ

Written By:
Subscribe to Oneindia Kannada

ಬೆಂಗಳೂರು, ಮೇ, 11: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸದ್ದಿಲ್ಲದೆ ಕೇದಾರನಾಥಕ್ಕೆ ಭೇಟಿ ನೀಡಿ ಬಂದಿದ್ದಾರೆ. ಕೇದಾರನಾಥಕ್ಕೆ ಭೇಟಿ ನೀಡಿದ ಬಿ ಎಸ್ ಯಡಿಯೂರಪ್ಪ ಅವರಿಗೆ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಎಂಎಲ್ ಸಿ ವಿ ಸೋಮಣ್ಣ ಸಾಥ್ ನೀಡಿದ್ದರು.

ಕೇದರನಾಥಕ್ಕೆ ಬುಧವಾರ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆದ ಫೋಟೋಗಳು ಒನ್ ಇಂಡಿಯಾಕ್ಕೆ ಲಭ್ಯವಾಗಿದೆ. ಕರ್ನಾಟಕದಲ್ಲಿ ಭೀಕರ ಬರ ತಾಂಡವವಾಡುತ್ತಿದ್ದು ಬಿಎಸ್ ವೈ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದರು. ಅಲ್ಲದೇ ಬರ ವರದಿಯನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು.[ಚಿತ್ರಗಳು: ಚಂದ್ರಶೇಖರ ಮಠದ್][ಸಿದ್ದು ದುಬಾರಿ ವಾಚ್ ಮತ್ತು ಬಿಎಸ್ವೈ ಟೊಯೋಟ ಕಾರಿಗೆ ಇರುವ ವ್ಯತ್ಯಾಸ!]

bsy

ಕೇದಾರನಾಥ ದೇವಾಲಯಕ್ಕೆ ಪ್ರವೇಶ ಕಲ್ಪಿಸಿ ಕೆಲ ದಿನಗಳು ಮಾತ್ರ ಕಳೆದಿವೆ. ಕೇದಾರನಾಥಕ್ಕೆ ಭೇಟಿ ನೀಡಿದ್ದ ಬಿಎಸ್ ವೈ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು.[ಯಡಿಯೂರಪ್ಪನವರನ್ನು ವಿವಾದದ ಸುಳಿಗೆ ಸಿಲುಕಿಸಿರುವ ಕಾರು!]

ಯುಗಾದಿಗೆ ಬಿಜೆಪಿ ಅಧ್ಯಕ್ಷ ಗಾದಿ ಪಡೆದುಕೊಂಡ ಬಿಎಸ್ ವೈ ನಿರಂತರ ಪ್ರವಾಸದಲ್ಲಿಯೇ ಇದ್ದಾರೆ. ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ಹಾದಿಗೆ ಮರಳಿಸುವ ಪ್ರಯತ್ನದಲ್ಲಿ ಇದ್ದಾರೆ.

-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Photos: Karnataka BJP president B. S. Yeddyurappa pilgrimage to Kedarnath. He was accompanied by Chikkamagalur-Udupi MP Shobha Karandlaje and MLC V Somanna.
Please Wait while comments are loading...