Laksha deepotsava: ಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ಕಳೆಗಟ್ಟಿದ ಲಕ್ಷ ದೀಪೋತ್ಸವ, ಎಲ್ಲೆಡೆ ಭಕ್ತಿ ಭಾವ
ಹುಬ್ಬಳ್ಳಿ, ಡಿಸೆಂಬರ್ 13: ಹುಬ್ಬಳ್ಳಿಯ ಐತಿಹಾಸಿಕ ಮಠ ಶ್ರೀ ಸಿದ್ಧಾರೂಢರ ಮಠದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಸಡಗರದಿಂದ ಮಂಳವಾರ ನಡೆಯಿತು. ಮಠದ ಆವರಣದಲ್ಲಿ ಎಲ್ಲಿ ನೋಡಿದರೂ ಸಹಿತ ದೀಪಗಳ ಬೆಳಗು ಕಾಣಿಸುತ್ತಿತ್ತು. ಸಾವಿವರಾರು ಭಕ್ತರು ದಂಡು ಕಂಡು ಬಂತು.
ಹುಬ್ಬಳ್ಳಿಯ ಪ್ರಮುಖ ಆಕರ್ಷಣೆಗಳಲ್ಲಿ ಸಿದ್ಧಾರೂಢ ಸ್ವಾಮೀಜಿ ಮಠವು ಒಂದು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದರೂ ಸಹಿತ ಈ ಮಠಕ್ಕೆ ಭೇಟಿ ರೂಢಿ ಹಲವರು ಇಟ್ಟುಕೊಂಡಿರುತ್ತಾರೆ. ಸದ್ಯ ಕಾರ್ತಿಕ ಮಾಸದ ಜೊತೆಗೆ ಮಂಗಳವಾರ ಅಮವಾಸ್ಯೆ ದಿನವಾಗಿದ್ದರಿಂದ ಸಿದ್ಧಾರೂಢ ಮಠದಲ್ಲಿ ಸಹಸ್ರ ಸಂಖ್ಯೆಯ ಭಕ್ತರು ದೀಪಗಳನ್ನು ಬೆಳಗುವ ಮೂಲಕ ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಿದರು.

ಮಠದ ಮುಂದಿನ ಆವರಣದಲ್ಲಿ ಎತ್ತ ನೋಡಿದರತ್ತ ದೀಪಗಳ ಅಲಂಕಾರಗಳು ಕಣ್ಮನ ಸೆಳೆದವು. ಸಿದ್ಧಾರೂಢರಿಗೆ ದೀಪ ಬೆಳಗಿಸಿ ಭಕ್ತರು ಭಕ್ತಿಯಿಂದ ಇಷ್ಟಾರ್ಥಗಳನ್ನು ಬೇಡಿಕೊಂಡರು. ಮಹಿಳೆಯರು, ಮಕ್ಕಳು ಅತ್ಯುತ್ಸಾಹದಿಂದ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.
ಈ ವರ್ಷವು ಸಂಭ್ರಮ ಆಚರಣೆ
ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ಈ ಲಕ್ಷದೀಪೋತ್ಸವವನ್ನ ಆಚರಣೆ ಮಾಡಲಾಗುತ್ತದೆ. ಮಠದ ಆವರಣದ ತುಂಬ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರಗಳ ಮೇಲೆ ಲಕ್ಷಾಂತರ ದೀಪಗಳನ್ನ ಜೋಡಿಸಿ ಇಡಲಾಗಿತ್ತು. ವಿವಿಧ ಆಕಾರಗಳ ಮೇಲೆ ಹಚ್ಚಲಾಗಿದ್ದ ದೀಪಗಳು ಗಂಟೆಗಳ ಕಾಲ ಬೆಳಗಿದವು.

ನೆರೆದಿದ್ದ ಲಕ್ಷಾಂತರ ಭಕ್ತರು ಮಹಾಂಗಳಾರತಿ ಬಳಿಕ ದೀಪಗಳನ್ನ ಹಚ್ಚಿ ಶ್ರೀ ಸಿದ್ಧಾರೂಢರಿಗೆ ಭಕ್ತಿಭಾವದಿಂದ ಸಮರ್ಪಿಸಿದರು. ಅದರಲ್ಲೂ ಮಹಿಳೆಯರಿಗಂತೂ ಈ ದೀಪದ ಹಬ್ಬ ಅವರ ಸಂತಸ ಹಿಮ್ಮಡಿಗೊಳಿಸಿತ್ತು. ಕುಟುಂಬ ಸಮೇತ ಬಂದ ಮಹಿಳೆಯರು ದೀಪ ಬೆಳಗಿಸಿದರು. ಬದುಕಿನ ಅಂಧಕಾರ ತೊಲಗಿಸಿ ಬಾಳಿಗೆ ಬೆಳಕು ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಒಂದು ಲಕ್ಷ ದೀಪೋತ್ಸವದ ಮಾಹಿತಿ
ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷ ವಿಶೇಷವಾಗಿ ಧಾರವಾಡ ಜಿಲ್ಲೆಯ
ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಸೇರಿ ನಾಲ್ಕೈದು ಗ್ರಾಮಗಳಲ್ಲಿ ಮಣ್ಣಿನಿಂದ ತಯಾರಿಸಿದ 70 ಸಾವಿರ ಹಣತೆಗಳನ್ನು ಶ್ರೀಮಠದಿಂದ ಖರೀದಿಸಲಾಗಿತ್ತು. ಜತೆಗೆ ಮಠದಲ್ಲಿ 30 ಸಾವಿರ ಹಣತೆಗಳು ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಕೂಡ ಹಣತೆಗಳನ್ನು ತಂದು ಲಕ್ಷ ದೀಪೋತ್ಸವದಲ್ಲಿ ತಂದು ಹಣತೆ ಬೆಳಗಿದರು.
ಮಠದ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ತತ್ವಾಮೃತ ಉಪಸಮಿತಿ ಕಾರ್ಯಾಧ್ಯಕ್ಷ ಶಾಮಾನಂದ ಪೂಜೇರಿ, ಧರ್ಮದರ್ಶಿ ಮಂಜುನಾಥ ಮುನವಳ್ಳಿ, ವೀರಪ್ಪ ಮಲ್ಲಾಪುರ, ಬಾಳಕೃಷ್ಣ ಮಗಜಿಕೊಂಡಿ, ವಿನಾಯಕ ಘೋಡಕೆ, ಗೀತಾ ಕಲಬುರ್ಗಿ ಅಪಾರ ಭಕ್ತರು ಭಾಗವಹಿಸಿದ್ದರು.
ಲಕ್ಷ ದೀಪೋತ್ಸವಕ್ಕೂ ಮುನ್ನ ಮಂಗಳವಾರ ಬೆಳಗ್ಗೆಯಿಂದಲೇ ಸಿದ್ಧಾರೂಢರ ಸ್ವಾಮೀಜಿಗೆ ವಿಶೇಷ ಪೂಜೆಗಳು, ಅಲಂಕಾರಗಳು ನಡೆದಿವೆ. ಭಕ್ತರು ಬೆಳಗ್ಗೆಯಿಂದಲೇ ಮಠಕ್ಕೆ ಆಗಮಿಸುತ್ತಿದ್ದರು. ಸಂಜೆಯಾಗುತ್ತಲೇ ದೀಪೋತ್ಸವಕ್ಕೆ ಹೆಚ್ಚು ಜನರ ಸೇರಿ ದೀಪಗಳನ್ನು ಬೆಳಗಿದರು.












Click it and Unblock the Notifications