Get Updates
Get notified of breaking news, exclusive insights, and must-see stories!

BLR-MYS Expressway: ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಅಪಘಾತ, ಸಾವುಗಳ ಮಾಹಿತಿ

ನವದೆಹಲಿ, ಜುಲೈ 28: ಉದ್ಯಾನ ನಗರಿ ಬೆಂಗಳೂರು ಮತ್ತು ಮೈಸೂರು ಮಧ್ಯದ 118 ಕಿಲೋ ಮೀಟರ್ ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ಆದಾಗಿನಿಂದ ಈವರೆಗೆ 398 ಅಪಘಾತಗಳು ಸಂಭವಿಸಿವೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಾವು ನೋವಿನ ಲೆಕ್ಕ ನೀಡಿದರು.

ಮುಂಗಾರು ಸಂಸತ್ ಅಧಿವೇಶನ ಆರಂಭವಾಗಿದೆ. ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಉತ್ತರಿಸಿದರು.

In Bengaluru-Mysuru Expressway Has Till Now 398 accident, Nitin Gadkari Inform To Parliament

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಇದೇ ವರ್ಷ ವರ್ಷದ ಜನವರಿಯಲ್ಲಿ ಚಾಲನೆ ದೊರೆತ ಬಳಿಕ ಈವರೆಗೆ ಒಟ್ಟು 121 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಇಲ್ಲಿಯವರೆಗೆ 398 ಅಪಘಾತಗಳು ಈ ಹೆದ್ದಾರಿಯಲ್ಲಿ ನಡೆದಿವೆ ಎಂದು ನಿತಿನ್ ಗಡ್ಕರಿ ಅವರು ಲೋಕಸಭೆಗೆ ಲಿಖಿತವಾಗಿ ಉತ್ತರ ನೀಡಿದರು.

ಅಪಘಾತ ತಡೆಗೆ ಅಗತ್ಯ ಕ್ರಮವಹಿಸಲಾಗಿದೆ

ಇಂಡಿಯನ್ ರೋಡ್ ಕಾಂಗ್ರೆಸ್ (IRC) ಮಾರ್ಗಸೂಚಿಗಳ ಪ್ರಕಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ವೇಗದ ಮಿತಿ ಹಾಗೂ ಇನ್ನಿತರ ಅಗತ್ಯ ಸೂಚನಾ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಹೆದ್ದಾರಿ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಕುರಿತು ಗಡ್ಕರಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರ ಹಿತ ದೃಷ್ಟಿಯಿಂದ ನಾಲ್ಕು ಗಸ್ತು ವಾಹನಗಳನ್ನು ನಿಯೋಜಿಸಲಾಗುವುದು. ಹೆದ್ದಾರಿ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಸೂಚನಾ ಫಲಕ, ಕ್ಯಾಮೆರಾ, ಓವರ್‌ಹೆಡ್ ಮಾಹಿತಿ ವೇರಿಯಬಲ್ ಮೆಸೇಜ್ ಸಿಗ್ನಲ್‌ಗಳು ಸೇರಿದಂತೆ ಇತರ ಸುರಕ್ಷತಾ ಕ್ರಮಗಳು ಕೈಗೊಳ್ಳಾಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಮತ್ತು ಎಲ್ಲಾ ಮೋಟಾರು ರಹಿತ ವಾಹನಗಳನ್ನು ನಿಷೇಧಿಸುವ ಕ್ರಮ ಕೈಗೊಳ್ಳಲಾಗಿದೆ. ಇಷ್ಟೇ ಅಲ್ಲದೇ ಅಪಘಾತ ಕಡಿಮೆ ಮಾಡಲು ಪೊಲೀಸರು ಅತ್ಯಧಿಕ ವೇಗದ ಮಿತಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದಾರೆ.

In Bengaluru-Mysuru Expressway Has Till Now 398 accident, Nitin Gadkari Inform To Parliament

ಹೆದ್ದಾರಿಯಲ್ಲಿ ನಾಲ್ಕು ಆಂಬ್ಯುಲೆನ್ಸ್‌ ನಿಯೋಜನೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಂತಹ ಹೆದ್ದಾರಿಗಳಲ್ಲಿ ಅವಘಡ ಸಂಭವಿಸಿದರೆ, ತುರ್ತು ಸೇವೆಗಾಗಿ ಆರೋಗ್ಯ ಮೂಲಸೌಲಭ್ಯಗಳನ್ನು ಒದಗಿಸುವ ಜೊತೆಗೆ ಅರೆವೈದ್ಯಕೀಯ ಸಿಬ್ಬಂದಿ ಜೊತೆಗೆ ನಾಲ್ಕು ಆಂಬ್ಯುಲೆನ್ಸ್ ವಾಹನಗಳನ್ನು ಹೆದ್ದಾರಿಯಲ್ಲಿ ನಿಯೋಜನೆಗೊಳಿಸಲಾಗಿದೆ. ಟೋಲ್ ಪ್ಲಾಜಾದಲ್ಲಿ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ಸದ್ಯ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಧಿಕ ಪ್ರಮಾಣದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ತಿದ್ದುಪಡಿಗಳೊಂದಿಗೆ NH ಶುಲ್ಕ ನಿಯಮಗಳು 2008ರ ಪ್ರಕಾರವೇ ಬಳಕೆದಾರರಿಂದ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ಹೆದ್ದಾರಿ ಟೋಲ್ ಶುಲ್ಕದ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಹೆದ್ದಾರಿ: ವೇಗದ ಮೀತಿ 100 kmph

ಈ ಹೆದ್ದಾರಿಯ ವೇಗವನ್ನು 100 ಕಿಲೋ ಮೀಟರ್‌ಗೆ ಮಿತಿಗೊಳಿಸಗಿದೆ. ಅಲ್ಲದೇ ವೇಗ ಕಡಿಮೆ ಮಾಡಲು ಕೆಲವು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ವೇಗದ ನಿಯಮ ಮೀರಿದ ಚಾಲನೆ, ಹೆಲ್ಮೆಟ್ ಇಲ್ಲದ ಚಾಲನೆ ಸೇರಿ ನಿಯಮ ಉಲ್ಲಂಘಿಸಿದಕ್ಕೆ ಕೇವಲ 15 ದಿನಗಳಲ್ಲಿ 16 ಲಕ್ಷ ರೂಪಾಯಿ ಹಣ ದಂಡ ರೂಪದಲ್ಲಿ ಸಂಗ್ರಹವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+