ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ನೈಋತ್ಯ ಮುಂಗಾರು: ಕರಾವಳಿಯಲ್ಲಿ ಮತ್ತೆ ಪ್ರವಾಹ ಭೀತಿ

By Nayana
|
Google Oneindia Kannada News

ಬೆಂಗಳೂರು, ಜೂನ್ 5: ಕೇರಳದಲ್ಲಿ ಒಂದು ವಾರ ಮೊದಲು ಬಂದಿದ್ದ ಮುಂಗಾರು ಇದೀಗ ಕರ್ನಾಟಕದಲ್ಲೂ ಚುರುಕುಗೊಂಡಿದೆ. ವಾಯುಭಾರ ಕುಸಿತದಿಂದಾಗಿ ಮಂಗಳೂರು ಸೇರಿದಂತೆ ಕರಾವಳಿ ಪ್ರವಾಹಕ್ಕೀಡಾದ ಬೆನ್ನಲ್ಲೇ ಇದೀಗ ಮುಂಗಾರಿನ ಪ್ರಭಾವದಿಂದ ಜೂನ್ 10ರ ಬಳಿಕ ಕರಾವಳಿ ಮತ್ತೊಮ್ಮೆ ಸಂಕಟ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಈ ಮಾಹಿತಿಯನ್ನು ನೀಡಿದೆ. ಜೂನ್ 7ರ ಬಳಿಕ ಕೇರಳ, ಕರಾವಳಿ ಕರ್ನಾಟಕ, ಕೊಂಕಣ ಮತ್ತು ಗೋವಾದಲ್ಲಿ ಭಾರಿ ಮಳೆ ಸುರಿಯಲಿದ್ದು, ಜೂನ್ 10ರ ಬಳಿಕ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ನೀಡಿದೆ.

ಕರ್ನಾಟಕ , ತಮಿಳುನಾಡಿಗೆ ನೈರುತ್ಯ ಮುಂಗಾರು ಲಗ್ಗೆ: ಬೆಂಗಳೂರಲ್ಲಿ ಮಳೆ ಸಂಭವಕರ್ನಾಟಕ , ತಮಿಳುನಾಡಿಗೆ ನೈರುತ್ಯ ಮುಂಗಾರು ಲಗ್ಗೆ: ಬೆಂಗಳೂರಲ್ಲಿ ಮಳೆ ಸಂಭವ

ಮುಂಬೈಯಲ್ಲಿ ಜೂನ್ 6ರಿಂದ ಮಳೆಯಾಗಲಿದ್ದು, ಜೂನ್ 8 ರಿಂದ 10ರಂದು ಅದು ಜಡಿ ಮಳೆಯಾಗಿ ಪರಿವರ್ತನೆಯಾಗಲಿದೆ ಎಂದು ಸ್ಕೈಮೆಟ್ ಸಿಇಒ ಜತಿನ್ ಸಿಂಗ್ ತಿಳಿಸಿದ್ದಾರೆ.

IMD warns flood in coastal again

ಈ ನಡುವೆ ಕೊಂಕಣ ಮತ್ತು ಗೋವಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ರೂಪುಗೊಳ್ಳುತ್ತಿದ್ದು,. ಇದು ನಿಧಾನವಾಗಿ ಮಹಾರಾಷ್ಟ್ರ ಕರಾವಳಿಯತ್ತ ಸಾಗುವ ನಿರೀಕ್ಷೆ ಇದೆ. ಹೀಗಾಗಿ ಮುಂಗಾರಿನ ಪ್ರಭಾವವನ್ನು ಅದು ಹೆಚ್ಚಿಸುವ ಸಾಧ್ಯತೆ ಇದೆ. ಗುಜರಾತ್ನ ಕೆಲವು ಭಾಗಗಳಲ್ಲೂ ಇದರ ಪ್ರಭಾವದಿಂದ ಮಳೆ ಬೀಳಲಿದೆ.

IMD warns flood in coastal again

ಜೂನ್ 7ರ ಬಳಿಕ ಮಾನ್ಸೂನ್ ತೀವ್ರಗೊಳ್ಳಲಿದ್ದು, ಭಾರಿ ಮಳೆ ಸುರಿಯಲಿದೆ. ಮೇ 10 ರ ಬಳಿಕ ಕೇರಳ, ಕರ್ನಾಟಕ ಕರಾವಳಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Indian Meteorological Department has warned that heavy rainfall expected in Karnataka coastal from June 7 and also said flood situation will be occured after June 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X