karnataka Rain: ವಾರಾಂತ್ಯಕ್ಕೆ ಖುಷಿ ಕೊಟ್ಟ ವರುಣ: ಬೆಂಗಳೂರು ಸೇರಿ ಇಂದು ಎಲ್ಲೆಲ್ಲಿ ಮಳೆ?
ಕಳೆದ ದಿನ ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆಯಾರ ಭೂಮಿ ತಾಯಿಯನ್ನು ತಂಪಾಗಿಸಿದ್ದಾನೆ. ಬಿಸಿಲ ಬಿಸಿಗೆ ಕಂಗಿಟ್ಟದ್ದ ಸಿಲಿಕಾನ್ ಸಿಟಿ ಮಂದಿ ಕೊನೆಗೂ ವಾರಾಂತ್ಯದಲ್ಲಿ ಮನೆ ಬಿಟ್ಟು ಸಂತೋಷದಿಂದ ಹೊರಬರುವಂತಾಗಿದೆ. ಈ ನಡುವೆ ಬೆಂಗಳೂರು ಸೇರಿದಂತೆ ಕರ್ನಾಟಕ ದ ಹಲವು ಭಾಗಗಳಲ್ಲಿ ಭಾನುವಾರವೂ ತುಂತುರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳನ್ನು ತಂಪಾಗಿಸಿದ ವರುಣ ಇಂದೂ ಕೂಡ ಧರೆಗಿಳಿಯಲಿದ್ದಾನೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಸಹಿತ ಮೈಸೂರು, ಹುಬ್ಬಳ್ಳಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಇಲ್ಲೆಲ್ಲ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕರಾವಳಿ ಪ್ರದೇಶಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಜೊತೆಗೆ ಚಿಕ್ಕಮಗಳೂರಿನಂತಹ ಮಲೆನಾಡು, ಹಾಸನ, ಶಿವಮೊಗ್ಗ ಹಾಗೂ ಘಟ್ಟ ಪ್ರದೇಶಗಳಲ್ಲಿಯೂ ಮಳೆ ಸುರಿಯುವ ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಮಾರಾಂತ್ಯಕ್ಕೆ ಜನ ಸಂತಸ ಪಡುವ ನಿರೀಕ್ಷೆಯಲ್ಲಿದ್ದಾರೆ. ಮನೆ ಬಿಟ್ಟು ಹೊರ ಹೋಗುವ ಜನರಿಗೆ ಇಂದಿನ ವಾತಾವರಣ ಅಹ್ಲಾದಕರವಾಗಿದ್ದು ಜನ ದಿಲ್ ಖುಷ್ ಆಗಿದ್ದಾರೆ.
ನಿತ್ಯ ಕಚೇರಿಗಳಿಗೆ ಹೋಗಲು ಬೇಸರ ತಂದಿದ್ದ ಸೂರ್ಯನ ಕಿರಣಗಳು ಇಂದು ತಂಪಾಗಿವೆ. ವರುಣನ ಕೃಪೆಯಿಂದ ಜನ ಸಂತೋಷದಿಂದ ಹೊರಬರುವಂತಾಗಿದೆ. ಪ್ರವಾಸ, ಕುಟುಂಬದೊಂದಿಗೆ ಕಾಲ ಕಳೆಯುವಂತಹವರಿಗೆ ಈ ದಿನ ತಂಪಾಗಿದ್ದು ಮಳೆಯೊಂದಿಗೆ ಮತಷ್ಟು ಎಂಜಾಯ್ ಮಾಡಲು ಜನ ಕಾತುರರರಾಗಿದ್ದಾರೆ.
ಭಾರತದ ಯಾವ ಪ್ರದೇಶದಲ್ಲಿ ಮಳೆ ಮುನ್ಸೂಚನೆ....
ತೆಲಂಗಾಣದಲ್ಲಿ ನಿನ್ನೆ ಹೈದರಾಬಾದ್ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚು ಸಹ ಸಂಭವಿಸಿದೆ. ಅಲ್ಲದೆ ಆಂಧ್ರಪ್ರದೇಶ ಸೇರಿದಂತೆ ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಜನರಿಗೆ ಕೊಂಚ ನೆಮ್ಮದಿ ಸಿಕ್ಕರೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ ಸೇರಿದಂತೆ ಕೆಲ ಬೆಳೆ ಹಾನಿಯಾಗಿದೆ. ಮಾರುಕಟ್ಟೆಗೆ ತಂದಿದ್ದ ಅಕ್ಕಿ ಕಾಳು ಒದ್ದೆಯಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಹವಾಮಾನ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ.. ಇಂದು (21-4-2024) ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅಲ್ಲಲ್ಲಿ ಗುಡುಗು ಮತ್ತು ಮಿಂಚಿನ ಮಳೆಯಾಗಲಿದೆ. ಅಲ್ಲದೆ ಗಾಳಿಯ ವೇಗ ಗಂಟೆಗೆ 40 ರಿಂದ 60 ಕಿ.ಮೀ. ಇರಲಿದೆ. ಇನ್ನೂ ಕರ್ನಾಟಕ, ತೆಲಂಗಾಣದಲ್ಲಿ ಅತೀ ವೇಗದ ಗಾಳಿಯೊಂದಿಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಗಾಳಿಯ ವೇಗ
ಉಪಗ್ರಹ ಮಳೆಯ ಅಂದಾಜಿನ ಪ್ರಕಾರ, ಇಂದು ದಿನವಿಡೀ ತೆಲುಗು ರಾಜ್ಯಗಳ ಮೇಲೆ ಮೋಡಗಳು ಬಂದು ಹೋಗುತ್ತವೆ. ಶ್ರೀಶೈಲಂ ಮತ್ತು ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕಲ್ವಕುರ್ತಿ ಮತ್ತು ದೇವರಕೊಂಡ ಬಳಿ ಮಧ್ಯಾಹ್ನ 3 ಗಂಟೆಯ ನಂತರ ಸಾಧಾರಣ ಮಳೆಯಾಗಿದೆ.
ಹೈದರಾಬಾದ್, ನಲ್ಗೊಂಡ, ಕೇಸಮುದ್ರ, ಮಹಬೂಬ್‌ನಗರ, ರಾಮಗುಂಡಂ, ಜಗಿತ್ಯಾಲ, ವಾರಂಗಲ್, ಎಲೇಶ್ವರಂ ಮತ್ತು ಎಪಿಯ ಕಾಕಿನಾಡ ಪ್ರದೇಶಗಳಲ್ಲಿ ಸಂಜೆ 5 ಗಂಟೆಯ ನಂತರ ಸಾಧಾರಣ ಮಳೆಯಾಗಲಿದೆ. ಪಶ್ಚಿಮ ರಾಯಲಸೀಮಾದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ತುಂತುರು ಮಳೆಯಾಗಲಿದೆ.
ಗಾಳಿಯ ವೇಗವನ್ನು ಗಮನಿಸಿದರೆ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 11 ರಿಂದ 36 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಎಪಿಯಲ್ಲಿ ಗಂಟೆಗೆ 10 ರಿಂದ 16 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ತೆಲಂಗಾಣದಲ್ಲಿ ಗಂಟೆಗೆ 4 ರಿಂದ 9 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ. ಸಂಜೆಯಾಗುತ್ತಿದ್ದಂತೆ ಎಪಿಯಲ್ಲಿ ಗಾಳಿಯ ವೇಗ ಹೆಚ್ಚಾಗಲಿದೆ.











Click it and Unblock the Notifications