Karnataka Rain: ಯುಗಾದಿಗೂ ಮುನ್ನ ರಾಜ್ಯದ ಹಲವೆಡೆ ಭಾರೀ ಮಳೆ: ಎಲ್ಲೆಲ್ಲಿ? ಯಾವಾಗ?
ಬೆಂಗಳೂರು ಮಾರ್ಚ್ 15: ಯುಗಾದಿ ಹಬ್ಬಕ್ಕೂ ಮುನ್ನ ರಾಜ್ಯದ ಜನರಿಗೆ ವರುಣ ಸಿಹಿ ಸುದ್ದಿಯನ್ನು ನೀಡಲಿದ್ದಾನೆ. ಬಿಸಿಲಿನ ಬೇಗೆಯಿಂದ ಬೇಸತ್ತು ಹೋಗಿರುವವರಿಗೆ ತಂಪೆರೆಯಲಿದ್ದಾನೆ ವರುಣ ದೇವ. ಈ ಬಾರಿ ಕರ್ನಾಟಕದ ಹಲವೆಡೆ ಯುಗಾದಿ ಹಬ್ಬಕೂ ಮೊದಲೇ ಧಾರಾಕಾರ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಾರ್ಚ್ 20ರಿಂದ ರಾಜ್ಯದಲ್ಲಿ ಭಾರೀ ಮಳೆ ಬೀಳುವ ಸೂಚನೆಯನ್ನು ನೀಡಲಾಗಿದೆ.
ಹೌದು... ರಾಜ್ಯದ ಹಲವೆಡೆ ಬೇಸಿಗೆ ಆರಂಭಕ್ಕೂ ಮೊದಲೇ ಬಿಸಿಲು ಹೆಚ್ಚಾಗಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಹಲವೆಡೆ ಬೇಸಿಗೆ ಬಿಸಿಲು ಜನರ ಮೈ ಸುಡುತ್ತಿದೆ. ಆದರೀಗ ರಾಜ್ಯದ ಮಲೆನಾಡು ಭಾಗಗಳಲ್ಲಿ ಮಾರ್ಚ್ 20ರಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.

ಇದೇ ತಿಂಗಳು ಮಾರ್ಚ್ 30ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದಕ್ಕೂ ಮೊದಲೇ ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆಯಾಗಲಿದೆ. ಫೆಬ್ರವರಿ ಮುಗಿಯುತ್ತಿದ್ದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಬಿಸಿಲ ಝಳ, ಧೂಳು, ತಾಪಮಾನ ಹೆಚ್ಚಾಗಿದ್ದು ಜನ ಮನೆಯಿಂದ ಹೊರಬರುವುದು ಕಷ್ಟಗಿದೆ. ಆದರೀಗ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಬೀಳಲಿದ್ದು ವಾತಾವರಣ ತಂಪಾಗಲಿದೆ.
ಕರ್ನಾಟಕದ ಯಾವ ಭಾಗಗಳಲ್ಲಿ ಯುಗಾದಿಗೂ ಮುನ್ನ ಮಳೆ
ಈ ವಾರದ ಆರಂಭದಲ್ಲಿ ಬೆಂಗಳೂರಿನ ಹಲವೆಡೆ ಮಳೆಯಾಗಿದೆ. ಆದರೆ ಹೇಳಿಕೊಳ್ಳುವ ಮಟ್ಟಕ್ಕಿಲ್ಲ. ಆದರೀಗ ಮಾರ್ಚ್ 20 ರ ಬಳಿಕ ಪೂರ್ವ ಮುಂಗಾರು ಆರ್ಭಟ ಶುರುವಾಗಲಿದ್ದು ಬೆಂಗಳೂರಿನಲ್ಲಿಯೂ ಮಳೆಯಾಗಲಿದೆ. ಮಾರ್ಚ್ 18 ರಿಂದ 20 ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಬೀಳಲಿದೆ.

ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾರ್ಚ್ 18ರಿಂದ ಸಾಧಾರಣ ಮಳೆಯಾಗುವ ಸೂಚನೆ ನೀಡಲಾಗಿದೆ. ಮಾರ್ಚ್ 21-27ರ ನಡುವೆ ಸಾಮಾನ್ಯಕ್ಕಿಂತ 1-5 ಮಿಮೀ ಹೆಚ್ಚು, ಮಾರ್ಚ್ -28 ರಿಂದ 3 ಎಪ್ರಿಲ್ ಮಧ್ಯದಲ್ಲಿ ರಾಜ್ಯದ ಹಲವೆಡೆ ಸಾಮಾನ್ಯಕ್ಕಿಂತ 1-3 ಮಿಮೀ ಮಳೆಯಾಗಲಿದ್ದು ಮಾರ್ಚ್ 4 ರಿಂದ 10 ಎಪ್ರಿಲ್ ನಡುವೆ ದಿನಕ್ಕೆ 1-3 ಮಿಮೀ ನಷ್ಟು ಸಾಧಾರಣ ಮಳೆಯಾಗಲಿದೆ.
ದೇಶದ ಯಾವ ಭಾಗದಲ್ಲಿ ಮಳೆ?
ಹೋಳಿ ಹಬ್ಬದ ದಿನ ಸಂಜೆ ಸುರಿದ ಮಳೆಯಿಂದಾಗಿ ದೆಹಲಿಯ ಜನರು ಬಿಸಿಲಿನ ಬೇಗೆಯಿಂದ ತಂಪಾಗಿದ್ದಾರೆ. ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮಾರ್ಚ್ 15 ರಂದು ದೆಹಲಿಯಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಹಗುರ ಮಳೆಯಾಗಲಿದ್ದು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ದೆಹಲಿಯಲ್ಲಿ ಇಂದಿನ ಗರಿಷ್ಠ ತಾಪಮಾನ 33 ರಿಂದ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16 ರಿಂದ 18 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.

ಮಾರ್ಚ್ 16 ರಂದು ದೆಹಲಿಯಲ್ಲಿ ಮಳೆ
ಅಲ್ಲದೆ ಮಾರ್ಚ್ 16 ರಂದು ದೆಹಲಿಯಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈ ದಿನ ದೆಹಲಿಯಲ್ಲಿ ಗರಿಷ್ಠ ತಾಪಮಾನ 30 ರಿಂದ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16 ರಿಂದ 18 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.
ಹಿಮಾಲಯ ಪ್ರದೇಶದಲ್ಲಿ ಗುಡುಗು ಸಹಿತ ಮಳೆ
ಮಾರ್ಚ್ 15 ರಿಂದ 16 ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲೂ ಗುಡುಗು ಸಹಿತ ಮಳೆ ಮತ್ತು ಹಿಮಪಾತವಾಗಲಿದೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ.
ಇಂದು ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಗುರ ಮಳೆಯಾಗುವ ಸೂಚನೆ ನೀಡಲಾಗಿದ್ದು, ಪೂರ್ವ ಉತ್ತರ ಪ್ರದೇಶದಲ್ಲಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಮಾರ್ಚ್ 15 ರಿಂದ 16 ರವರೆಗೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಛತ್ತೀಸ್‌ಗಢದಲ್ಲಿ ತಾಪಮಾನ ಹೆಚ್ಚಳ
ಛತ್ತೀಸ್‌ಗಢದಲ್ಲಿ ಈಗಾಗಲೇ ಶಾಖದ ಅಲೆ ಕಂಡುಬರುತ್ತಿದ್ದು ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಜ್ಯದಲ್ಲಿ ಇಂದು ಕೂಡ ತಾಪಮಾನ ಇದೇ ರೀತಿ ಇರಲಿದೆ.
ರಾಜಸ್ಥಾನದ 11 ಜಿಲ್ಲೆಗಳಲ್ಲಿ ಮಳೆ
ಇನ್ನೂ ರಾಜಸ್ಥಾನದ 11 ಜಿಲ್ಲೆಗಳಲ್ಲಿ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಶ್ಚಿಮ ಘಟ್ಟದ ಅವಾಂತರದ ಪರಿಣಾಮದಿಂದಾಗಿ ಜೈಪುರ, ಸಿಕಾರ್, ಭರತ್‌ಪುರ, ಬಿಕಾನೇರ್, ಅಲ್ವಾರ್, ದೌಸಾ ಮತ್ತು ಚುರು ಸೇರಿದಂತೆ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಮಳೆ ಮತ್ತು ಆಲಿಕಲ್ಲು ಮಳೆ ಬೀಳಲಿದೆ.
ಬಿಹಾರದಲ್ಲೂ ಈಗಾಗಲೇ ತಾಪಮಾನ 35 ಡಿಗ್ರಿಗಿಂತ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಬಿಹಾರದಲ್ಲಿ ತೀವ್ರ ಶಾಖ ಕಂಡುಬರಲಿದ್ದು, ಇಂದು ಬಿಹಾರದಲ್ಲಿ ಹವಾಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಾರ್ಚ್ 16 ರಂದು ಅಂದರೆ ಭಾನುವಾರ ಬಿಹಾರದ ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.












Click it and Unblock the Notifications