Karnataka Heat Wave: ರಾಜ್ಯದಲ್ಲಿ ರಣಬಿಸಿಲು, ಎಲ್ಲೆಡೆ 3.5 ಡಿ.ಸೆ ಹೆಚ್ಚಳ, ಮುನ್ಸೂಚನಾ ವರದಿ

ಬೆಂಗಳೂರು, ಫೆಬ್ರವರಿ 20: ಹವಾಮಾನದಲ್ಲಿ ಉಂಟಾಗುವ ಬದಲಾವಣೆಗಳು ಮಳೆ, ಗಾಳಿ, ಬಿಸಿಲಿನ ಏರಿಳಿತಕ್ಕೆ ಕಾರಣವಾಗುತ್ತವೆ. ರಾಜ್ಯದಲ್ಲಿ ತೀವ್ರಗತಿಯಲ್ಲಿ ತಾಪಮಾನ ಏರಿಕೆ ಆಗುತ್ತಿದೆ. ಬೇಸಿಗೆ ಮೊದಲ ತಿಂಗಳಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ಬೆಂಗಳೂರಿನಲ್ಲಿ ಈಗಾಗಲೇ ದಶಕಗಳ ದಾಖಲೆಯ ಬಿಸಿಲು ದಾಖಲಾಗಿದೆ. ಕೇವಲ 1-2 ಡಿ. ಸೆ.ನಷ್ಟು ಹೆಚ್ಚಾಗುತ್ತಿದ್ದ ತಾಪಮಾನ ಇದೀಗ ಅನೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3ರಿಂದ 3.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬೆಂಗಳೂರು ನಗರದಲ್ಲಿ ಸದ್ಯ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಬೇಕು. ಅದಕ್ಕೆ ಬದಲಾಗಿ 34.4 ಡಿ.ಸೆ. ದಾಖಲಾಗುತ್ತಿದೆ. ಇದು ನಿರೀಕ್ಷೆಗಿಂತಲೂ 3 ಡಿ.ಸೆ ಅಧಿಕವಾಗಿದೆ. ಅದೇ ರೀತಿ ಕಲಬುರಗಿಯಲ್ಲಿ ವಾಡಿಕೆ 35 ರಷ್ಟು ದಾಖಲಾಗುವ ಬದಲಾಗಿ 38.2ರಷ್ಟು ದಾಖಲಾಗಿದೆ.

IMD Prediction Hottest Weather will Continue in Acorss Karnataka Due Summer Climate Change

ಜಿಲ್ಲಾವಾರು ಗರಿಷ್ಠ ಮಾಹಿತಿ, ಪಟ್ಟಿ

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ರೀತಿ ಉಷ್ಣ ಅಲೆ ಇದೆ. ಒಣ ಹವೆಗೆ ಜನರು ತುತ್ತಾಗುತ್ತಿದ್ದಾರೆ. ಕಚೇರಿ, ಮಾರುಕಟ್ಟೆಗೆ ತೆರಳುವವರು, ವಾಹನ ಸವಾರರು ಈ ರಣ ಬಿಸಿಲಿಗೆ ಹೈರಾಣಾಗಾಗಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ 33-34 ಗರಿಷ್ಠ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಾಮಾನ್ಯ ಎಂಬಂತಾಗಿದೆ. ಜಿಲ್ಲಾವಾರು ಗರಿಷ್ಠ ತಾಪಮಾನ ಇಲ್ಲಿದೆ.

IMD Prediction Hottest Weather will Continue in Acorss Karnataka Due Summer Climate Change
  • ಕಾರವಾರ : 34.6 ಡಿಗ್ರಿ ಸೆಲ್ಸಿಯಸ್
  • ಹೊನ್ನಾವರ: 32.7 ಡಿಗ್ರಿ ಸೆಲ್ಸಿಯಸ್
  • ದಕ್ಷಿಣ ಕನ್ನಡ: 32.6 ಡಿಗ್ರಿ ಸೆಲ್ಸಿಯಸ್
  • ಪೆಣಂಬೂರು: 32.7 ಡಿಗ್ರಿ ಸೆಲ್ಸಿಯಸ್
  • ಬೀದರ್: 34.4 ಡಿಗ್ರಿ ಸೆಲ್ಸಿಯಸ್
  • ವಿಜಯಪುರ: 35.4 ಡಿಗ್ರಿ ಸೆಲ್ಸಿಯಸ್
  • ರಾಯಚೂರು: 36.4 ಡಿಗ್ರಿ ಸೆಲ್ಸಿಯಸ್
  • ಬೆಳಗಾವಿ ನಗರ: 34 ಡಿಗ್ರಿ ಸೆಲ್ಸಿಯಸ್
  • ಧಾರವಾಡ: 34 ಡಿಗ್ರಿ ಸೆಲ್ಸಿಯಸ್
  • ಗದಗ: 35.7 ಡಿಗ್ರಿ ಸೆಲ್ಸಿಯಸ್
  • ಹಾವೇರಿ: 35.5 ಡಿಗ್ರಿ ಸೆಲ್ಸಿಯಸ್
  • ಕೊಪ್ಪಳ : 35.5 ಡಿಗ್ರಿ ಸೆಲ್ಸಿಯಸ್
  • ಚಿತ್ರದುರ್ಗ: 35 ಡಿಗ್ರಿ ಸೆಲ್ಸಿಯಸ್
  • ಮೈಸೂರು: 34.5 ಡಿಗ್ರಿ ಸೆಲ್ಸಿಯಸ್
  • ದಾವಣಗೆರೆ: 35.3 ಡಿಗ್ರಿ ಸೆಲ್ಸಿಯಸ್
  • ಕೊಡಗು: 34 ಡಿಗ್ರಿ ಸೆಲ್ಸಿಯಸ್
  • ಮಂಡ್ಯ:34.6 ಡಿಗ್ರಿ ಸೆಲ್ಸಿಯಸ್
  • ರಾಮನಗರ : 33.8 ಡಿಗ್ರಿ ಸೆಲ್ಸಿಯಸ್

ರಾಜ್ಯದಲ್ಲಿ ಒಣಹವೆ ಮುಂದುವರಿಕೆ

ಸದ್ಯ ದಾಖಲಾಗುವ ತಾಪಮಾನದಲ್ಲಿ ಇಳಿಕೆ ಆಗುವ ಮುನ್ಸೂಚನೆ ಇಲ್ಲ. ಮುಂದಿನ ಒಂದೆರಡು ತಿಂಗಳುಗಳ ಕಾಲ ರಾಜ್ಯಾದ್ಯಂತ ಬಿಸಿಲಿ ಹವೆ ಹೆಚ್ಚಾಗಲಿದೆ. ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕಕ್ಕೆ ಮುಂದಿನ ಕೆಲವು ದಿನಗಳ ಕಾಲ ಒಣ ಹವೆ ಎಚ್ಚರಿಕೆ ನೀಡಿದೆ. ಮೂಲಗಳ ಪ್ರಕಾರ, ಮೇ ತಿಂಗಳವ ವರೆಗೆ ಇಂತದ್ದೇ ಉಷ್ಣ ಅಲೆ ವಾತಾವರಣ ರಾಜ್ಯದಲ್ಲಿ ಕಂಡು ಬರಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+