ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಬೆಂಗಳೂರಿಗೆ ವರ್ಗಾವಣೆ

ಬೆಂಗಳೂರು, ಏಪ್ರಿಲ್ 22 : ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಕಾರಣಕ್ಕೆ ಮೊಹ್ಮದ್ ಮೊಯ್ಸಿನ್ ಅವರನ್ನು ಅಮಾನತು ಮಾಡಲಾಗಿತ್ತು.

ಮೊಹ್ಮದ್ ಮೊಯ್ಸಿನ್ ಅವರು ಬೆಂಗಳೂರಿಗೆ ತೆರಳಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ರಿಪೋರ್ಟ್ ಮಾಡಿಕೊಳ್ಳಬೇಕು. ಇನ್ನು ಮುಂದೆ ಬೆಂಗಳೂರು ಮೊಹ್ಮದ್ ಮೊಯ್ಸಿನ್ ಅವರು ಕೇಂದ್ರ ಸ್ಥಾನವಾಗಿರುತ್ತದೆ ಎಂದು ಆದೇಶ ನೀಡಿದೆ.

ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಅವರನ್ನು ಒಡಿಶಾ ರಾಜ್ಯದ ಸಂಬಲ್ ಪುರ್ದಕ್ಕೆ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿತ್ತು. ಮೊಹ್ಮದ್ ಮೊಯ್ಸಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದರು.

IAS officer Mohammed Mohsin now in Bengaluru

ಚುನಾವಣಾ ಆಯೋಗದ ನಿಯಮದಂತೆ ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳ ಹೆಲಿಕಾಪ್ಟರ್ ತಪಾಸಣೆ ಮಾಡುವಾಗ ಕೆಲವು ನಿಯಮ ಅನುಸರಿಸಬೇಕು. ಆದರೆ, ಯಾವ ನಿಯಮವನ್ನು ಮೊಹ್ಮದ್ ಮೊಯ್ಸಿನ್ ಪಾಲನೆ ಮಾಡಿರಲಿಲ್ಲ. ಆದ್ದರಿಂದ, ಅವರನ್ನು ಅಮಾನತು ಮಾಡಲಾಗಿತ್ತು.

ಒಡಿಶಾದ ಮುಖ್ಯ ಚುನಾವಣಾಧಿಕಾರಿ ಸುರೇಂದ್ರ ಕುಮಾರ್ ಸಲ್ಲಿಸಿದ ವರದಿ ಅನ್ವಯ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಮೊಹ್ಮದ್ ಮೊಯ್ಸಿನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+