ಬ್ಲೂ ಫಿಲಂ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸಿದ ಡಿಕೆ ಶಿವಕುಮಾರ್

ಬೆಂಗಳೂರು, ನವೆಂಬರ್ 21: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮಾಡಿದ್ದ 'ಬ್ಲೂ ಫಿಲಂ' ಆರೋಪ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಈ ವಿಚಾರ ರಾಜಕೀಯ ನಿವೃತ್ತಿವರೆಗೂ ತಲುಪಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಲಿ ಚಿತ್ರಗಳನ್ನು ಪ್ರದರ್ಶಿಸಿಕೊಂಡು ಬಂದವರು. ಈ ಮನಸ್ಥಿತಿಯವನಿಗೆ ಇನ್ನೇನು ಬರುತ್ತದೆ ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಡಿಕೆ ಶಿವಕುಮಾರ್ ಅವರು ಮಂಗಳವಾರ ಕುಮಾರಸ್ವಾಮಿ ಮೇಲೆ ಅವರು ಸವಾಲು ಹಾಕಿದ್ದಾರೆ.

I Will Quit Politics If is Proven HD Kumaraswamy Blue Film Alligation: DCM DK Shivakumar said

ನನ್ನ ಒಡೆತನದಲ್ಲಿನ ಚಿತ್ರಮಂದಿರದಲ್ಲಿ (ಟೆಂಟ್) 'ನೀಲಿ ಚಿತ್ರ' ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಚ್‌ಡಿ ಕುಮಾರಸ್ವಾಮಿ ಅವರ ಈ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೇಕಿದ್ದರೆ ಕನಕಪುರಕ್ಕೆ ಭೇಟಿ ನೀಡಿ ಕುಮಾರಸ್ವಾಮಿಯವರೇ ಸ್ವತಃ ವಿಚಾರಿಸುವಂತೆಯೂ ಶಿವಕುಮಾರ್ ಅವರು ಸವಾಲೆಸೆದಿದ್ದಾರೆ.

ಕುಮಾರಸ್ವಾಮಿ ಬಗ್ಗೆ ನನಗೆ ವಿಷಾಧವಿದೆ: ಡಿಕೆಶಿ

ನನಗೆ ಕುಮಾರಸ್ವಾಮಿಯವರ ಬಗ್ಗೆ ಕರುಣೆ ಮತ್ತು ವಿಷಾಧವಿದೆ. ಅಂತಹ ಹಿರಿಯ ನಾಯಕರು, ಇಂತಹ ವ್ಯಕ್ತಿಯನ್ನು ತನ್ನ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದೇಕೆ? ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಕನಕಪುರದ ಜನರನ್ನು ಕೇಳಲಿ. ನಾನು ಎಲ್ಲಿಂದ ಆಯ್ಕೆಯಾಗಿದ್ದೇನೆ.

ನಾನು 1.23 ಲಕ್ಷ ಮತದಾರರಿಂದ ಆಯ್ಕೆಯಾಗಿದ್ದೇನೆ. ಯಾರಾದರೂ ಹೇಳಿದರೆ ನಾನು ರಾಜಕೀಯ ತ್ಯಜಿಸುತ್ತೇನೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ಅವರ ಅಂತಸ್ತಿನ ಯಾರಾದರೂ ಹಾಗೆ ಮಾತನಾಡಬಾರದು ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

I Will Quit Politics If is Proven HD Kumaraswamy Blue Film Alligation: DCM DK Shivakumar said

ಈಗ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿಗಳು ಇಷ್ಟು ವರ್ಷ ಇದೇ ವಿಚಾರ ಬಗ್ಗೆ ಮೌನ ವಹಿಸಿದ್ದೇಕೆ ಎಂದು ಅವರು ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದರು. ಇಲ್ಲವೇ ಅವರ ತಂದೆ ಎಚ್‌ಡಿ ದೇವೇಗೌಡರು ನನ್ನ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದಾಗಿ ಜನರಿಗೆ ತಿಳಿಸಬೇಕಿತ್ತು ಎಂದು ಡಿಕೆ ಶಿವಕುಮಾರ್ ಹೇಳಿದರು.

ಎಚ್‌ಡಿ ಕುಮಾರಸ್ವಾಮಿ ಆರೋಪವೇನು?

ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ವಿದ್ಯುತ್ ಕಳ್ಳತನದ ಪೊಸ್ಟರ್ ಅಂಟಿಸಲಾಗಿತ್ತು. ತಮ್ಮ ವಿರುದ್ಧ ಹಲವೆಡೆ ಪೋಸ್ಟರ್ ಅಂಟಿಸಿರುವುದಕ್ಕೆ ಶಿವಕುಮಾರ್ ಕಾರಣ ಎಂದು ಎಚ್‌ಡಿಕೆ ಆರೋಪಿಸಿದರು. ಡಿಕೆಶಿ ನೀಲಿ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಜೀವನವನ್ನು ಮಾಡಿದ್ದಾರೆ. ಅಂತಹ ವ್ಯಕ್ತಿಯ ಮನಸ್ಸಿನಲ್ಲಿ, ಇನ್ನೇನು ಬರುತ್ತದೆ? ಅವರು ಅಂತಹ ಪೋಸ್ಟರ್‌ಗಳನ್ನು ಮಾತ್ರ ಅಂಟಿಸಬಹುದು. ಸಾತನೂರಿನ ದೊಡ್ಡಲಹಳ್ಳಿಯಲ್ಲಿದ್ದ ಟೆಂಟ್ ನಲ್ಲಿ ನೀಲಿ ಚಿತ್ರಗಳನ್ನು ತೋರಿಸುತ್ತಿದ್ದರು. ಅಂತಹವರು ಅಧಿಕಾರದಲ್ಲಿದ್ದಾರೆ ಎಂದು ಎಚ್‌ಡಿಕೆ ಆರೋಪ ಮಾಡಿದ್ದರು.

ದೀಪಾವಳಿ ವೇಳೆ ಅಕ್ರಮವಾಗಿ ವಿದ್ಯುತ್ ಪಡೆದುಕೊಂಡ ಆರೋಪ ಎದುರಿಸಿದ್ದ ಎಚ್‌ ಡಿಕುಮಾರ್ ಅವರು ಅದಕ್ಕೆ ತಂಡ ತೆತ್ತರು. ಅದಾಗಲೇ ವಿದ್ಯುತ್ ಕಳ್ಳ ಎಂಬ ಎಚ್‌ಡಿಕೆ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಡಿಕೆ ಶಿವಕುಮಾರ್ ವಿರುದ್ಧ ಏಕವಚನಲ್ಲಿಯೇ ಆರೋಪಿಸಿದ್ದರು. ಅದಕ್ಕೆ ಸೋಮವಾರ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಲ್ಲದೇ ಇಂದು ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+