ನಾನು ಪಕ್ಷಕ್ಕಾಗಿ ಸಚಿವ ಸ್ಥಾನ ತ್ಯಾಗ ಮಾಡಿದೆ: ಹೊರಟ್ಟಿ

ಬೆಂಗಳೂರು, ಜೂನ್ 06: ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲವು ಅನಿರೀಕ್ಷಿತ ಹೆಸರುಗಳು ಕಾಣಿಸಿಕೊಂಡಿವೆ. ಅದೇ ರೀತಿ ಕೆಲವು ನಿರೀಕ್ಷಿತ ಹೆಸರುಗಳು ಮಾಯವಾಗಿವೆ.

ಜೆಡಿಎಸ್ ವಿಧಾನಪರಿಷತ್ ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದೆ. ಆದ್ದರಿಂದ, ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.

I will not become Minister I have Scarified the post : MLC Basavaraja Horatti

'ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಗೊಂದಲ ನಿರ್ಮಾಣವಾಗದಂತೆ ಸಮ್ಮಿಶ್ರ ಸರಕಾರ ಸ್ಥಿರವಾಗಬೇಕಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರಿಂದಲೂ ತ್ಯಾಗ, ಸಂಯಮ ಹಾಗೂ ಸಹಕಾರ ಬೇಕಿದೆ' ಎಂದು ಮೈಸೂರಿನಲ್ಲಿ ಮಂಗಳವಾರದಂದು ಹೇಳಿದ್ದನ್ನು ಇಂದು ಕೂಡಾ ಪುನರುಚ್ಚರಿಸಿದ್ದಾರೆ.

ಎರಡೂ ಪಕ್ಷಗಳಿಂದ ಆಯ್ಕೆಯಾದ ಶಾಸಕರು ಮಂತ್ರಿಯಾಗಬೇಕೆಂದು ಆಸೆಯಿಟ್ಟುಕೊಂಡಿದ್ದಾರೆ. 5 ವರ್ಷಗಳ ಕಾಲ ಸರ್ಕಾರ ನಡೆಸಿ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಬೋಧನೆ ಮಾಡುತ್ತೇನೆ. ನಾನು ಮಂತ್ರಿ ಸ್ಥಾನವನ್ನ ತ್ಯಾಗ ಮಾಡಿ, ಯಾರು ಅಸಮಾಧಾನಗೊಂಡಿದ್ದಾರೆ ಅವರನ್ನ ಮಂತ್ರಿಯನ್ನಾಗಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದರು.

ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಬದಲು ವಿಧಾನಪರಿಷತ್ ಸಭಾಪತಿ ಸ್ಥಾನ ನೀಡಲು ಜೆಡಿಎಸ್ ಚಿಂತನೆ ನಡೆಸಿತ್ತು. ಆದರೆ, ಸಭಾಪತಿ ಸ್ಥಾನಕ್ಕೇರಲು ಹೊರಟ್ಟಿ ಸಿದ್ಧವಿಲ್ಲ ಎಂದು ತಿಳಿದು ಬಂದಿದೆ.

ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಬಳಿ ಇರಿಸಿಕೊಂಡ ಎರಡು, ಮೂರು ಖಾತೆಗಳನ್ನು ಹಂಚದಿರಲು ನಿರ್ಧರಿಸಲಾಗಿದ್ದು, 2 ರಿಂದ 3 ಸಚಿವ ಸ್ಥಾನವನ್ನು ನಂತರ ತುಂಬಲಾಗುತ್ತದೆ. ಒಟ್ಟಾರೆ, ಎರಡನೇ ಹಂತದಲ್ಲಿ 10-12 ಸಚಿವರು ಸಂಪುಟ ಸೇರಲಿದ್ದಾರೆ.

ಜೆಡಿಎಸ್ ಎಂಎಲ್ಸಿಗಳ ಪೈಕಿ ಬಸವರಾಜ ಹೊರಟ್ಟಿ, ಟಿ.ಎ ಶರವಣ ಹಾಗೂ ಬಿಎಂ ಫಾರೂಕ್ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+