ಬೆಳಗಾವಿಗೆ ಮತ್ತೊಂದು ರೈಲು: ವಿ. ಸೋಮಣ್ಣ
ಬೆಳಗಾವಿ,ಸೆಪ್ಟೆಂಬರ್ 16: ಬೆಳಗಾವಿಗೆ ಇಂದು ವಂದೇ ಭಾರತ್ ರೈಲು ಉದ್ಘಾಟನಾ ಮಾಡುತ್ತೇನೆ. ಕೆಲ ದಿನಗಳ ನಂತರ ಮತ್ತೊಂದು ರೈಲು ಬೆಳಗಾವಿಗೆ ಬರಲಿದೆ ಅಂತಾ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಹೇಳಿದರು.
ವಂದೇ ಭಾರತ ರೈಲ್ವೆ ಉದ್ಘಾಟನೆಗೂ ಮುನ್ನ ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ 7 ರೈಲು ಉದ್ಘಾಟನಾ ಮಾಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಕೊಲ್ಹಾಪುರ ಪುಣೆ ರೈಲು ಉದ್ಘಾಟನೆ ಮಾಡ್ತಿನಿ, ಬೆಳಗಾವಿಯಲ್ಲಿ ಪುಣೆಯಿಂದ ವಂದೇ ಭಾರತ ರೈಲು ರಿಸಿವ್ ಮಾಡ್ತಿನಿ ಎಂದು ಹೇಳಿದರು.

ಇನ್ನು ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಬೆಳಗಾವಿ- ಬೆಂಗಳೂರು ವಂದೇ ಭಾರತ ರೈಲು ತಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ಬೆಳಗಾವಿಗೆ ಮಂಜೂರಾಗಿದ್ದ ವಂದೇ ಭಾರತ್ ರೈಲು ಹುಬ್ಬಳ್ಳಿಗೆ ವಿಸ್ತರಣೆ ಮಾಡಲಾಗಿದೆ ನಾನು ಬಂದು ಮೂರು ತಿಂಗಳು ಆಗಿದೆ. ಬೆಳಗಾವಿಗೆ ಇಂದು ವಂದೇ ಭಾರತ್ ರೈಲು ಉದ್ಘಾಟನಾ ಮಾಡುತ್ತೇವೆ. ಕೆಲ ದಿನಗಳಲ್ಲಿ ಮತ್ತೊಂದು ರೈಲು ಬೆಳಗಾವಿಗೆ ಬರಲಿದೆ ಜೊತೆಗೆ ಬೆಂಗಳೂರು- ಬೆಳಗಾವಿ ವಂದೇ ಭಾರತ್ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
'ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು- ಧಾರವಾಡ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು' ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ರೈಲ್ವೆ ಅಧಿಕಾರಿಗಳು ಏನು ತಾಂತ್ರಿಕ ಕಾರಣ ಕೊಟ್ಟಿದ್ದಾರೆ ಗೊತ್ತಿಲ್ಲ. ಆಗ ನಾನು ಸಚಿವನಾಗಿರಲಿಲ್ಲ. ಹಳೆಯದ್ದನ್ನೇ ಕೆದಕಿ ಕೆಲಸ ಮಾಡಲಾಗುವುದಿಲ್ಲ.
ಬೆಂಗಳೂರು- ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವ ಕುರಿತು ಸಂಸದ ಜಗದೀಶ ಶೆಟ್ಟರ್ ಹಾಗೂ ಇತರೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಜನರಿಗೆ ಸೇವೆ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
'ಬೆಳಗಾವಿ-ಚನ್ನಮ್ಮನ ಕಿತ್ತೂರು-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣದ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ' ಎಂದು ತಿಳಿಸಿದರು.
'ಪುಣೆ-ಹುಬ್ಬಳ್ಳಿ ಮತ್ತು ಪುಣೆ-ಕೊಲ್ಲಾಪುರ ಮಧ್ಯೆ ವಂದೇ ಭಾರತ್ ರೈಲಿನ ಸಂಚಾರ ಇಂದು ಆರಂಭವಾಗಲಿದೆ. ಮಧ್ಯಾಹ್ನ ಕೊಲ್ಲಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವ ಹಿಸಲಿದ್ದೇನೆ. ಸಂಜೆ ಬೆಳಗಾವಿಯಲ್ಲೂ ಈ ರೈಲು ಸ್ವಾಗತಿಸಲಿದ್ದೇನೆ' ಎಂದರು.
ಬೆಳಗಾವಿ ಮತ್ತು ಮುಂಬೈ ಮಧ್ಯೆ ರಾತ್ರಿ ಅವಧಿಯಲ್ಲಿ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, 'ಈ ಸಾಧ್ಯಾಸಾಧ್ಯತೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಉತ್ತರಿಸಿದರು.
'ನರೇಂದ್ರ ಮೋದಿ ಪ್ರಧಾನಿಯಾದ ನಂತರ, ದೇಶದಲ್ಲಿ ರೈಲ್ವೆ ಸೌಲಭ್ಯಗಳು ಮತ್ತು ಮೂಲಸೌಕರ್ಯ ಶೇ 100ರಷ್ಟು ಸುಧಾರಿಸಿದೆ. ಜನರು ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದಾರೆ. ಆರು ವಂದೇ ಭಾರತ್ ರೈಲುಗಳಿಗೆ ಭಾನುವಾರ ಧ್ವಜಾರೋಹಣ ಮಾಡಲಾಗಿದ್ದು, ಸೋಮವಾರ ಏಳು ರೈಲುಗಳಿಗೆ ಧ್ವಜಾರೋಹಣ ಮಾಡಲಾಗುತ್ತಿದೆ' ಎಂದು ತಿಳಿಸಿದರು.
ಬೆಳಗಾವಿ- ಮುಂಬೈಗೆ ನೇರ ರೈಲು ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕುಳಿತು ಮಾತನಾಡೋಣ. ಜನ ಸಾಮಾನ್ಯರಿಗೆ ಅನುಕೂಲಕ್ಕೆ ಏನ್ ಬೇಕು ಎಲ್ಲವೂ ಮಾಡ್ತಿವಿ, ಸವದತ್ತಿ ಬೆಳಗಾವಿ ಗೆ ರೈಲು ಬಿಡುವ ವಿಚಾರ ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಚರ್ಚೆ ಮಾಡಿದ್ರು. ಸರ್ವೇ ಕಾರ್ಯ ಮಾಡಲು ಸೂಚನೆ ನೀಡಿದ್ದೇನೆ. ಸರ್ವೇ ವರದಿ ಬಂದ ಮೇಲೆ ಕ್ರಮ ವಹಿಸುತ್ತೇವೆ ಎಂದು ವಿ ಸೋಮಣ್ಣ ತಿಳಿಸಿದರು.












Click it and Unblock the Notifications