JDS-BJP Alliance: ಸೆ. 21 ರಂದು ದೆಹಲಿಯಲ್ಲಿ ಮೈತ್ರಿ ಕುರಿತು ಅಂತಿಮ ಮಾತುಕತೆ; ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 19: ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿದ್ದು, ಈ ಕುರಿತು ಅಂತಿಮ ಹಂತದ ಮಾತುಕತೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೆಪ್ಟೆಂಬರ್ 21 ರಂದು ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೆಟ್ಟ ಕಾಂಗ್ರೆಸ್ ಸರ್ಕಾರ ಹೋಗಬೇಕು ಅಂದ್ರೆ ಮೈತ್ರಿ ಅವಶ್ಯಕತೆ ಇದೆ. ಎಷ್ಟು ಸ್ಥಾನ ಬೇಕು. ಎಲ್ಲದರ ಬಗ್ಗೆ ಚರ್ಚೆ ಮಾಡುತ್ತೇವೆ, ಈ ಕೆಟ್ಟ ಸರ್ಕಾರ ಹೋಗಬೇಕು ಅಂದ್ರೆ ಮೈತ್ರಿ ಅವಶ್ಯಕತೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಾವೇರಿ ನೀರಿನ ಹಂಚಿಕೆ ಪ್ರಾಧಿಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ಮುಂದಿನ ಹದಿನೈದು ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ಮಾಡಿದ್ದಾರೆ. ನಾವು ನೀರನ್ನು ಬಿಡದೇ ಇದ್ರೆ, ಕೋರ್ಟ್ ನಲ್ಲಿ ನಮ್ಮ ವಿರುದ್ದ ನಿರ್ಣಯ ಆಗಬಹುದು ಎಂದು ನಿನ್ನೆ ರಾತ್ರಿ ಯಿಂದಲೇ ನೀರನ್ನು ಬಿಡ್ತಾ ಇದಾರೆ. ನಿನ್ನೆ ನೀರಾವರಿ ಸಚಿವರು ತರಾತುರಿಯಲ್ಲಿ ಮಾಡಿರುವ ಈ ನಿರ್ಧಾರ ಮಾಡಿ, ನಮ್ಮ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಂದಿನ ಸರ್ಕಾರಗಳು ನೀರು ಬಿಟ್ಟಿಲ್ವಾ ಅಂತಾ ಅವರು ಕೇಳ್ತಿದಾರೆ. ಮಳೆಯ ಅಭಾವದಿಂದ, ಕೃಷಿ ಗಾಗಿ ನೀರನ್ನು ಕೊಡಲು ಆಗದೇ ಬೆಳೆಗಳನ್ನು ರೈತರು ಸುಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಇದರ ಜೊತೆಗೆ ನಮ್ಮ ರೈತರು ಪ್ರತಿಭಟನೆ ಗಳನ್ನು ಮಾಡ್ತಿದಾರೆ. ಕಾವೇರಿ ವಿಚಾರದಲ್ಲಿ ಸಭೆಗಳು ನಡೆದಾಗ ಹಿರಿಯ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸದೇ ಲಘುವಾಗಿ ತೆಗೆದುಕೊಂಡಿದ್ದಾರೆ
ತಮಿಳುನಾಡಿನ ಹತ್ತು ಹದಿನೈದು ಜನ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸ್ತಾರೆ, ಆದರೆ ನಮ್ಮ ಅಧಿಕಾರಿಗಳು ಪಾಪಾ ಬಿಡುವಿಲ್ಲದ ಕೆಲಸದಲ್ಲಿ ಇದಾರೆ. ವರ್ಚುವಲ್ ಮೂಲಕ ಭಾಗವಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಸಿಎಂ ಇದ್ದಾಗ, ದೇವೇಗೌಡರ ಸಲಹೆ ಮೇರೆಗೆ ರಿವ್ಯೂ ಪಿಟಿಷನ್ ಹಾಕಿದ್ಧೆವು.ನಿನ್ನೆ ದೇವೇಗೌಡರು ಮಾತಾಡಿದ್ದು ಎಲ್ಲಾ ಗಮನಿಸಿದ್ದೀರಿ, ಆಗ ಎಲ್ಲಿ ಹೋಗಿದ್ರು ಕಾಂಗ್ರೆಸ್ ನ ಅಧ್ಯಕ್ಷರು. ದೇವೇಗೌಡರು ಈ ವಯಸ್ಸಿನಲ್ಲಿ ಇಷ್ಟು ಮಾತಾಡ್ತಾ ಇದಾರೆ. ಎಳೆಎಳೆಯಾಗಿ ರಾಜ್ಯದ ಪರಿಸ್ಥಿತಿ ಬಿಡಿಸಿ ಇಟ್ಟಿದ್ದಾರೆ. ನಿನ್ನೆ ಅವರು ಮಾತಾಡುವಾಗಾ ತಮಿಳುನಾಡಿನ ರಾಜ್ಯ ಸಭಾ ಸದಸ್ಯರು ಪ್ರತಿಭಟನೆ ಮಾಡಿದ್ರು. ಅದನ್ನು ಎದುರಿಸಲು ಕೂತು ಮಾತಾಡ್ತಿದ್ದ ದೇವೇಗೌಡರು ಎದ್ದು ನಿಂತು ಮಾತಾಡಿದ್ದಾರೆ ಎಂದು ಹೇಳಿದರು.

ದೇವೇಗೌಡರು ಮೈತ್ರಿ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ. ಕಾವೇರಿ ವಿಚಾರದಲ್ಲಿ ಮಾತಾಡಲು ಅಲ್ಲ ಅಂತ ಮಂಡ್ಯದ ಮಹಾ ನಾಯಕರು ಹೇಳಿದ್ದಾರೆ, ಇವರೆಲ್ಲಾ ನೆನ್ನೆ ಮೊನ್ನೆ ಬಂದವರು
ದೇವೇಗೌಡರ ಕಮಿಟ್‌ಮೆಂಟ್ ಬಗ್ಗೆ ಇವರಿಗೇನು ಗೊತ್ತು? ಎಂದು ಪ್ರಶ್ನಿಸಿದ ಅವರು, ನಿನ್ನೆ ಒಂದು ಎಮರ್ಜೆನ್ಸಿ ಅರ್ಜಿ ಹಾಕಬೇಕಿತ್ತು. ಎಷ್ಟೋ ಸಲ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ನಡೆದ ಉದಾಹರಣೆಗಳು ಕೂಡಾ ಇವೆ. ಕಾನೂನು ತಜ್ಞರು ಇವರಿಗೆ ಹೇಳಲಿಲ್ಲವಾ.? ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿನವರು ಈ ವಿಚಾರ ರೈಸ್ ಮಾಡಿದಾಗ ಮಲ್ಲಿಕಾರ್ಜುನ್ ಖರ್ಗೆಯವರು ಯಾಕೆ ಮಾತಾಡಲಿಲ್ಲ. ಇಲ್ಲಿ ಕಾಫಿ,ತಿಂಡಿ ಕೊಟ್ಟು ಆಲ್ ಪಾರ್ಟಿ ಮೀಟಿಂಗ್ ಮಾಡುತ್ತಾರೆ ಅಲ್ವಾ.
ಅದಕ್ಕೆನಾ ಮೀಟಿಂಗ್ ಮಾಡುವುದು. ಇದಕ್ಕೆ ನಾವು ಹೋಗಬೇಕಾ.? ಎಂದು ಪ್ರಶ್ನಿಸಿ ಕುಟುಕಿದ್ದಾರೆ.
ದೇವೇಗೌಡರು ಪ್ರಧಾನಿ ಆಗಿದ್ದಾಗ ಬಾಂಗ್ಲಾದೇಶ ದ ನೀರಿನ ಸಮಸ್ಯೆ ಬಗೆ ಹರಿಸಿದರು. ನಮ್ಮ ಹಣೆ ಬರಹಕ್ಕೆ ನಮ್ಮ ದೇಶದ ಸಮಸ್ಯೆ ಬಗೆಹರಿಸಲು ಆಗಲಿಲ್ಲ, ಯುಎಸ್ಬಿಆರ್ ಎಂಬ ಅಮೇರಿಕಾ ಸಂಸ್ಥೆ ಯ ನಿರ್ದೇಶನ ದಂತೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ನೋಡ್ತಾ ಇದಾರೆ. ಆ ಮೂಲ ಸಂಸ್ಥೆಯನ್ನೇ ಕರೆದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಲ್ಲವೇ.? ಇಲ್ಲಿ ನಾವು ಅಣೆಕಟ್ಟು ಕಟ್ಟಿದ್ದೇವೆ, ಕೇಂದ್ರ ಏನೂ ಇದಕ್ಕೆ ಹಣ ಕೊಟ್ಟಿಲ್ಲ. ಅಂತಿಮವಾಗಿ ನಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಎಷ್ಟು ವರ್ಷ ಈ ದಬ್ಬಾಳಿಕೆ ಸಹಿಸಲು ಸಾಧ್ಯ ಎಂದು ಹೇಳಿದರು.
ಜೈಲಿಗೆ ಹಾಕ್ತಾರಾ ಹಾಕಲಿ ಬಿಡಿ. ಪ್ಯಾರಾ ಮಿಲಿಟರಿ ಕರೆಸ್ತಾರಾ? ಎಲ್ಲದಕ್ಕೂ ಹೀಗೇ ಅವರು ತಕರಾರು ಮಾಡಿದ್ರೆ ಹೇಗೆ. ಇದು ಯಾವ ಒಕ್ಕೂಟದ ವ್ಯವಸ್ಥೆ.? ಎಂದು ಪ್ರಶ್ನಿಸಿದ ಅವರು, ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಲೇ ಬೇಕಿದೆ. ತಮಿಳುನಾಡಿನಲ್ಲಿ ಯಾವ ರೀತಿ ಎಲ್ಲರೂ ಇಂಥ ಸಂಧರ್ಭದಲ್ಲಿ ಒಗ್ಗೂಡುತ್ತಾರೆ.?ತಮಿಳುನಾಡಿನಲ್ಲಿ ಇದನ್ನು ಅವರ ತಲೆಗೆ ತುಂಬುತ್ತಾರೆ. ನಾವಿಲ್ಲಿ ಹೊಡೆದಾಡಿಕೊಂಡು ಕೂತಿದ್ದೇವೆ. ನಾವು ದೆಹಲಿಗೆ ಹೋದಾಗ ಇದರ ಬಗ್ಗೆ ಮಾತನಾಡುತ್ತೇನೆ. ಮೈತ್ರಿ ಮಾಡಿಕೊಳ್ತಾ ಇದೀವಿ ಅನ್ನೋ ಕಾರಣಕ್ಕೆ ಇದರ ಬಗ್ಗೆ ಮಾತಾಡಲು ಹಿಂದೆಮುಂದೆ ಯೋಚಿಸಲ್ಲ ಎಂದು ಹೇಳಿದರು.












Click it and Unblock the Notifications