ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ; ಇದು ರಾಜಕೀಯ ಯಾತೆಯಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ, ಜುಲೈ 12: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಾವೇರಿ ಗದಗ ಕ್ಷೇತ್ರದ ಸಂಸದನಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹಾಗೂ ನಿಮ್ಮ ವಯಕ್ತಿಕ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ಇದು ಯಾವುದೇ ರಾಜಕೀಯ ಯಾತ್ರೆಯಲ್ಲ ಮುಂದಿನ ಚುನಾವಣೆಗೂ ಈ ಯಾತೆಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾವಿ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಮುತ್ತಳ್ಳಿ, ತಡಸ, ಅಡವಿ ಸೋಮಾಪುರ, ಕುನ್ನೂರು, ಶ್ಯಾಡಂಬಿ, ಮಡಿ ಗ್ರಾಮಗಳಲ್ಲಿ ಇಂದು ಆರಂಭಿಸಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಗ್ಗಾವಿ ಸವಣೂರು ಕ್ಷೇತ್ರದ ಜನತೆಗೆ ಧನ್ಯವಾದ ಯಾತ್ರೆ ಆರಂಭಿಸಿದ್ದು, ಇದು ಯಾವುದೇ ರಾಜಕೀಯ ಯಾತ್ರೆಯಲ್ಲ ಮುಂದಿನ ಚುನಾವಣೆಗೂ ಈ ಯಾತೆಗೂ ಸಂಬಂಧವಿಲ್ಲ. ನಮ್ಮ ನಿಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ಶಾಶ್ವತಗೊಳಿಸಲು ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

I Have Resigned From The Post Of MLA Says MP Basavaraja Bommai

ನಾನು ಶಾಸಕನಾಗಿಯೇ ನಿಮ್ಮ ಸೇವೆ ಮಾಡಬೇಕೆಂದೇನಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಾವೇರಿ ಗದಗ ಕ್ಷೇತ್ರದ ಸಂಸದನಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹಾಗೂ ನಿಮ್ಮ ವಯಕ್ತಿಕ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ನಾನು ಶಾಸಕನಲ್ಲದಿದ್ದರೂ ನಿಮ್ಮ ಸೇವೆ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ನೀವು ನನಗೆ ನೀಡಿದ್ದೀರಿ ಎಂದು ಹೇಳಿದರು.

ಇವತ್ತು ಬಹಳ ದೊಡ್ಡ ಪ್ರಮಾಣದ ಅಭಿವೃದ್ಧಿಯಾಗಬೇಕೆಂಬ ಪರಿಕಲನೆ ನನ್ನದಾಗಿತ್ತು. ವಾಣಿಜ್ಯಿಕವಾಗಿ, ಶೈಕ್ಷಣಿಕವಾಗಿ ತಡಸ ಗ್ರಾಮ ಅಭಿವೃದ್ಧಿಯಾಗಬೇಕೆಂಬ ಬಯಕೆ ನನ್ನದಾಗಿದೆ. ಪ್ರಗತಿ ನಿರಂತರ ನಡೆಯುವ ಪ್ರಕ್ರಿಯೆ ತಡಸ್ ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿದ್ದಾರೆ. ಆವರೆಲ್ಲರೂ ನಮ್ಮವರು ಎಂದು ನನಗೆ ಬೆಂಬಲ ಕೊಟ್ಟಿದ್ದಾರೆ. ಪ್ರತಿಬಾರಿ ಚುನಾವಣೆಯಲ್ಲಿ ಮತ ಎಣಿಕೆ ನಡೆಯುವುದು ತಡಸ್ ಹಾಗೂ ಮುತ್ತಳ್ಳಿ ಗ್ರಾಮದಿಂದ ಆರಂಭವಾಗುತ್ತದೆ. ಈ ಭಾಗದ ಜನರು ಕೇವಲ ಮತಗಳ ಮೂಲಕವಲ್ಲ ಅತ್ಮಸ್ಥೆರ್ಯವನ್ನೂ ನನಗೆ ನೀಡಿದ್ದಾರೆ. ನಾನು ನಿಮ್ಮನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಭಾಗದ ಜನರಿಗೆ ನನ್ನ ಮನಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದರು.

ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ, ಸಚಿವನಾಗಿ ಮುಖ್ಯಮಂತ್ರಿಯಾಗಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ನಿಮಗೆ ನನ್ನ ಹೃದಯದ ಅಂತರಾಳದಿಂದ ಕೋಟಿ ಕೋಟಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ತಡಸ್ ಗ್ರಾಮ ಮೂರು ತಾಲೂಕುಗಳ ಕೇಂದ್ರ ಬಿಂದುವಾಗಿದೆ. ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ, ಎಲೆಕ್ಟ್ರಿಕ್ ಸಮಸ್ಯೆಯಿಂದ ಗ್ರಾಮ ಕೂಡಿತ್ತು. ದೊಡ್ಡ ಮಳೆಯಾದರೆ ಮನೆಯೊಳಗೆ ನೀರು ಬರುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿ ಊರಿಗೆ ಬಸ್ ನಿಲ್ದಾಣ, ಹೈಸ್ಕೂಲು, ಕಾಲೇಜು ಎಲ್ಲವನ್ನೂ ನಿಮ್ಮ ಸಹಕಾರದಿಂದ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ನಾನು ನಿಮ್ಮ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದೇನೆ. ನೀವು ನನ್ನ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದೀರಿ. ಬರುವ ದಿನಗಳಲ್ಲಿ ಈ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಬೇಕು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಮುಂದುವರೆಯುತ್ತಿರುವ ತಾಲೂಕು ಎಂಬ ಹಣೆ ಪಟ್ಟಿಗೆ ಬದಲಾಯಿಸಲಾಗಿದೆ. ವರದಾ ನದಿಯಿಂದ ತಡಸದ ಕೆರೆಗೆ ನೀರು ಹರಿಸುವ ಕುರಿತು ನಮ್ಮ ಹಿರಿಯರು ಯಾರೂ ಯೋಚನೆ ಮಾಡಿರಲಿಲ್ಲ. ಯಾವುದು ಅಸಾಧ್ಯವಾಗಿತ್ತೋ ಅದನ್ನು ನಾನು ಮಾಡಿ ತೋರಿಸಿದ್ದೇನೆ. ವರದಾ ನದಿಯ ನೀರನ್ನು ತಡಸ ಕೆರೆಗೆ ಹರಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಅಭಿವೃದ್ಧಿಯ ಬಗ್ಗೆ ನಿಮ್ಮ ಕಳಕಳಿ ಇಟುಕೊಂಡು ಯಾವಾಗಲೂ ಕೂಡ ನೀವು ನನ್ನ ಬಳಿ ಬರಬಹುದು. ನನ್ನ ಮನೆಯ ಬಾಗಿಲು ಹಾರ್ಗೂ ಮನಸಿನ ಬಾಗಿಲು ತೆರೆದಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+