ನಾನು ತಪ್ಪು ಮಾಡಿಲ್ಲ ಕ್ಷಮೆ ಕೇಳಲ್ಲ: ಶ್ರುತಿ ಹರಿಹರನ್

ಬೆಂಗಳೂರು, ಅಕ್ಟೋಬರ್ 25: 'ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ಕ್ಷಮೆ ಕೇಳಲ್ಲ' ಎಂದು ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ನಟಿ ಶ್ರುತಿ ಹರಿಹರನ್ ಹೇಳಿದರು.

ಶ್ರುತಿ ಹರಿಹರನ್‌ ಅವರು ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು ವಿವಾದ ಆಗಿತ್ತು. ಅದಕ್ಕಾಗಿ ಇಂದು ಕನ್ನಡ ಫಿಲ್ಮ್‌ ಚೇಂಬರ್‌ನಲ್ಲಿ ಆಯೋಜಿಸಿದ್ದ ಸಂಧಾನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ಹೇಳಿದರು.

ಸಮಾಜ ಹೇಗಾಗಿದೆ ಎಂದರೆ ಯಾರದ್ದೇ ತಪ್ಪಿದ್ದರು ಸಹ ಹೆಣ್ಣೆ ಕ್ಷಮೆ ಕೇಳಬೇಕು, ಹೆಣ್ಣಿನದ್ದೇ ತಪ್ಪು ಎಂದು ಬಿಂಬಿಸಲಾಗುತ್ತದೆ ಎಂದು ಶ್ರುತಿ ಹರಿಹರನ್‌ ಹೇಳಿದರು.

I did not apologies to anyone: Shruthi Hariharan

ಮುನಿರತ್ನ ಅವರು ಕವಿತಾ ಅವರಿಗೆ ಕರೆ ಮಾಡಿ ಹೀಗೊಂದು ಸಂಧಾನ ಸಭೆಗೆ ಬರಲು ಹೇಳಿದರು. ಐದು ವರ್ಷದಿಂದ ಕನ್ನಡ ಸಿನಿಮಾ ರಂಗದಲ್ಲಿ ಇರುವ ಕಾರಣ ಚೇಂಬರ್‌ ಮೇಲಿದ್ದ ಗೌರವದಿಂದ ಇಲ್ಲಿಯವರೆಗೆ ಬಂದಿದ್ದೇನೆ ಎಂದು ಶ್ರುತಿ ಹರಿಹರನ್‌ ಹೇಳಿದರು.

ಅಂಬರೀಶ್‌ ಅವರು ಬೆಳಿಗ್ಗೆ ಅಭಿಪ್ರಾಯಗಳನ್ನು ತಿಳಿಸಲು ಹೇಳಿದ್ದಾರೆ ಹಾಗಾಗಿ ನಾನು ಬೆಳಿಗ್ಗೆವರೆಗು ಕಾಯುತ್ತೇನೆ. ಅರ್ಜುನ್ ಸರ್ಜಾ ಅವರು ನನ್ನ ಮೇಲೆ ಎರಡು ಪ್ರಕರಣ ದಾಖಲಿಸಿದ್ದಾರೆ. ನಾನೇ ಮೊದಲಾಗಿ ಪ್ರಕರಣ ದಾಖಲಿಸಬಾರದು ಎಂಬ ಕಾರಣಕ್ಕೆ ವಕೀಲರನ್ನು ತಡೆದು ನಿಲ್ಲಿಸಿದ್ದೆ ಆದರೆ ನಾಳೆ ನಾನು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+