'ನನ್ನನ್ನು ಎಂಎಲ್‌ಸಿ ಮಾಡೋದು ಪಕ್ಷಕ್ಕೆ ಬಿಟ್ಟ ವಿಚಾರ'

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21 : 'ನಾನು ಯಾವುದೇ ಸ್ಥಾನಮಾನವನ್ನು ಬಯಸಿಲ್ಲ. ವಿಧಾನಪರಿಷತ್ತಿಗೆ ನನ್ನನ್ನು ಆಯ್ಕೆ ಮಾಡುವ ವಿಚಾರ ಪಕ್ಷಕ್ಕೆ ಸೇರಿದ್ದು. ಪಕ್ಷಕ್ಕೆ ಅನುಕೂಲವಾಗುವುದಾದರೆ ಯಾವುದೇ ಸ್ಥಾನಕೊಟ್ಟರು ನಿಭಾಯಿಸುವೆ' ಎಂದು ಮಾಜಿ ಸಂಸದೆ ರಮ್ಯಾ ಹೇಳಿದರು.

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಸೋಮವಾರ ನಡೆದ ಮಹಿಳಾ ಕಾಂಗ್ರೆಸ್ ಸಮಾವೇಶ ಬಳಿಕ ಮಾತನಾಡಿದ ರಮ್ಯಾ ಅವರು, 'ನಾನು ಸಂಸದೆಯಾಗುವ ಆಸೆ ತಂದೆಯವರದ್ದಾಗಿತ್ತು. ಅದು ನೆರವೇರಿದೆ. ಆದರೂ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಎಂಪಿಯಾಗಿ ಕೆಲಸ ಮಾಡುವ ಆಸೆ ಇದೆ' ಎಂದು ತಿಳಿಸಿದರು. [ಹೆಬ್ಬಾಳದಲ್ಲಿ ಸೋತರೂ ಕಾಂಗ್ರೆಸ್ಸಿಗೆ ಲಾಭ! ಹೇಗೆ?]

ramya

'ನಾನು ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ ಪರಿಷತ್ತಿಗೆ ಆಯ್ಕೆ ಮಾಡುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದು. ನಾನು ಯಾವುದೇ ಸ್ಥಾನಮಾನ ಬಯಸಿಲ್ಲ. ನನಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ' ಎಂದು ರಮ್ಯಾ ಸ್ಪಷ್ಟಪಡಿಸಿದರು. [ಪರಿಷತ್ ಸ್ಥಾನ ಬೇಡವೆಂದ್ರು ಮಾಜಿ ಸಂಸದೆ ರಮ್ಯಾ]

ಎರಡು ಸ್ಥಾನಗಳು ಖಾಲಿ ಇವೆ : 2016ರ ಫೆಬ್ರವರಿ ಮೊದಲ ವಾರದಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಜಗ್ಗೇಶ್ ಮತ್ತು ಕೃಷ್ಣಭಟ್ ಅವರ ಅವಧಿ ಪೂರ್ಣಗೊಂಡಿದ್ದು, ಇಬ್ಬರು ನಿವೃತ್ತರಾಗಿದ್ದಾರೆ. ಈ ಎರಡೂ ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಲು ಅವಕಾಶವಿದೆ. [ಪರಿಷತ್ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?]

ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರಮ್ಯಾ ಅವರನ್ನು ನಾಮನಿರ್ದೇಶನ ಮಾಡಬಹುದು ಎಂಬ ಸುದ್ದಿ ಹಬ್ಬಿದೆ. ಆದರೆ, ರಮ್ಯಾ ಅವರು ತಾವು ಎಂಎಲ್‌ಸಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mandya former MP and Congress leader Ramya on Monday said, she is not aspirant for the legislative council seat.
Please Wait while comments are loading...