'ಬಂಗಾರಪ್ಪ ಕುಟುಂಬವನ್ನ ಒಂದಾಗಿಸಲು ನಾನ್ಯಾರು?'
ಬೆಳಗಾವಿ, ಮಾರ್ಚ್ 12: ಮಾಜಿ ಸಿಎಂ ಬಂಗಾರಪ್ಪ ಕುಟುಂಬವನ್ನ ಒಂದಾಗಿಸಲು ನಾನ್ಯಾರು?,ನಾನು ಅವರ ಮನೆಯ ಅಳಿಯ ಅಷ್ಟೇ, ಮಗನಲ್ಲ ಎಂದು ನಟ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಹೇಳಿದರು.
ಗೀತಾ ಶಿವರಾಜಕುಮಾರ್ ಗೆ ಟಿಕೆಟ್ ಘೋಷಣೆ ವಿಚಾರಕ್ಕೆ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಶಿವರಾಜ್ ಕುಮಾರ್, ಲೋಕಸಭೆ ಚುನಾವಣೆ ಸಿದ್ಧತೆ ನಡೆಯುತ್ತಿದೆ.ಯಾವಾಗಿಂದ ಚುನಾವಣಾ ಪ್ರಚಾರಕ್ಕೆ ಹೋಗಬೇಕು ಅನ್ನೋದು ತೀರ್ಮಾನ ಆಗಿಲ್ಲ.

ಯಾವಾಗ ಹೋಗಬೇಕು ಅವಾಗ ಹೋಗ್ತೇನಿಈ ಬಾರಿ ಪೂರ್ತಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತೇನಿ.ಸಂಸದರಾಗಬೇಕೆಂದೇ ಚುನಾವಣೆಗೆ ಬಂದಿರೋದು. ಕುಮಾರ್ ಬಂಗಾರಪ್ಪ ಬರ್ತಾರಾ ಚುನಾವಣೆ ಪ್ರಚಾರಕ್ಕೆ, ಅದೆಲ್ಲವೂ ಗೊತ್ತಿಲ್ಲ ಸರ್ ನನಗೆ ಎಂದು ಹೇಳಿದರು.
ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರ್ತಾರೆ ಎಂಬ ಪ್ರಶ್ನೆಗೆ ಇನ್ನೂ ನಾವು ಯಾರಿಗೂ ತೊಂದರೆ ಕೊಡುವುದಕ್ಕೆ ಹೋಗಿಲ್ಲ.ಈ ಬಾರಿ ಬಿಸಿಲು ಜಾಸ್ತಿಯಿದೆ. ಅವರು ಪಾಪ ಒತ್ತಡದಿಂದ ಚುನಾವಣಾ ಪ್ರಚಾರಕ್ಕೆ ಬರಬಾರದು. ನಾನು ಕರೆದ್ರೆ ಬರ್ತಾರೆ ಹಾಗಂತ ಅವರನ್ನ ಕರೆಯುವುದಕ್ಕೆ ಹೋಗಬಾರದು.ನಮ್ಮ ನಟರಿಗೆ ಯಾವಾಗಲೂ ಸ್ಪೇಸ್ ಕೊಡಬೇಕು.ಇರೋ ಪ್ರೀತಿ ವಿಶ್ವಾಸ ಹಾಗೇ ಉಳಿಸಿಕೊಳ್ಳಬೇಕು ಎಂದರು.
ಬಂಗಾರಪ್ಪ ಕುಟುಂಬ ಒಂದಾಗಿಸಲು ಶಿವಕುಮಾರ್ ಮುಂದಾಗ್ತಿಲ್ಲಾ ಯಾಕೇ ಎಂಬ ಪ್ರಶ್ನೆಗೆ ನೋಡಿ ಅವರನ್ನ ಒಂದು ಮಾಡೋಕೇ ನಾನ್ಯಾರು. ಅವರಾಗಿಯೇ ಒಂದಾಗಬೇಕು ಅಷ್ಟೇ ನಾನೇನು ಮಾಡಕ್ಕಾಗಲ್ಲ. ನಾನು ಅವರ ಅಳಿಯ ಹೊರತು ಅವರ ಮನೆ ಮಗನಲ್ಲ ಎಂದು ಶಿವರಾಜ್ ಕುಮಾರ್ ಹೇಳಿದರುದ.
ಲೋಕಸಭೆ ಸಭೆ ಚುನಾವಣೆಯಲ್ಲಿ ಎಲ್ಲೆಡೆಗೂ ಪ್ರಚಾರ ಮಾಡ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಟೈಮ್ ನೋಡ್ಕೋಂಡು ತೀರ್ಮಾನ ಮಾಡುತ್ತೇನೆ. ನಾನು ಶೂಟಿಂಗ್ ಹೋಗಬೇಕು, ಗೀತಾ ಅವರ ಏನೇನೂ ಪ್ಲ್ಯಾನ್ ಇದೆ ಅನ್ನೋದನ್ನ ನೋಡಬೇಕು. ಗೀತಾ ನನ್ನ ಹೆಂಡ್ತಿ ಆಗಿರೋದ್ರಿಂದ್ರ ನಾನು ಜಾಸ್ತಿ ಸರ್ಫೋಟ್ ಮಾಡಬೇಕು ಎಂದು ತಿಳಿಸಿದರು.
ಸರ್ಕಾರ ಗ್ಯಾರಂಟಿ ಯೋಜನೆ ವರ್ಕೌಟ್ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅದು ನನಗೆ ಗೊತ್ತಿಲ್ಲ, ಒಟ್ಟಿನಲ್ಲಿ ನಾನು ಪ್ರಚಾರಕ್ಕೆ ಹೋಗ್ತಿದಿನಿ. ಮೋಸ್ಟಲಿ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ವರ್ಕೌಟ್ ಆಗ್ತಾವೆ. ಮಹಾದಾಯಿ ಹೋರಾಟದಲ್ಲಿ ನೂರರಷ್ಟು ನಟರು ಬರ್ತಾರೆ, ಈ ಬಾರಿ ಎಲ್ಲರೂ ಬರ್ತಾರೆ ನಾನೇ ಕರೆದುಕೊಂಡು ಬರ್ತಿನಿ. ಟೈಮ್ ಇದ್ದರೆ ಈ ಭಾಗದಲ್ಲಿ ಚುನಾವಣೆ ಪ್ರಚಾರಕ್ಕೆ ಬರ್ತಿನಿ ಎಂದು ಶಿವಣ್ಣ ಹೇಳಿದರು.
ಇನ್ನೂ ಬೆಳಗಾವಿಗೂ ಡಾ. ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಈ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ನಟ ಡಾ. ಶಿವರಾಜಕುಮಾರ ಹೇಳಿದರು. ಕರಟಕ ದಮನಕ ಸಿನಿಮಾವನ್ನು ಯೋಗರಾಜ ಭಟ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಭಾಷೆಯ ಸೊಗಡು, ಖ್ಯಾತ ನಟರಾದ ಪ್ರಭುದೇವ ಅವರ ಜೊತೆಗಿನ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಜನರಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ. ಕರಟಕ ದಮನಕ ಸಿನಿಮಾದಲ್ಲಿ ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಮಹತ್ವದ ಬಗ್ಗೆ ತಿಳಿಸಲಾಗಿದೆ ಎಂದರು.












Click it and Unblock the Notifications