ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ; ಚುನಾವಣೆಗೂ ಮುನ್ನ ಸಿದ್ದವಾಗ್ತಿದ್ಯಾ ಮೈತ್ರಿ ವೇದಿಕೆ!?
ಬೆಂಗಳೂರು, ಮಾರ್ಚ್28: ರಾಜ್ಯ ವಿಧಾನಸಭಾ ಚುನಾವಣಾ ವೇದಿಕೆ ಸಜ್ಜಾಗಿದದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ, ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಎಂದು ರಾಜಕೀಯ ನಾಯಕರು ಸಾಕಷ್ಟು ವಿಶ್ವಾಸದಲ್ಲಿದ್ದಾರೆ.
ಇನ್ನೂ ಈಗಾಗಲೇ, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಹಲವು ಸಮೀಕ್ಷೆಗಳನ್ನ ನಡೆಸಿದ್ದು, ತಮ್ಮ ನಿರೀಕ್ಷೆಯಂತೆ ಕ್ಷೇತ್ರಗಳನ್ನ ಗೆಲ್ಲುವಲ್ಲಿ ವಿಫಲವಾಘಿದ್ದು, ಈ ಬಾರಿಯೂ ರಾಜ್ಯದಲ್ಲಿ ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ರಾಜಕೀಯ ಪಕ್ಷಗಳಿಗೆ ಈಗಾಗಲೇ ಸರ್ವೆಯಿಂದಲೇ ಉತ್ತರ ಸಿಕ್ಕಿದ್ದು, ಹಲವು ತಂತ್ರಗಾರಿಕೆಯ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿವೆ.

ಇತ್ತ 2023 ರ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಅತಂತ್ರವಾಗಿಲಿದೆ ಎಂದು ರಾಜಕೀಯ ವಿಶ್ಲೆಷಕರು ಹಾಗೂ ಸರ್ವೆಯಿಂದ ತಿಳಿದು ಬಂದಿದೆ ಎನ್ನಲಾಗಿದ್ದು, ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ದೊಡ್ಡ ಮಟ್ಟದ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ಥಳೀಯ ಮಟ್ಟದ ನಾಯಕರು ಲಘುವಾಗಿ ಮಾತನಾಡಿದ್ರು ನಾನು ದೊಡ್ಡ ಮಟ್ಟದ ನಾಯಕರು ಸಂಪರ್ಕದಲ್ಲಿದ್ದೇನೆ, ಕ್ಯಾಷ್ಯುಲ್ ಚರ್ಚೆಯಲ್ಲಿದ್ದೇವೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನನ್ನ ಗುರಿ ಮುಟ್ಟುವವರೆಗೂ ನಾನು ಬಿಡುವುದಿಲ್ಲ, 123 ಗುರಿ ಮುಟ್ಟುವವರೆಗೂ ಈ ಬಾರಿ ಎಚ್ಚರ ತಪ್ಪಲ್ಲ. ಕೊನೆ ದಿನದವರೆಗೂ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಅನೇಕ ಜನ ಬಂದು ಚರ್ಚೆ ಮಾಡ್ತಾರೆ. ರಾಜ್ಯದ ನಾಯಕರು 140 ಸೀಟು ಗೆಲ್ಲೋದು ಬೇರೆ. ಆದರೆ ರಾಷ್ಟ್ರದ ನಾಯಕರ ಪರಿಸ್ಥಿತಿ ಏನು ಇದೆ ಅಂತ ನನಗೆ ಗೊತ್ತಿದೆ. ಎರಡು ಪಕ್ಷಗಳು 75 ಸ್ಥಾನ ಕ್ರಾಸ್ ಮಾಡಲ್ಲ ಅಂತ ಇವತ್ತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದರು.
ಜೆಡಿಎಸ್ ಪಕ್ಷವನ್ನ ಮುಗಿಸಿದ್ದೇವೆ ಅಂತಾರೆ. 140-150 ಅಂತ ಇಬ್ಬರು ಹೇಳ್ತಿದ್ದಾರೆ. ಒಳಗೆ ಬೇರೆಯದ್ದೇ ಇದೆ. ನನ್ನ ಗುರಿ 123 ಅದರ ಗುರಿ ಇಟ್ಟುಕೊಂಡು ನಾವು ಹೋಗ್ತಿದ್ದೇವೆ. ಅದನ್ನ ಸಾಧಿಸುತ್ತೇವೆ. ಏಪ್ರಿಲ್ 10ವರೆಗೆ ಪಂಚರತ್ನ ಯಾತ್ರೆ ಮುಂದುವರಿಯುತ್ತೆ. 123 ಗುರಿ ಮುಟ್ಟಿಸೋಕೆ ಜನ ತೀರ್ಮಾನ ಮಾಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್-ಬಿಜೆಪಿ ಏನೇ ಮಾತಾಡಬಹುದು. ಅದರೆ ಕೇಂದ್ರದ ನಾಯಕರು ನಮ್ಮ ಬಗ್ಗೆ ಗೊತ್ತಿದೆ. ಹಾಗೆ ಸುಮ್ಮನೆ ಚರ್ಚೆ ಮಾಡಿದ್ದೇವೆ ಅಷ್ಟೆ. ಯಾರ ಜೊತೆ ಮಾಡಿದ್ದೇವೆ ಅಂತ ಬೇಕಿಲ್ಲ. ಜೆಡಿಎಸ್ ಬೆಳವಣಿಗೆ ಎರಡು ಪಕ್ಷಕ್ಕೆ ಆತಂಕ ಉಂಟು ಮಾಡಿದೆ. ತಳಮಳ ಉಂಟು ಮಾಡಿದೆ ಎಂದು ಮೈತ್ರಿಯ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ವಿಚಾರದ ಕುರಿತು ಮಾತನಾಡಿ, ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಇದರಲ್ಲಿ ಯಾರ ಪಾತ್ರ ಇದೆ. ಯಾರು ಕಲ್ಲು ಹೊಡೆಸಿದ್ರು ಇದು ನನಗೆ ಸಂಬಂಧ ಇಲ್ಲ. ಇಂತಹ ವಾತಾವರಣ ಕ್ರಿಯೇಟ್ ಮಾಡಿರೋರು ಬಿಜೆಪಿ ಅವರು. ಬಿಜೆಪಿ ಅವರು ಇದನ್ನ ಸರಿಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇನ್ನೂ ಬಿಜೆಪಿ ಜೊತೆ ಜೆಡಿಎಸ್ 2018 ರಲ್ಲಿ ಚುನಾವಣಾ ಪೂರ್ವ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಖಾಸಗಿ ಸುದ್ದಿಯ ಸಂದರ್ಶನದ ವೇಳೆ ಸಿ.ಪಿ ಯೋಗೇಶ್ವರ್ ಹೇಳಿಕೆ ಕುರಿತು ಮಾತನಾಡಿ, ಯಾರು ಯೋಗೇಶ್ವರ್? ಈತನ ಹೇಳಿಕೆಗಳಿಗೆ ನಾನ್ಯಾಕೆ ಉತ್ತರ ಕೊಡಲಿ. ನಮ್ಮದು ಒಳ ಒಪ್ಪಂದನೂ ಇಲ್ಲ, ಹೊರ ಒಪ್ಪಂದನೂ ಇಲ್ಲ, ನಮ್ಮದೇನಿದ್ರೂ ನೇರ ಒಪ್ಪಂದ. ಈ ಯೋಗೇಶ್ವರ್ ಬಗ್ಗೆ ನಾನ್ಯಾಕೆ ಮಾತಾಡಲಿ. ಅವನತ್ರ ಒಪ್ಪಂದ ಮಾಡಿಕೊಂಡಿದ್ನಾ! ತಲೆ ಇಲ್ಲದೆ ಮಾತನಾಡುವವರಿಗೆ ಉತ್ತರ ಕೊಡಲು ಹೋಗಲ್ಲ.ಚನ್ನಪಟ್ಟಣದಲ್ಲಿ ನನಗೆ ಎದುರಾಳಿಯೆ ಇಲ್ಲ ಎಂದು ಸಿ.ಪಿ ಯೋಗೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದರು.












Click it and Unblock the Notifications