ಹೈಡ್ರಾಮ : ವಿಧಾನಸೌಧಕ್ಕೆ ಪ್ರವೇಶ ನಿಷೇಧ, ಎಲ್ಲಾ ಗೇಟ್ ಬಂದ್
ಬೆಂಗಳೂರು, ಜುಲೈ 10 : ಕರ್ನಾಟಕ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪ್ರತಿಭಟನೆ ಹೈಡ್ರಾಮದಿಂದಾಗಿ ವಿಧಾನಸೌಧದ ಎಲ್ಲಾ ಗೇಟ್‌ಗಗಳನ್ನು ಬಂದ್ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಶಾಸಕರ ಡಾ.ಕೆ.ಸುಧಾಕರ್ ಅವರ ರಾಜೀನಾಮೆ ಬಳಿಕ ಬುಧವಾರ ಸಂಜೆ ಹೈಡ್ರಾಮಕ್ಕೆ ವಿಧಾನಸೌಧ ಸಾಕ್ಷಿಯಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸಿದರು.
ಬಿಜೆಪಿ ವಿಧಾನಸೌಧದಲ್ಲಿರುವ ಸಚಿವ ಕೆ.ಜೆ.ಜಾರ್ಜ್ ಕೊಠಡಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಆದ್ದರಿಂದ, ವಿಧಾನಸೌಧಕ್ಕೆ ಎಲ್ಲರ ಪ್ರವೇಶ ನಿಷೇಧಿಸಲಾಗಿದ್ದು, ಗೇಟ್‌ಗಳನ್ನು ಬಂದ್ ಮಾಡಲಾಗಿದೆ.

ವಿಧಾನಸೌಧದ ನೌಕರರು ಹೊರ ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಹಲವು ಬಿಜೆಪಿ ಶಾಸಕರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿದ್ದಾರೆ. ಸುಧಾಕರ್ ಮನವೊಲಿಸುವ ಪ್ರಯತ್ನ ಸಾಗಿದೆ.
ಕೆ.ಸುಧಾಕರ್ ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅವರನ್ನು ಸಚಿವ ಕೆ.ಜೆ.ಜಾರ್ಜ್ ಅವರ ಕೊಠಡಿಯಲ್ಲಿ ಕೂಡಿ ಹಾಕಿದರು. ಬಿಜೆಪಿ ನಾಯಕರು ಇದರ ವಿರುದ್ಧ ಪ್ರತಿಭಟನೆ ನಡೆಸಿದರು. ಆದ್ದರಿಂದ, ಹೈಡ್ರಾಮ ಆರಂಭವಾಯಿತು.












Click it and Unblock the Notifications